Header Ads
Header Ads
Breaking News

ಹವಾ ಎಬ್ಬಿಸಲು ತಯಾರಾಗಿದ್ದಾನೆ ಜಬರ್ ದಸ್ತ್ ಶಂಕರ…ಪ್ರೀಮಿಯರ್ ಶೋ ನೋಡಿ ಪ್ರೇಕ್ಷಕರು ಫುಲ್ ಫಿದಾ

 ತುಳು ಚಿತ್ರರಂಗದಲ್ಲಿ ತುಳು ಸಿನಿಮಾಗಳ ಅಬ್ಬರ ಇತ್ತೀಚಿಗೆ ತುಸು ಜೋರಾಗಿಯೇ ನಡಿಯುತ್ತಿದೆ.. ಒಂದು ಚಿತ್ರದ ನಂತ್ರ ಮತ್ತೊಂದರಂತೆ ಹಿಟ್ ಚಿತ್ರಗಳು ತೆರೆಗೆ ಅಪ್ಪಳಿಸುತ್ತಿದೆ. ಈ ವಾರ ಮಸ್ತ್ ಆಗಿ ನಕ್ಕು ನಗಿಸಲು ತೆರೆಗೆ ಬರ್ತಾ ಇದೆ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಜಬರ್‌ದಸ್ತ್ ಶಂಕರ.. ಆ ಜಬರ್ ದಸ್ತ್ ಶಂಕರನ ಹವಾ ಹೇಗಿದೆ ಗೊತ್ತಾ?…ಇಲ್ಲಿದೆ ನೋಡಿ..

 ಕೋಸ್ಟಲ್‌ವುಡ್‌ನಲ್ಲಿ ಇದೀಗ ಚಿತ್ರಗಳ ಸಂತೆ ಶುರುವಾಗಿದೆ. ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಚಿತ್ರಗಳು ತೆರೆಗೆ ಬರುತ್ತಿದೆ. ಇದೀಗ ಜಬರ್‌ದಸ್ತ್ ಶಂಕರನ ಸರದಿ. ಈ ವಾರ ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸಲು ಬರುತ್ತಿದ್ದಾನೆ ಜಬರ್‌ದಸ್ತ್ ಶಂಕರ. ಇದೇ ನವೆಂಬರ್ 8ರಂದು ಚಿತ್ರವು ಕರಾವಳಿಯಾದ್ಯಂತ ತೆರೆಕಾಣಲಿದ್ದು, ಗ್ರ್ಯಾಂಡ್ ಪ್ರೀಮಿಯರ್ ಶೋ ಮಂಗಳೂರಿನಲ್ಲಿ ನಡೆದಿದೆ. ಫಸ್ಟ್ ಶೋನಲ್ಲೇ ಚಿತ್ರವು ಸಿನಿಪ್ರಿಯರ ಮನಗೆದ್ದಿದೆ.

 ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ನಡೆದ ವಿಐಪಿ ಗ್ರ್ಯಾಂಡ್ ಶೋಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತ್ತು. ತುಳು ಚಲನಚಿತ್ರ ರಂಗದ ಗಣ್ಯರು ಚಿತ್ರಪ್ರದರ್ಶನಕ್ಕೆ ಚಾಲನೆ ನೀಡಿ ಶುಭಹಾರೈಸಿದರು. “ಜಬರ್ದಸ್ತ್ ಶಂಕರ’ನ ಮೊದಲ ಪ್ರೀಮಿಯರ್ ಶೋ ಜನಜಂಗುಳಿಯಿಂದ ಕೂಡಿತ್ತು.

 ಕೋಸ್ಟಲ್‌ವುಡ್‌ನ ಎವರ್‌ಗ್ರೀನ್ ದೇವದಾಸ್ ಕಾಪಿಕಾಡ್ ನಿರ್ದೇಶನದ “ಜಬರ್ದಸ್ತ್ ಶಂಕರ’ ಸಿನೆಮಾವು ಹೊಸ ಪರಿಕಲ್ಪನೆಯೊಂದಿಗೆ ತೆರೆಗೆ ಬರಲು ಸಜ್ಜಾಗಿದೆ. ಡೈನಾಮಿಕ್ ಹೀರೋ ಆಗಿ ಗುರುತಿಸಿಕೊಂಡಿರುವ ಅರ್ಜುನ್ ಕಾಪಿಕಾಡ್ ಅವರ ಡೈನಾಮಿಕ್ ಡೈಲಾಗ್‌ಗಳಂತೂ ಸೂಪರೋ ಸೂಪರ್. ಇನ್ನು ಚಿತ್ರದಲ್ಲಿ ಕಾಮಿಡಿಯಂತೂ ಅದ್ಭುತ. ಚಿತ್ರದುದ್ದಕ್ಕೂ ಹೊಟ್ಟೆ ಹುಣ್ಣಾಗುವಂತೆ ನಗಿಸ್ತಾ ಇರ್‍ತಾರೆ ಸಾಯಿಕೃಷ್ಣ.

 ಇನ್ನು ಈ ಸಿನಿಮಾದ ಕುರಿತಾಗಿ ನೋಡುವುದಾದ್ರೆ ಸಿನಿಮಾದ ಚಿತ್ರೀಕರಣವನ್ನು ಮಂಗಳೂರಿನ ಸುತ್ತಮುತ್ತಲಿನಲ್ಲೇ ನಡೆದಿದೆ. ಇರುವೈಲ್, ಉಳಾಯಿಬೆಟ್ಟು, ಎಡಪದವು, ಬೆಂಜನಪದವು, ಕೊಡ್ಮಾಣ್, ಮೆಲ್ಕಾರ್, ಪಣೋಲಿಬೈಲ್ ಬಳಿಯ ಕೇಶವನಗರ ಮೊದಲಾದ ಸ್ಥಳಗಳು ಸುಂದರವಾಗಿ ಚಿತ್ರದಲ್ಲಿ ಸೆರೆಯಾಗಿವೆ. ಚಿತ್ರದ ಮತ್ತೊಂದು ವಿಶೇಷವೆಂದರೆ ೩೦೦ಕ್ಕೂ ಅಧಿಕ ನೃತ್ಯ ಪಟುಗಳು ಒಂದು ಹಾಡಿನಲ್ಲಿ ಸ್ಟೇಪ್ ಹಾಕಿರುವುದು. ಚೆಂಡೆ, ತಾಸೆ ಹೀಗೆ ಮೊದಲಾದ ಜಾನಪದ ಪ್ರಕರಗಳನ್ನು ಚಿತ್ರದಲ್ಲಿ ಬಳಸುವುದರ ಜೊತೆಗೆ ಮಾಸ್ ಆದಂತಹ ಆಕ್ಷನ್ ಸಿನಿಮಾದಲ್ಲಿದೆ. ಹಾಗಿದ್ರೆ ಫಸ್ಟ್ ಶೋ ನೋಡಿದ ಪ್ರೇಕ್ಷಕರ ರಿಯ್ಯಾಕ್ಷನ್ ಹೀಗಿತ್ತು ನೊಡಿ…

ವಿಭಿನ್ನ ಚಿತ್ರಕಥೆಯೊಂದಿಗೆ ಸಾಹಿತ್ಯ, ನಿರ್ದೇಶನ ಎಲ್ಲವನ್ನು ಒದಗಿಸಿದ್ದಾರೆ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್. ಸುಜೀತ್ ನಾಯಕ್ ಅವರ ಸಂಕಲನ, ಮಣಿಕಾಂತ್ ಕದ್ರಿ ಅವರ ಸಂಗೀತ ಈ ಚಿತ್ರಕ್ಕಿದ್ರೆ, ಜಲನಿಧಿ ಫಿಲಮ್ಸ್ ಬ್ಯಾನರ್‌ನಡಿ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್ ಹಾಗೂ ರಾಜೇಶ್ ಕುಡ್ಲ ಈ ಸಿನೆಮಾ ನಿರ್ಮಾಣ ಮಾಡಿದ್ದಾರೆ. ಜಬರ್‌ದಸ್ತ್ ಶಂಕರ ಸಿನೆಮಾದ ತಾರಾಗಣದಲ್ಲಿ ನೀತಾ ಅಶೋಕ್, ರಾಶಿ, ಗೋಪಿನಾಥ್ ಭಟ್, ಚೇತನ್ ರೈ, ಸುನೀಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಮಲ್ಲೂರು, ಅರುಣ್ ಬಿ.ಸಿ.ರೋಡ್, ಮಿಮಿಕ್ರಿ ಶರಣ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಚಂದ್ರಹಾಸ್ ಮಾಣಿ, ಹರೀಶ್ ಆಲದಪದವು, ಗಾಳಿಪಟ ಹರೀಶ್ ಮುಂತಾದವರು ಸಿನೆಮಾದಲ್ಲಿದ್ದಾರೆ. ಒಟ್ಟಿನಲ್ಲಿ ಈ ವಾರ ಮತ್ತೊಂದು ಸೂಪರ್‌ಹಿಟ್ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು ಜಬರ್‌ದಸ್ತ್ ಶಂಕರನನ್ನು ಸ್ವಾಗತಿಸಲು ತುಳುನಾಡಿನ ಜನತೆ ಕಾದು ಕುಳಿತಿದ್ದಾರೆ.

Related posts

Leave a Reply

Your email address will not be published. Required fields are marked *