Header Ads
Breaking News

ಹಲವು ವರ್ಷಗಳಿಂದ ಡಾಮರು ಕಾಣದ ಕೊಡಿಯಾಲ ರಸ್ತೆ : ದುರಸ್ತಿಗೆ ಆಗ್ರಹಿಸಿ ಜೂ.24ರಂದು ಬೃಹತ್ ಪ್ರತಿಭಟನೆ

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮುಖ್ಯ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು, ಡಾಮರು ಕಾಣದೇ ಹಲವು ವರ್ಷಗಳಾಗಿವೆ. ಈ ರಸ್ತೆಯನ್ನು ಕೂಡಲೇ ಸರಿಪಡಿಸಬೇಕು. ಜೂನ್ 24ರ ಒಳಗೆ ದುರಸ್ತಿ ಕಾರ್ಯ ಆರಂಭಗೊಳ್ಳದಿದ್ದರೆ 24 ರಂದು ಪಂಜಿಗಾರು ಬಳಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್ ಹೇಳಿದ್ದಾರೆ.

ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕೊಡಿಯಾಲ ಗ್ರಾಮದ ಮುಖ್ಯರಸ್ತೆ ಹೊಂಡಗುಂಡಿಗಳಿಂದ ಕೂಡಿದೆ. ಈ ರಸ್ತೆ ಪಂಜಿಗಾರಿನಿಂದ 2ಕಿಮೀ ದೂರದಲ್ಲಿರುವ ದರ್ಖಾಸ್ತು ಎಂಬಲ್ಲಿಯ ತನಕ ಈಗಗಲೇ ಡಾಮರಿಕರಣವಾಗಿದ್ದು, ದರ್ಖಾಸ್ತುನಿಂದ ಸುಮಾರು 4ಕಿ.ಮೀ ದೂರದಲ್ಲಿರುವ ಕೊಡಿಯಾಲ, ಬಾಳಿಲ, ಮತ್ತು ಮುರುಳ್ಯ ವ್ಯಾಪ್ತಿಗೆ ಒಳಪಟ್ಟ ಗ್ರಾ.ಪಂ ಮೂಲಕ ಮುರುಳ್ಯ, ಬೊಬ್ಬೆಕೇರಿ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಆಯೋಗ್ಯವಾಗಿದೆ. ಈ ರಸ್ತೆಯು ಕಾಣಿಯೂರು ಮತ್ತು ಎಡಮಂಗಲ ರೈಲ್ವೇ ನಿಲ್ದಾಣಕ್ಕೂ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯಲ್ಲಿ ರಿಕ್ಷಾ ಚಾಲಕರು ಬಾಡಿಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಕಷ್ಟವಾಗುತ್ತಿದೆ. ಈ ರಸ್ತೆಯ ಹೊಂಡಗಳು ಗ್ರಾಮದ ಜನಸಂಖ್ಯೆಯಷ್ಟೆ ಇದ್ದು ಇಂಗುಗುಂಡಿಗಳಾಗಿವೆ. ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇದಕ್ಕಾಗಿ ನಾವು ಹಲವು ವರ್ಷಗಳಿಂದ ಸಂಭಂಧಿಸಿದ ಇಲಾಖೆಗಳುನ್ನು, ಜನಪ್ರತಿನಿಧಿಗಳನ್ನು ಒತ್ತಾಯಿಸಿಕೊಂಡು ಬಂದಿದ್ದೇವೆ. ಆದರೂ ನಮ್ಮ ಬೇಡಿಕೆ ಈಡೇರಿಲ್ಲ. ಇದಕ್ಕಾಗಿ ಜೂ. 24 ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾಣ ಮಾಡಿದ್ದೇವೆ. ಪ್ರತಿಭಟನೆಯ ಸ್ಥಳಕ್ಕೆ ಅಧಿಕಾರಿಗಳು ಬಂದು ಭರವಸೆ ನೀಡಿ ಹೋದರೆ ಸಾಲದು ನಮಗೆ ಲಿಖಿತವಾಗಿ ಬರೆದು ಭರವಸೆ ನೀಡಬೇಕು ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಸುಂದರ ಪಾಟಾಜೆ, ಪ್ರರ್ಧಾನ ಕಾರ್ಯದರ್ಶಿ ಕೆ.ಕೆ.ನಾಯ್ಕ್, ಪರಮೇಶ್ವರ , ಅಬ್ದುಲ್ ನಾಸೀರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *