Header Ads
Header Ads
Breaking News

ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯ ಕಸಕ್ಕೆ ಕೊನೆಗೂ ಮುಕ್ತಿ :ದಾನಿಗಳ ಸಹಾಯದಿಂದ ಸಿ.ಸಿ.ಟಿವಿ ಅಳವಡಿಕೆ

ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಸಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ವಿದ್ಯಾವಿನಾಯಕ ಯುವಕಮಂಡಲ ಮುಂದಾಳತ್ವದಲ್ಲಿ ತ್ಯಾಜ್ಯ ತೆಗೆದು ಸ್ವಚ್ಚಗೊಳಿಸಿದ್ದು, ದಾನಿಗಳ ಸಹಾಯದಿಂದ ಸಿ.ಸಿ.ಟಿವಿಯನ್ನು ಅಳವಡಿಸಲಾಗಿದೆ.

ಭಾರತ ಸರಕಾರ, ನೆಹರು ಯುವ ಕೇಂದ್ರ ಮಂಗಳೂರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು. ಅಮಲ ಭಾರತ, ಅಮೃತಾನಂದಮಯಿ ಮಠ ಬೋಳೂರು, ಮಂಗಳೂರು ಮತ್ತು ಎಂ.ಆರ್.ಪಿ.ಎಲ್ ಮಂಗಳೂರು ಇವರ ಸಹಭಾಗಿತ್ವದಲ್ಲಿ, ಕನಾ೯ಟಕ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ವಿದ್ಯಾವಿನಾಯಕ ಯುವಕಮಂಡಲ, ಶ್ರೀ ವಿದ್ಯಾವಿನಾಯಕ ರಜತಾಸೇವಾ ಟ್ರಸ್ಟ್ , ಯುವತಿ ಮತ್ತು ಮಹಿಳಾಮಂಡಲ, ಪೂಜಾ ಪ್ರೆಂಡ್ಸ್ ಸಾಯಿ ಸ್ಟೀಲ್ ಹಳೆಯಂಗಡಿ, ಓಂ ಕ್ರಿಕೇಟರ್ಸ್ ಪಾವಂಜೆ, ಆದಿಜನಾರ್ದನ ಸಿಮಂತೂರು ಇದರ ಸಂಯುಕ್ತ ಆಶ್ರಯದಲ್ಲಿ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬದಿಯ ತ್ಯಾಜ್ಯವನ್ನು ಬ್ರಹತ್ ಸ್ವಚ್ಚತಾ ಅಭಿಯಾನ ಮೂಲಕ ತೆಗೆದು ಸ್ವಚ್ಚಗೊಳಿಸಲಾಯಿತು ಅಲ್ಲದೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಚಗೊಳಿಸಲಾಯಿತು. ಈ ಬ್ರಹತ್ ಸ್ವಚ್ಚತಾ ಅಭಿಯಾನಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮೆಸ್ಕಂ ಇಲಾಖೆ ಮಾತ್ರವಲ್ಲದೆ ದಾನಿಗಳು ಕೈಜೋಡಿಸಿದ್ದು ಸುಮಾರು 1೦೦ ಕ್ಕೂ ಅಧಿಕ ಮಂದಿ ಬಾಗವಹಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್, ಉದ್ಯಮಿ ದೇವದಾಸ್ ಕುಳಾಯಿ, ಪೂಜಾ ಪ್ರೆಂಡ್ಸ್ ನ ಜೈಕೃಷ್ಣ ಕೋಟ್ಯಾನ್, ವಿಧ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಅಮೀನ್, ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು, ಅಮಲ ಭಾರತ ಇದರ ಚಂದ್ರಹಾಸ್ ಸುವರ್ಣ, ಅರುಣ್ ಭಂಡಾರಿ ಮಾನಂಪಾಡಿ ಮತ್ತಿತರರು ಪಾಲ್ಗೊಂಡರು. ನಂತರ ಮಾತನಡಿದ ತಾಲೂಕು ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ತ್ಯಾಜ್ಯಕ್ಕೆ ಎಸೆಯುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಇಲ್ಲಿನ ತ್ಯಾಜ್ಯದ ಬಗ್ಗೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ಚರ್ಚೆ ನಡೆದಿದೆ, ತ್ಯಾಜ್ಯ ರಾಶಿಯಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದೆ, ಇದಕ್ಕೆ ಮುಕ್ತಿ ನೀಡುದಕ್ಕಾಗಿ, ಸ್ಥಳೀಯ ಉದ್ಯಮಿ ದಾನಿಗಳಾದ ದೇವದಾಸ್ ಕುಳಾಯಿ ಸಿ.ಸಿ ಕ್ಯಾಮರ ಒದಗಿಸಿದ್ದು, ಇದನ್ನು ಅಳವಡಿಸಲಾಗಿದೆ, ಸ್ವಚ್ಚತೆಯ ಬಗ್ಗೆ ಎರಡು ಬ್ಯಾನರ್ ಅಳವಡಿಸಲಾಗಿದ್ದು, ಮುಂದಿನ ದಿನದಲ್ಲಿ ಈ ಪ್ರದೇಶದಲ್ಲಿ ತ್ಯಾಜ್ಯ ಎಸೆಯುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

Related posts

Leave a Reply

Your email address will not be published. Required fields are marked *