Header Ads
Header Ads
Breaking News

ಹೆಜಮಾಡಿಯಲ್ಲಿ ನೂತನ ಬಂದರು ನಿರ್ಮಾಣ : ಸ್ಥಳ ಪರಿಶೀಲಿಸಿದ ಉಡುಪಿ ಜಿಲ್ಲಾಧಿಕಾರಿಗಳು

ಕಳೆದ ನಲ್ವತ್ತೈದು ವರ್ಷ ಹಳೆಯದಾದ ಹೆಜಮಾಡಿ ಬಂದರು ನಿರ್ಮಾಣ ಪ್ರದೇಶಕ್ಕೆ ಸ್ಥಳ ಪರಿಶೀಲನೆಗಾಗಿ ಉಡುಪಿ ಎಡಿಸಿ ಸದಾಶಿವ ಪ್ರಭು ತಂಡ ಆಗಮಿಸಿ ಪರಿಶೀಲಿಸಿದ್ದು, ಶೀಘ್ರವಾಗಿ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿ ಬಂದರು ನಿರ್ಮಾಣಕ್ಕೆ ಚಾಲನೆ ನೀಡಲಾಗುವುದೆಂದರು.ಸ್ಥಳ ಪರಿಶೀಲನೆಯ ಬಳಿಕ ಮಾತನಾಡಿದ ಅವರು, ಬಹಳಷ್ಟು ಹಳೆದಾದ ಮೀನುಗಾರರ ಬೇಡಿಕೆ ಹಾಗೂ ಕನಸು ಹೆಜಮಾಡಿ ಕಿರು ಬಂದರು ನಿರ್ಮಾಣ, ಇಷ್ಟರಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬಂದರು ನಿರ್ಮಾಣದ ಕೆಲವೊಂದು ಮಜಲುಗಳ ಕಾನೂನ್ಮಾಕ ಕೆಲಸಗಳು ಮುಗಿಸಿದ್ದು, ಇದೀಗ ಮೀನುಗಾರಿಕ ಬಂದರು ನಿರ್ಮಾಣ ಪ್ರದೇಶದಲ್ಲಿ ಖಾಸಗಿ ಸ್ಥಳಗಳಿದ್ದು, ಆ ಸ್ಥಳಗಳನ್ನು ಕಾನೂನು ಬದ್ಧವಾಗಿ ಅವರಿಂದ ಪಡೆದು ಮೀನುಗಾರೀಕಾ ಇಲಾಖೆಗೆ ಹಸ್ತಾಂತರಿಸಿದ ಬಳಿಕ ಕೇಂದ್ರ ಹಾಗೂ ರಾಜ್ಯದ ಹಣವನ್ನು ಈ ಬಂದರು ನಿರ್ಮಾಣಕ್ಕೆ ಬಳಸ ಬಹುದಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು ಶೀಘ್ರ ಈ ಕೆಲಸ ಮುಗಿಸಲಾಗುವುದೆಂದರು. 
ಹೆಜಮಾಡಿ ಬಂದರು ಸಮಿತಿಯ ಅಧ್ಯಕ್ಷ ಸದಾಶಿವ ಕೋಟ್ಯಾನ್ ಮಾತನಾಡಿ, ಕಳೆದ ನಲ್ವತೈದು ವರ್ಷಗಳಿಂದ ಹೆಜಮಾಡಿಯಲ್ಲಿ ಕಿರು ಬಂದರು ನಿರ್ಮಿಸಬೇಕೆಂಬ ನಮ್ಮ ಬೇಡಿಕೆಗೆ ಹತ್ತಾರು ಮೀನುಗಾರಿಕಾ ಮಂತ್ರಿಗಳು ಹಾಗೂ ಹದಿನೈದಕ್ಕೂ ಅಧಿಕ ಜಿಲ್ಲಾಧಿಕಾರಿಗಳು ಸಹಿತ ವಿವಿಧ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಹೋಗುತ್ತಾರೆ, ಆದರೆ ಜಯಪ್ರಕಾಶ್ ಹೆಗ್ಡೆ ಹಾಗೂ ನಾಗರಾಜ್ ಶೆಟ್ಟಿ ಸಂದರ್ಭದಲ್ಲಿ ಎರಡು ಕೋಟಿ ರೂ ವಿನಿಯೋಗಿಸಿದ್ದು ಹೊರತು ಪಡಿಸಿ ಯಾವುದೇ ಪ್ರಗತಿ ಖಂಡಿಲ್ಲ, ಇದೀಗ ಭೇಟಿ ನೀಡಿದ ಉಡುಪಿ ಜಿಲ್ಲಾ ಎಡಿಸಿ ಸದಾಶಿವ ಪ್ರಭು ಭರವಸೆಯ ಮಾತುಗಳಿಂದ ನಮ್ಮ ಆಶೆ ಚಿಗುರಿದೆ, ಶೀಘ್ರವಾಗಿ ಬಂದರಿನ ಕನಸು ನನಸಾಗುವ ಸಾಧ್ಯತೆ ಇದೆ ಎಂಬ ಆಶಾ ಭಾವನೆ ವ್ಯಕ್ತ ಪಡಿಸಿದ್ದಾರೆ. 
ಈ ಸಂದರ್ಭ ಕಾಪು ತಹಶೀಲ್ದಾರ್ ಹಿಜ್ಹಾದ್, ಆರ್ ಐ ರವಿಶಂಕರ್, ಬಂದರು ಇಲಾಖಾ ಇಂಜಿನಿಯಾರ್ ಉದಯ ಕುಮಾರ್, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷೀ ಪುತ್ರನ್, ಉಪಾಧ್ಯಕ್ಷ ಸುಧಾಕರ್ ಕರ್ಕೇರ, ಪಾಂಡುರಂಗ ಕರ್ಕೇರ ಜೊತೆಗಿದ್ದರು.

 

Related posts

Leave a Reply

Your email address will not be published. Required fields are marked *