Header Ads
Header Ads
Breaking News

ಹಸಿರು ಅತಿಕ್ರಮಣದಿಂದ ಭವಿಷ್ಯದಲ್ಲಿ ಅಪಾಯ : ಡಾ.ಶ್ರೀಪತಿ ಕಲ್ಲೂರಾಯ ಹೇಳಿದರು

ಉಜಿರೆ,: ಭೂಮಿಯಲ್ಲಿನ ಹಸಿರು ಪ್ರದೇಶ ಅತಿಕ್ರಮಣ ಪ್ರಮಾಣ ವ್ಯಾಪಕವಾಗಿ ಮುಂದುವರೆದರೆ ನೈಸರ್ಗಿಕ ಆಮ್ಲಜನಕವನ್ನು ದುಡ್ಡುಕೊಟ್ಟು ಖರೀದಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಹಣಕಾಸು ಅಧಿಕಾರಿ ಡಾ.ಶ್ರೀಪತಿ ಕಲ್ಲೂರಾಯ ಹೇಳಿದರು.ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗ ಬುಧವಾರ ಆಯೋಜಿಸಿದ್ದ ಮದರ್ ಸೈನ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಬದುಕಿನ ಮೂಲವೇ ಭೂಮಿ,ಇಂಥ ಭೂಮಿಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯಕರ್ತವ್ಯ ಎಂದು ಹೇಳಿದರು. ಅರಣ್ಯಗಳನ್ನು ಮನುಷ್ಯರು ಅಂತಃಕರಣದ ದೃಷ್ಟಿಯಲ್ಲಿ ನೋಡಬೇಕು. ಅಭಿವೃದ್ಧಿಯ ಹೆಸರಿನಲಿ ಅರಣ್ಯ ನಾಶವಾಗುತ್ತಿದೆ. ಈ ಕಾರಣಕ್ಕಾಗಿಯೇ ವನ್ಯಜೀವಿಗಳು ಆಹಾರ ಅರಸಿ ಜನವಸತಿ ಪ್ರದೇಶಗಳಿಗೆ ಧಾವಿಸುತ್ತಿವೆ. ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಇತ್ತೀಚಿನ ಸಂಘರ್ಷಕ್ಕೆ ಅರಣ್ಯಭೂಮಿಯ ಒತ್ತುವರಿಯೇ ಕಾರಣ ಎಂದು ಹೇಳಿದರು.

ಕೊಡು-ಕೊಳ್ಳುವಿಕೆ ವ್ಯವಸ್ಥೆಯಿಂದ ಪ್ರಾರಂಭವಾದ ಆರ್ಥಿಕ ಪರಿಕಲ್ಪನೆ ಇಂದು ಜನಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಕೈಗಾರಿಕಾ ಕ್ರಾಂತಿ, ಕೃಷಿ ಕ್ರಾಂತಿ, ನಗರೀಕರಣ ಪರಿಸರನಾಶಕ್ಕೆ ಕಾರಣವಾಗುತ್ತಿವೆ. ಗ್ರಾಮ, ನಗರಗಳಲ್ಲಿ ನೈಸರ್ಗಿಕವಾಗಿ ದೊರೆಯುತಿದ್ದ ನೀರು ಇಂದು ವ್ಯಾವಹಾರಿಕವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಅರ್ಥಶಾಸ್ರ್ತ ವಿಭಾಗದ ಮುಖ್ಯಸ್ಥಡಾ.ಪಿ.ಕೆ. ಬಾಲಕೃಷ್ಣ,ಜಯಂತ ನಾಯಕ್, ಉಪನ್ಯಾಸಕರುಉಪಸ್ಥಿತರಿದ್ದರು.ವಿಭಾಗದಡಾ. ಗಣರಾಜ್‍ಸ್ವಾಗತಿಸಿ, ಅರ್ಥಶಾಸ್ತ್ರ ಸ್ನಾತಕೋತ್ತರಅಧ್ಯಯನದಕೇಂದ್ರದ ವಿದ್ಯಾರ್ಥಿಸಚಿನ್‍ಕುಮಾರ್‍ವಂದಿಸಿ ವಿದ್ಯಾರ್ಥಿ ಭವ್ಯಶ್ರೀ ನಿರೂಪಿಸಿದರು.

 

Related posts

Leave a Reply

Your email address will not be published. Required fields are marked *