Header Ads
Breaking News

ಸ್ನಾನಕ್ಕೆ ಹೋದ ವ್ಯಕ್ತಿ ಆಕಸ್ಮಿಕವಾಗಿ ಸಾವು : ವಿಟ್ಲದ ಪಡ್ನೂರು ಗ್ರಾಮದಲ್ಲಿ ನಡೆದ ಘಟನೆ

ಸ್ನಾನಕ್ಕೆ ಹೋದ ವ್ಯಕ್ತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲ ಪಡ್ನೂರು ಗ್ರಾಮದ ಪಿಲಿಂಜದಲ್ಲಿ ನಡೆದಿದೆ.ವಿಟ್ಲ ಪಡ್ನೂರು ಪಿಲಿಂಜ ನಿವಾಸಿ ಸೋಮಪ್ಪ ಪೂಜಾರಿ (58) ಮೃತ ವ್ಯಕ್ತಿಯಾಗಿದ್ದಾರೆ. ಬೆಳಿಗ್ಗೆ ನಿತ್ಯ ಸ್ನಾನಕ್ಕೆಂದು ತೋಟದ ಬಾವಿಯ ಸಮೀಪ ಹೋಗುವ ಇವರು ಮನೆಗೆ ಮರಳಿ ಬಾರದ ಹಿನ್ನೆಲೆ ಮನೆಯವರು ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭ ಬಾವಿಗೆ ಹಾಕಿದ ಅಡಿಕೆಮರದ ತಡೆ ತುಂಡಾಗಿ ಬಿದ್ದಿರುವುದು ಕಂಡು ಬಂದಿದೆ. ಬಾವಿಯಲ್ಲಿ ಪರಿಶೀಲನೆ ನಡೆಸಿದಾಗ ದೇಹ ಪತ್ತೆಯಾಗಿದೆ. ವಿಟ್ಲ  ಪೊಲೀಸ್ ರು ಸ್ಥಳಕ್ಕೆ ಬೇಟಿ ನೀಡಿದ್ದು, ಫ್ರೆಂಡ್ಸ್ ವಿಟ್ಲ ತಂಡ ಮೃತ ದೇಹವನ್ನು ಮೇಲೆತ್ತಿದ್ದಾರೆ. ಪುತ್ರ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಆಲಿ

Related posts

Leave a Reply

Your email address will not be published. Required fields are marked *