Header Ads
Header Ads
Breaking News

ಹೆಜಮಾಡಿಯಲ್ಲಿ ಪೊದೆಯಲ್ಲಿ ಅಡಗಿದ ಮೆಸ್ಕಾಂ ವಿದ್ಯುತ್ ಕಂಬ! : ಮೆಸ್ಕಾಂ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಹೆಜಮಾಡಿ ಶಿವ ನಗರದಿಂದ ಬೊರ್‌ಗುಡ್ಡೆಗೆ ಹೋಗುವ ಸಂಪರ್ಕ ರಸ್ತೆಯ ಸಮೀಪ ಕೃಷಿಭೂಮಿಗೆ ತಾಗಿಕೊಂಡೇ ವಿದ್ಯುತ್ ಕಂಬವೊಂದು ಪೊದೆಯಲ್ಲಿ ಅಡಗಿಕೊಂಡತ್ತಿದೆ. ವಿದ್ಯುತ್ ಹರಿಯುತ್ತಿದ್ದ ತಂತಿಗಳು ಕೈ ಗೆಟಕುವ ಸ್ಥಿಯಲ್ಲಿ ಕೃಷಿಯ ಭೂಮಿಯ ಮಧ್ಯೆಭಾಗದಲ್ಲಿ ಹಾದು ಹೋಗಿ ಅಪಾಯ ಸಂಭವಿಸುವ ಪರಿಸ್ಥಿತಿಯಲ್ಲಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಹೆಜಮಾಡಿ ಗ್ರಾ.ಪಂ. ಸದಸ್ಯ ಶಿವರಾಮ ಶೆಟ್ಟಿ ಆರೋಪಿಸಿದ್ದಾರೆ.

ಕೃಷಿ ಚಟುವಟಿಕೆ ಸಹಿತ ದನ-ಕರುಗಳನ್ನು ಈ ಭಾಗದಲ್ಲಿ ಮೇಯಲು ಈ ಭಾಗದಲ್ಲಿ ಕಟ್ಟುತ್ತಿದ್ದು, ಈ ಸಂದರ್ಭವೇನಾದರೂ ಜೋತುಬಿದ್ದ ತಂತಿಗಳು ಕಡಿದು ಬಿದ್ದು ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬುದಾಗಿ ಶಿವರಾಮ ಶೆಟ್ಟಿ ಪ್ರಶ್ನಿಸಿದ್ದಾರೆ. ಅಲ್ಲದೆ ವಿದ್ಯುತ್ ಕಂಬವಂತ್ತೂ ಇದೇ ಎಂಬುದೇ ತಿಳಿಯದಷ್ಟು ಪೊದೆ ಆವರಿಸಿಕೊಂಡಿದೆ, ಬಳ್ಳಿಗಳು ವಿದ್ಯುತ್ ತಂತಿಯನ್ನು ಸುತ್ತಿಕೊಂಡಿದ್ದು ಯಾವ ಸಮಯದಲ್ಲೂ ವಿದ್ಯುತ್ ಅವಘಢ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತ್ತಿಲ್ಲ, ಈ ಬಗ್ಗೆ ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಪಡುಬಿದ್ರಿ ಮೆಸ್ಕಾಂ ಅಧಿಕಾರಿಯ ಗಮನಕ್ಕೆ ತಂದೆದ್ದೇನೆಯಾದರೂ ಯಾವುದೇ ಸ್ಪಂದನೆ ನೀಡಿಲ್ಲ. ತಕ್ಷಣ ನಮ್ಮೀ ಸಮಸ್ಯೆಗೆ ಪಡುಬಿದ್ರಿ ಮೆಸ್ಕಾಂ ಅಧಿಕಾರಿಗಳು ಸ್ಪಂಧಿಸದಿದ್ದಲ್ಲಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸ ಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *