Header Ads
Breaking News

ಹಡಿಲು ಬಿದ್ದ ದೇವಸ್ಥಾನದ ಗದ್ದೆಯನ್ನು ನಾಟಿ ಮಾಡಿದ ಗ್ರಾಮಸ್ಥರು

ಬಂಟ್ವಾಳ: ಹಡಿಲು ಬಿದ್ದ ದೇವಸ್ಥಾನ ವೊಂದರ ಗದ್ದೆಗೆ ಕಾಯಕಲ್ಪ ನೀಡಿ ಭತ್ತದ ಕೃಷಿ ಮಾಡಿ ದೇವಸ್ಥಾನಕ್ಕೆ ನೀಡುವ ಸಂಕಲ್ಪಕ್ಕೆ ನೆಟ್ಲದ ಗ್ರಾಮಸ್ಥರಿಂದ ಇಂದು ಆಗಸ್ಟ್ 2 ರಂದು ಆದಿತ್ಯವಾರ ಹಡಿಲು ಗದ್ದೆಯಲ್ಲಿ ಉಳುಮೆ ಮಾಡಿ ನೇಜಿ ನೆಟ್ಟು ಚಾಲನೆ ನೀಡಲಾಯಿತು. ಆರ್.ಎಸ್.ಎಸ್.ಪ್ರಮುಖ ರಾದ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಸ್ವತಃ ಗದ್ದೆಗಿಳಿದು ನೇಜಿ ನೆಟ್ಟು ಚಾಲನೆ ನೀಡಿದ್ದಲ್ಲದೆ ಗ್ರಾಮಸ್ಥರ ಉತ್ತಮ ಕಾರ್ಯವನ್ನು ಶ್ಲಾಘಿಸಿದರು.

ಕೋವಿಡ್ ಸಂಕಷ್ಟ ದೇವಸ್ಥಾನ ಗಳಿಗೂ ತಟ್ಟಿದೆ. ಕೋವಿಡ್ ನಿಂದ ದೇವಸ್ಥಾನ ಗಳ ಆದಾಯಕ್ಕೂ ಕುತ್ತು ಬಿದ್ದಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಕ್ಕೆ ಪ್ರಯೋಜನ ವಾಗಲಿ ಎಂದು ಗ್ರಾಮಸ್ಥರು ಒಟ್ಟು ಸೇರಿ ಹಡಿಲು ಬಿದ್ದ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿ ಅದರಲ್ಲಿ ಬೆಳೆದ ಭತ್ತವನ್ನು ದೇವಸ್ಥಾನಕ್ಕೆ ನೀಡುವ ಮಾದರಿ ಕೆಲಸವನ್ನು ನೆಟ್ಲದಲ್ಲಿ ಮಾಡಿದ್ದಾರೆ.ಇತಿಹಾಸ ಪ್ರಸಿದ್ಧ ಸಾವಿರ ಸೀಮೆಯ ನಿಟಿಲಾಕ್ಷ ಸದಾಶಿವ ದೇವಸ್ಥಾನ ನೆಟ್ಲ ಕಲ್ಲಡ್ಕ, ಈ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು ಎರಡು ಎಕರೆ ಗದ್ದೆ ಕಳೆದ ಹತ್ತು ವರ್ಷಗಳಿಂದ ಹಡಿಲು ಬಿದ್ದಿತ್ತು.ಈ ಬಾರಿ ಕೋವಿಡ್ ಸಂಕಷ್ಟದ ದಿನಗಳಲ್ಲಿ ದೇವಸ್ಥಾನ ಕ್ಕೂ ಸಂಕಷ್ಟದ ದಿನಗಳು. ಹಾಗಾಗಿ ದೇವಸ್ಥಾನ ಕ್ಕೆ ಆದಾಯದ ಹಿನ್ನೆಲೆಯಲ್ಲಿ ಹಡಿಲು ಬಿದ್ದಿರುವ ಗದ್ದೆಯಲ್ಲಿ ಭತ್ತದ ಕೃಷಿ ಮಾಡುವ ಬಗ್ಗೆ ಆರ್.ಎಸ್.ಎಸ್.ಪ್ರಮುಖ ಕಲ್ಲಡ್ಕ ಡಾ। ಪ್ರಭಾಕರ್ ಭಟ್ ಅವರ ಮಾರ್ಗದರ್ಶನ ದಲ್ಲಿ ಗ್ರಾಮಸ್ಥರು ಸೇರಿ ಶ್ರಮದಾನದ ಮೂಲಕ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದರು.

ದೇವಸ್ಥಾನ ಪ್ರಧಾನ ಅರ್ಚಕರಾದ ವಿಜೇತ್ ಹೊಳ್ಳ ಅವರು ನೇಜಿ ನೆಡುವ ಮೊದಲು ವಿಶೇಷ ಪ್ರಾರ್ಥನೆಯನ್ನು ಗದ್ದೆಯಲ್ಲಿ ಮಾಡಿದರು.ಈ ಗದ್ದೆಗೆ ಗ್ರಾಮಸ್ಥರಾದ ಕಿರಣ್ ನೆಟ್ಲ ಅವರು ನೀರು ಒದಗಿಸಲು ಸಹಕಾರ ನೀಡಿದ್ದಾರೆ. ಕುಮಾರ್ ಸ್ವಾಮಿ ಕೃಷಿಕರು. ದೇವಸ್ಥಾನದ ಮ್ಯಾನೇಜರ್, ಮಾದವ ಭಟ್, ನವೀನ್ ಶೆಟ್ಟಿ ಚನಿಲ, ಅನಿಲ್ ದೇವಾಡಿಗ, ರವಿ ದೇವಾಡಿಗ, ವಿನಯ ಗಟ್ಟಿ, ಪ್ರಸನ್ನ ಕುಮಾರ್, ಐತ್ತಪ್ಪ ನಾಯ್ಕ್, ಜಗನ್ನಾಥ ಕುಲಾಲ, ನಾಗೇಶ ಎನ್, ಮಾದವ ಗಟ್ಟಿ, ಇಂದಿರಾ, ಭಾಗ್ಯ, ಸುಮತಿ , ಪುಷ್ಪ, ರತ್ನಾವತಿ ಮತ್ತು ಊರವರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *