Header Ads
Breaking News

ಹಾಸನ : ಎನ್ ಹೆಚ್ -75 ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ

ಹಾಸನ ಜ.12(ಕರ್ನಾಟಕ ವಾರ್ತೆ): ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಗೋಪಾಲಯ್ಯ ಮತ್ತು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ನಾರಾಯಣಸ್ವಾಮಿ ಮತ್ತು ಶಾಸಕರಾದ ಅಶ್ವಥ್‍ನಾರಾಯಣ ಮತ್ತಿತರರು ಇಂದು ಹಾಸನ ಸಕಲೇಶಪುರ ನಡುವಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ -75 ರಸ್ತೆ ಕಾಮಗಾರಿ ವೀಕ್ಷಿಸಿ ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎನ್ ಹೆಚ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ ಸಚಿವರು ಲೋಕಸಭಾ ಸದಸ್ಯರು ಈ ವರ್ಷದ ಮೇ ತಿಂಗಳ ಅಂತ್ಯದ ವೇಳೆಗೆ ಮಳೆಗಾಲ ಪ್ರಾರಂಭವಾಗುವುದರಿಂದ ಆದಷ್ಟು ಗರಿಷ್ಠ ಕಾಮಗಾರಿ ಪೂರ್ಣಗೊಳಿಸಿ 2022 ಕೆ ಸಂಪೂರ್ಣ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದೆ ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಈಗಲಾದರೂ ಕೆಲಸ ಚುರುಕಿನಿಂದ ಸಾಗಬೇಕುಯೋಜನೆಗೆ ಅಗತ್ಯವಿರುವ ಮರಳು ಹಾಗೂ ಕಲ್ಲಿಗೆ ಅಗತ್ಯ ವ್ಯವಸ್ಥೆ ಈಗಾಗಲೇ ಮಾಡಿದ್ದು ಗುಣಮಟ್ಟ ಕಾಯ್ದುಕೊಂಡು 2022ರ ಒಳಗೆ. ಈ ರಸ್ತೆಯನ್ನು ಮುಗಿಸಬೇಕು ಎಂದು ಸಚಿವರಾದ ಗೋಪಾಲಯ್ಯ ಅವರು ತಿಳಿಸಿದರು.

ರಸ್ತೆ ನಿರ್ಮಾಣಕ್ಕೆ 5 ಕಡೆ ಮರಳು ಗಣಿ ಪ್ರದೇಶಗಳನ್ನು ನೀಡಲಾಗಿದೆ. ಕಲ್ಲು ಒದಗಿಸಲಾಗಿದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹೆದ್ದಾರಿ ಸಚಿವರಾ ನಿತಿನ್ ಗಡ್ಕರಿಯವರು ಕಾಮಗಾರಿ ಚುರುಕುಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತಾಪ್ ಸಿಂಹ ಅವರು ಕೇಂದ್ರ ಸಚಿವರೊಂದಿಗೆ ಸಂಪರ್ಕ ಮಾಡಿ ಕಾಮಗಾರಿ ತ್ವರಿತಗೊಳಿಸಲು ಶ್ರಮಿಸುತ್ತಿದ್ದಾರೆ ಎಂದು ಗೋಪಾಲಯ್ಯ ಹೇಳಿದರು.

ಸಂಸತ್ ಸದಸ್ಯರಾದ ನಳೀನ್ ಕುಮಾರ್ ಕಟೀಲ್ ಅವರು ಮಾತನಾಡಿ ಎನ್‍ಎಚ್- 75 ಬಹಳ ಪ್ರಮುಖ ರಸ್ತೆಯಾಗಿದ್ದು ಹಾಸನದಿಂದ ಮಂಗಳೂರಿನವರೆಗೆ ರಸ್ತೆ ಕಾಮಗಾರಿಯ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಸಿಲಾಗಿದೆ ಮೊದಲು ಕಾಮಗಾರಿ ಪ್ರಾಥಮಿಕ ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿ ಮಾಡದೆ ಇದ್ದ ಕಾರಣ ಉಪಗುತ್ತಿಗೆದಾರರಿಗೆ ಕಂಟ್ರಾಕ್ಟರ್ ಮಾಡುವವರಿಗೆ ಪೂರ್ಣಪ್ರಮಾಣದ ಕಾಮಗಾರಿ ವಹಿಸಲಾಗುತ್ತಿದೆ ಇನ್ನು ಮುಂದೆ ವೇಗವಾಗಿ ಮುಗಿಸಲು ಸೂಚನೆ ನೀಡಲಾಗಿದೆ ಮಳೆಗಾಲದಲ್ಲಿ ಹಾನಿಗೊಳಗಾಗಿದ್ದ ರಸ್ತೆಯ ಗುಂಡಿ ಮುಚ್ಚುವ ಕಾರ್ಯ 20 ದಿನದೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು ಎಂದು ತಿಳಿಸಿದರು.

ಈಗಾಗಲೇ 13 ಕಿ.ಲೋ ಮೀಟರ್ ರಸ್ತೆ ಆಗಿದೆ. ಮಾರನಹಳ್ಳಿ -ಮಂಗಳೂರಿನ ನಡುವೆ ರಸ್ತೆ ಸುರಂಗ ಮಾರ್ಗ ವಿಸ್ತøತ ಕ್ರಿಯಾ ಯೋಜನೆ ತಯಾರಾಗಿದೆ. 10ಸಾವಿರ ಕೋಟಿ ರೂ ಯೋಜನೆ ಶೀಘ್ರ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

Related posts

Leave a Reply

Your email address will not be published. Required fields are marked *