Header Ads
Breaking News

ಸ್ಕೂಟರ್ ಮಗುಚಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ ಪ್ರಕರಣ ಕೊಲೆ ಎಂದು ಸಾಬೀತು

ಮಂಜೇಶ್ವರ: ಶನಿವಾರ ಬೆಳಿಗ್ಗೆ ಕುಂಜತ್ತೂರು ಪದವು ರಸ್ತೆಯಲ್ಲಿ ಸಾವನ್ನಪ್ಪಿದ ಯುವಕನ ಮೃತ ದೇಹದ ಮರಣೋತ್ತರ ಪರೀಕ್ಷಾ ವರದಿಯಿಂದ ಇದೊಂದು ಕೊಲೆ ಎಂಬುದಾಗಿ ಸಾಭೀತಾಗಿದೆ.

ಕತ್ತು ಹಿಸುಕಿ ಕೊಲೆಗೈದಿರುವುದಾಗಿ ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸ್ರು ತನಿಖೆಯ ಹಾದಿಯನ್ನು ಮತ್ತಷ್ಟು ತೀವೃಗೊಳಿಸಿದ್ದಾರೆ.ಕರ್ನಾಟಕ ಗದಗ ನಿವಾಸಿ ಹನುಮಂತ (35) ಎಂಬಾತ ಕುಂಜತ್ತೂರು ಪದವು ರಸ್ತೆಯಲ್ಲಿ ಶನಿವಾರ ಮುಂಜಾನೆ ಹೊತ್ತಿಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ರಾತ್ರಿ ಸಮಯದಲ್ಲಿ ಈ ರಸ್ತೆಗಳಲ್ಲಿ ಹಲವಾರು ಅನಧಿಕೃತ ದಂಧೆಗಳು ನಡೆಯುತ್ತಿದ್ದು ಹಣವನ್ನು ದೋಚಿದ ಬಳಿಕ ದಂಧೆಯವರು ಈತನನ್ನು ಕೊಲೆಗೈದು ರಸ್ತೆ ಬದಿಯಲ್ಲಿ ಬಿಸಾಡಿರಬಹುದೇ, ಅಥವಾ ಮನೆಯಲ್ಲೇ ಕೊಲೆ ನಡೆಸಿ ಬಳಿಕ ಇಲ್ಲಿ ತಂದು ಬಿಸಾಕಿರಬಹುದೇ ಎಂಬ ಮೊದಲಾದ ಹಲವು ರೀತಿಯ ಶಂಕೆಗಳು ತಲೆ ಎತ್ತುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ರು ಹಲವರನ್ನು ವಶಕ್ಕೆ ತೆಗೆದು ತನಿಖೆಗೊಳಪಡಿಸಿ ಕೊಲೆಗೈದವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈತನ ಪತ್ನಿಯನ್ನು ಕೂಡಾ ಪೊಲೀಸ್ರು ವಶಕ್ಕೆ ತೆಗದು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *