Header Ads
Header Ads
Header Ads
Header Ads
Header Ads
Header Ads
Breaking News

ಸ್ಥಳೀಯರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು : ಕೆ. ಜಯಪ್ರಕಾಶ್ ಹೆಗ್ಡೆ ಹೇಳಿಕೆ

ಕುಂದಾಪುರ: ಸ್ಥಳೀಯರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಕೋಟ ಶ್ರೀನಿವಾಸ ಪೂಜಾರಿ ಸ್ಥಳೀಯರಾಗಿದ್ದು, ಅವರು ಉಡುಪಿ, ದಕ್ಷಿಣ ಕನ್ನಡ ಎರಡೂ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವುದರಿಂದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗೆ ಅವರನ್ನೇಉಸ್ತುವಾರಿಯನ್ನಾಗಿ ನೇಮಿಸಬೇಕಿತ್ತು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಅವರು ಹೆಮ್ಮಾಡಿ ಸಮೀಪದ ಬಾಳಿಕೆರೆಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಾ, ಅದೇ ಜಿಲ್ಲೆಯವರೇ ಉಸ್ತುವಾರಿ ಮಂತ್ರಿಗಳಾದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಪ್ರಸ್ತುತ ಉಡುಪಿ ಉಸ್ತುವಾರಿ ಸಚಿವರಿಗೆ ಗೃಹ ಖಾತೆಯಿದ್ದು ಅವರು ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆಯಬೇಕಾಗುತ್ತದೆ. ಉಸ್ತುವಾರಿ ಜವಾಬ್ದಾರಿ ದೂರದ ಜಿಲ್ಲೆಗೆ ಕೊಟ್ಟಾಗ ಕಷ್ಟವಾಗುತ್ತದೆ ಎಂದು ಜೆಪಿ ಹೆಗ್ಡೆ ಅಭಿಪ್ರಾಯಪಟ್ಟರು. ಈ ವೇಳೆಯಲ್ಲಿ ಗುಲ್ವಾಡಿ ಗ್ರಾಮಪಂಚಾಯತ್ ಸದಸ್ಯ ಸುದೀಶ್ ಶೆಟ್ಟಿ ಕರ್ಕಿ, ನಾಗರಾಜ್ ಗಾಣಿಗ, ರವಿ ಗಾಣಿಗ ಕೆಂಚನೂರು ಸೋನು ಶೆಟ್ಟಿ ಮೊದಲಾದವರು ಇದ್ದರು

Related posts

Leave a Reply

Your email address will not be published. Required fields are marked *