Header Ads
Header Ads
Breaking News

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವಿ ಹಂತದಿಂದಲೇಸಿದ್ಧತೆ ಅಗತ್ಯ: ಡಾ.ದೇವರಾಜ್

ಉಜಿರೆ: ಸಣ್ಣ ಸಣ್ಣ ವಿಷಯಗಳು ನಮ್ಮನ್ನು ಪರಿಪೂರ್ಣರನ್ನಾಗಿಸುತ್ತದೆ, ಆದರೆ ಪರಿಪೂರ್ಣ ವ್ಯಕ್ತಿತ್ವ ಎಂಬುದು ಸಣ್ಣ ವಿಷಯವಲ್ಲ ಎಂದು ದಾವಣಗೆರೆ ಜಿಲ್ಲಾ ಉಪ ಪೋಲೀಸ್ ವರಿಷ್ಠಾಧಿಕಾರಿ ಡಾ. ದೇವರಾಜ್ ತಿಳಿಸಿದರು.ಉಜಿರೆ ಶ್ರೀ. ಧ.ಮಂ. ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಬಗೆಗಿನ ಪೂರ್ವ ಸಿದ್ಧತೆಗಳ ಬಗ್ಗೆಅಂತಿಮ ಪದವಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಬಯಸುವ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಒಬ್ಬ ಪ್ರಬುದ್ಧ ಅಧಿಕಾರಿಯ ಜವಾಬ್ದಾರಿ ಕೇವಲ ವಿದ್ಯಾರ್ಥಿಗಳಿಗೆ ಉಪದೇಶ ನೀಡುವುದಲ್ಲ ಬದಲಾಗಿ ಸತತವಾಗಿ ತನ್ನನ್ನು ತಾನು ಅಭಿವೃದ್ಧಿ ಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಎಂದು ಕಿವಿಮಾತು ಹೇಳಿದರು. ಎರಡು ಗಂಟೆಗಳ ಕಾಲ ನಡೆದ ಸುದೀರ್ಘ ಸಂವಾದದಲ್ಲಿ ಇಲಾಖೆಯಲ್ಲಿನ ತಮ್ಮ ಸಾಧನೆಗಳು ಹಾಗೂ ತಾವು ಕೈಗೊಂಡ ವಿನೂತನ ಕಾರ್ಯಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಸತೀಶ್ಚಂದ್ರ, ಪ್ರಾಧ್ಯಾಪಕರು ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿ ಪೂರ್ಣೇಶ್ ನಿರ್ವಹಿಸಿದರು.

ಫೋಟೊ: ಉಜಿರೆ ಶ್ರೀ. ಧ. ಮಂ. ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿಷಯದ ಕುರಿತು ದಾವಣಗೆರೆ ಜಿಲ್ಲಾ ಉಪ ಪೋಲೀಸ್ ವರಿಷ್ಠಾಧಿಕಾರಿ ಡಾ. ದೇವರಾಜ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Related posts

Leave a Reply

Your email address will not be published. Required fields are marked *