Header Ads
Breaking News

ಹಿಂದುತ್ವವನ್ನು ನಾನು ನಳಿನ್ ಬಳಿ ಕಲಿತುಕೊಳ್ಳಬೇಕಾಗಿಲ್ಲ: ಮಿಥುನ್ ರೈ!

ಜಿಲ್ಲೆಯ ಸಂಸದರು ಹಿಂದೂ ಕಾರ್‍ಯಕರ್ತರನ್ನು ಬಲಿಕೊಟ್ಟು ಅಧಿಕಾರದಲ್ಲಿದ್ದಾರೆಯೇ ವಿನಹ ಅಬಿವೃದ್ದಿ ಕಾರ್‍ಯ ಶೂನ್ಯ ಎಂದು ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಹೇಳಿದರು.

ಅವರು ಮೂಲ್ಕಿ ಹೋಬಳಿಯಲ್ಲಿ ನಡೆದ ಕಾಂಗ್ರೆಸ್ಸ್-ಜೆಡಿಎಸ್ಸ್ ಚುನಾವಣಾ ಪ್ರಚಾರದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ ಬಿಜೆಪಿ ಪಕ್ಷದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ನಾನು ಸಭೆಯಲ್ಲಿ ಕೇಸರಿ ಶಾಲು ಹಾಕಿಕೊಂಡು ಚುನಾವಣಾ ಪ್ರಚಾರ ಬಗ್ಗೆ ಹೇಳಿಕೆ ನೀಡಿದ್ದು ಮಾಧ್ಯಮದಲ್ಲಿ ಬಂದಿದೆ, ಹಿಂದೂತ್ವವನ್ನು ನಾನು ನಳಿನ್ ಬಳಿ ಕಲಿತುಕೊಳ್ಳಬೇಕಾಗಿಲ್ಲ, ಹಾಗೂ ಅದನ್ನು ರಾಜಕೀಯಕ್ಕೆ ಬಳಸಲು ನಾನು ಸಿದ್ದನಿಲ್ಲ , ಹಿಂದೂ ಧರ್ಮದ ಬಗ್ಗೆ ಅರಿತಿದ್ದೇನೆ, ಕಳೆದ ಕೆಲವರ್ಷಗಳಲ್ಲಿ ಗೋವು ದಾನ, ಅರ್ಥಿಕವಾಗಿ ಹಿಂದುಳಿದವರಿಗೆ ಸಹಾಯ, ಮತ್ತಿತರ ಕಾರ್ಯಗಳಲ್ಲಿ ನಿರಂತರ ತೊಡಗಿಕೊಂಡರೂ ಯಾವುದೇ ಪ್ರಚಾರ ಬಯಸಿಲ್ಲ, ಚುನಾವಣೆ ತನಗ ನೀವಿ ನನ್ನ ಜೊತೆ ಇರಿ ನಂತರ ಐದು ವರ್ಷ ನಾನು ನಿಮ್ಮ ಜೊತೆ ಇರುತ್ತೇನೆ ಎಂದರು.

ಮಾಜೀ ಸಚಿವ ಅಭಯಚಂದ್ರ ಮಾತನಾಡಿ ಯುವಕ ಮಿಥುನ್ ರೈ ಅನೇಕ ಕನಸುಗಳನ್ನು ಹೊತ್ತು ಕಣಕ್ಕೆ ಇಳಿದಿದ್ದಾರೆ, ವಿದ್ಯಾವಂತ ಜಿಲ್ಲೆಗೆ ವಿಧ್ಯಾವಂತ ಯುವಕನನ್ನು ಕಾಂಗ್ರೇಸ್ ಅಭ್ಯರ್ಥಿಯಾಗಿಸಿದೆ, ಬಡವರ ಬಗ್ಗೆ ವಿಶೇಷ ಕಾಳಜಿ ಮಾತ್ರವಲ್ಲದೆ, ದಾರ್ಮಿಕ ಸಾಂಸ್ಕೃತಿಕವಾಗಿಯೂ ಮಿಥುನ್ ಮುಂದಿದ್ದಾರೆ ಎಂದರು.

ಮೂಲ್ಕಿ ಹೋಬಳಿಯ ಕಿನ್ನಿಗೋಳಿ ಹಳೆಯಂಗಡಿ ಸಸಿಹಿತ್ಲು, ಮೂಲ್ಕಿ, ಪಕ್ಷಿಕೆರೆ ಹಳೆಯಂಗಡಿ ತೋಕೂರು ಮತ್ತಿತರ ಕಡೆಗಳಲ್ಲಿ ದೈವಸ್ಥಾನ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆಸಲ್ಲಿಸಿದರು. ಮುಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಜೆಡಿಎಸ್ಸ್ ಕಾಂಗ್ರೆಸ್ಸ್ ನಾಯಕರಾದ ಇಕ್ಬಾಲ್ ಮುಲ್ಕಿ, ಚಂದ್ರಹಾಸ ಸನಿಲ್ ಮೂಡಬಿದ್ರೆ, ಕಿಶೋರ್ ಶೆಟ್ಟಿ,ಗೋಪೀನಾಥ ಪಡಂಗ, ಗುರುರಾಜ ಪೂಜಾರಿ, ಶಶಿಕಾಂತ ಶೆಟ್ಟಿ, ಬಿಎಂ.ಆಸೀಫ್, ಶಾಲೆಟ್ ಪಿಂಟೋ, ಪ್ರಸಾಧ್ ಕಂಚನ್, ವೀರಯ್ಯ ಹಿರೇಮಠ, ಬಾಲಾದಿತ್ಯ ಆಳ್ವ, ಪದ್ಮಾವತಿ ಶೆಟ್ಟಿ, ಅನ್ವಿತ್ ಕಟೀಲು, ನವೀನ್ ಪುತ್ರನ್, ವಲೇರಿಯನ್ ಸಿಕ್ವೇರಾ,ದಿವಾಕರ ತೋಡಾರ್, ಮತ್ತಿತರರು ಉಪಸ್ಥಿತರಿದ್ದರು,

Related posts

Leave a Reply

Your email address will not be published. Required fields are marked *