Header Ads
Header Ads
Breaking News

ಸ್ವಸ್ಥಿಕ್ ಕನ್ಸಲ್‌ಟೆನ್ಸಿ ಸರ್ವೀಸಸ್ ವತಿಯಿಂದ ಟೈನಿ ದಿ ಟೈನರ್ ಎರಡು ದಿನದ ಕಾರ್ಯಾಗಾರ

ಮಂಗಳೂರಿನ ಸ್ವಸ್ಥಿಕ್ ಕನ್ಸಲ್‌ಟೆನ್ಸಿ ಸರ್ವೀಸಸ್ ವತಿಯಿಂದ ಟೈನಿ ದಿ ಟೈನರ್ ಎಂಬ ಎರಡು ದಿನದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ಮಂಗಳೂರಿನ ತಾಜ್ ಗೇಟ್ವೆ ಹೊಟೇಲ್‌ನಲ್ಲಿ ನಡೆಯಿತು.
ತಾಜ್ ಗೇಟ್ವೆಯಲ್ಲಿ ನಡೆದ ಕಾರ್ಯಾಗಾರವನ್ನು ಎಸ್‌ಡಿಎಮ್ ಕಾಲೇಜಿನ ಬಿಸ್‌ನೆಸ್ ಮ್ಯಾನೇಜ್‌ಮೆಂಟ್‌ನ ಪ್ರಿನ್ಸಿಪಾಲ್ ಅರುಣಾ ಪಿ ಕಾಮತ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ವಸ್ಥಿಕ್ ಕನ್ಸಲ್‌ಟೆನ್ಸಿ ಸರ್ವೀಸಸ್‌ನವರು ಒಂದು ಉತ್ತಮ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ. ಎರಡು ದಿನಗಳ ಕಾಲ ಅದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಆನಂತರ ಅಂತರರಾಷ್ಟ್ರೀಯ ಮಟ್ಟದ ತರಬೇತಿಗಾರ ಗೋಪಿನಾಥ್ ಬಾಲಚಂದ್ರನ್ ಅವರು ಟೈನಿ ದಿ ಟೈನರ್ ಬಗ್ಗೆ ಉಪಾನ್ಯಾಸ ನೀಡಿದರು. ಈ ಸಂದರ್ಭ ಕೋ ಫೆಸಿಲಿಟೇಟರ್ ವೇಣು ಜಿ., ಸ್ವಸ್ಥಿಕ್ ಕನ್ಸಲ್‌ಟೆನ್ಸಿ ಸರ್ವೀಸಸ್ ಚೇರ್‌ಮೆನ್ ಪಿ. ವಿಶ್ವೇಶ್ವರ ಭಟ್, ಸೀನಿಯರ್ ಮ್ಯಾನೇಜರ್ ಹರಿಕೃಷ್ಣ ಅಡಿಗ, ಮ್ಯಾನೇಜರ್ ಮತ್ತು ಟ್ರೈನರ್ ಸಾಗರ್ ಸಿ ರೈ, ಜೆಸಿಐ ಸೆನೆಟ್‌ನ ನಿರ್ಮೇಶ ತ್ಯಾಗಿ, ಅರವಿಂದ್ ಬಾಲಚಂದ್ರನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *