Breaking News

ಸ್ವ-ಸಹಾಯ ಗುಂಪಿನ ಆಂತರಿಕ ಸಾಲ ನಿರಾಕರಿಸಿದ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕರ ಕ್ರಮ ಖಂಡನೀಯ ರಾಜ್ಯ ರೈತ ಸಂಘದ ಹಸಿರುಸೇನೆ ಆರೋಪ

 

ವಿಟ್ಲ: ಪತಿಯ ಹೆಸರಿನ ಸಾಲವಿದೆಯೆಂದು ಪತ್ನಿಗೆ ಸ್ವ-ಸಹಾಯ ಗುಂಪಿನ ಆಂತರಿಕ ಸಾಲ ನಿರಾಕರಿಸಿರುವ ಪುತ್ತೂರು ತಾಲೂಕಿನ ಆಲಂಕಾರು ಸಿಂಡಿಕೇಟ್ ಬ್ಯಾಂಕ್ ಶಾಲಾ ಪ್ರಬಂಧಕರ ಕ್ರಮ ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಆರೋಪಿಸಿದೆ.
ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಭಾರತಿ ಅವರ ಪತಿ ಈಶ್ವರ ಗೌಡ ಹಾಗೂ ರೈತ ಸಂಘದ ಶ್ರೀಧರ್ ಅವರು ಭಾರತಿ ಹೆಸರಿನಲ್ಲಿದ್ದ ಸಾಲಕ್ಕೂ, ಸ್ತ್ರೀ ಶಕ್ತಿ ಗುಂಪಿನ ಆಂತರಿಕ ಸಾಲಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಪತ್ನಿ ಹೈನುಗಾರಿಕೆಯ ಉದ್ದೇಶದಿಂದ ಆಂತರಿಕ ಸಾಲ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದು, ಶಾಕಾಧಿಕಾರಿಯವರು ಬ್ಯಾಂಕ್ ನಿಯಮವನ್ನು ಉಲ್ಲಂಘಿಸಿ, ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಬಡ ಕುಟುಂಬಕ್ಕೆ ಆಧಾರವಾಗುವ ಹೈನು ಕೃಷಿ ನಡೆಸುವಲ್ಲಿ ಪರೋಕ್ಷವಾಗಿ ತಡೆಯಾಗಿದ್ದಾರೆ ಎಂದು ಆರೋಪಿಸಿರುವ ಸಂಘ ಈ ಬಗ್ಗೆ ಬ್ಯಾಂಕಿನ ಕೇಂದ್ರ ಕಚೇರಿಗೆ, ಜಿಲ್ಲಾಧಿಕಾರಿಯವರಿಗೆ, ಮಹಿಳಾ ಕಲ್ಯಾಣ ಮಕ್ಕಳ ಕಲ್ಯಾಣ ಸಚಿವರಿಗೆ ದೂರು ನೀಡಲಾಗುವುದು. ಬಳಿಕ ನ್ಯಾಯಕ್ಕಾಗಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply