Header Ads
Header Ads
Breaking News

ಹಿಂ.ಜಾ.ವೇದಿಕೆಯ ಕಾರ್ಯಕರ್ತನ ಬರ್ಬರ ಹತ್ಯೆ ವಿಚಾರ : ಸಮಗ್ರವಾಗಿ ತನಿಖೆಗೆ ಹಿಂಜಾವೇ ಪ್ರಾಂತ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೆ.ಟಿ. ಆಗ್ರಹ

ಪುತ್ತೂರು: ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ತಿಕ್ ಸುವರ್ಣ ಅವರನ್ನು ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣ ಅತ್ಯಂತ ಹೇಯವಾಗಿದೆ. ಆರೋಪಿಗಳನ್ನು ಬಂಧಿಸಿದರೆ ಸಾಲದು, ಈ ಪ್ರಕರಣದ ಹಿಂದೆ ಇರುವ ಜಾಲವನ್ನು ಕೂಡ ಸಮಗ್ರವಾಗಿ ತನಿಖೆ ಮಾಡಿ ಬಯಲಿಗೆ ಎಳೆಯಬೇಕು ಎಂದು ಹಿಂಜಾವೇ ಪ್ರಾಂತ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೆ.ಟಿ. ಆಗ್ರಹಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ತಿಕ್ ಸುವರ್ಣ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತನಾಗಿದ್ದ. ಹಾಗೆಂದು ಆತ ಯಾವುದೇ ಸಮಾಜ ಕಂಟಕ ಕೆಲಸಗಳಲ್ಲಿ ತೊಡಗಿಕೊಂಡವನಲ್ಲ. ಅತ್ಯಂತ ಸಾತ್ವಿಕ ಸ್ವಭಾವದ ಯುವಕನಾಗಿದ್ದ. ಇಂಥ ಯುವಕನನ್ನು ಕೊಲೆ ಮಾಡುತ್ತಾರೆ ಎಂದರೆ ನಂಬಲು ಅಸಾಧ್ಯವಾಗುತ್ತಿದೆ ಎಂದರು.
ಈ ಸಂದರ್ಭ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಪುತ್ತೂರು ತಾಲೂಕು ಅಧ್ಯಕ್ಷ ಸಚಿನ್ ರೈ ಪಾಪೆಮಜಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *