Header Ads
Header Ads
Header Ads
Header Ads
Header Ads
Header Ads
Breaking News

ಹಿರಿಯ ನ್ಯಾಯಾವಾದಿ ಕೆ.ಎಸ್. ಕಲ್ಲೂರಾಯ ನಿಧನ : ಗಣ್ಯರಿಂದ ಸಂತಾಪ

ಹಿರಿಯ ನ್ಯಾಯವಾದಿ, ಸಾಮಾಜಿಕ ಧುರೀಣ ಹಾಗೂ ಶಿಕ್ಷಣ ತಜ್ಞ ಕೆ.ಎಸ್.ಕಲ್ಲೂರಾಯ(75) ನಿಧನರಾಗಿದ್ದಾರೆ. ಕೊಡಿಯಾಲ್ ಬೈಲ್‍ನ ಶಾರದಾ ವಿದ್ಯಾಲಯ ಸೇರಿದಂತೆ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಟ್ರಸ್ಟಿ ಮತ್ತು ಉಪಾಧ್ಯಕ್ಷರಾಗಿರುವ ಕಲ್ಲೂರಾಯ ಸಾಮಾಜಿಕ ಧುರೀಣರಾಗಿ ಹೆಸರುವಾಸಿಯಾಗಿದ್ದರು. ವಕೀಲರ ಸಂಘದ ಹಿರಿಯ ಸಮಿತಿ ಸದಸ್ಯರಲ್ಲಿ ಒಬ್ಬರಾಗಿದ್ದರು. ಶಾರದಾ ವಿದ್ಯಾಲಯದಲ್ಲಿ ಉಪಾಧ್ಯಕ್ಷರಾಗಿದ್ದರು. ಎಸ್‍ಕೆಡಿಬಿ ಟ್ಟಸ್ಟಿಯಾಗಿದ್ದರು. ಲಕ್ಷ್ಮೀ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿಯೂ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.ಕಲ್ಲೂರಾಯರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕರಾದ ಐವನ್ ಡಿಸೋಜ, ಹರೀಶ್ ಕುಮಾರ್, ವೇದವ್ಯಾಸ್ ಕಾಮತ್, ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರೊ. ಎಂ.ಬಿ. ಪುರಾಣಿಕ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *