Header Ads
Breaking News

ಹೆಜಮಾಡಿಯ ಕೊಕ್ರಾಣಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಮುಳುಗಿ ಮೃತ್ಯು

ಮನೆಯ ಪಕ್ಕದ ನೀರು ಹರಿದು ಹೋಗುವ ಬೃಹತ್ ತೊರೆಯೊಂದಕ್ಕೆ ಮೀನು ಹಿಡಿಯಲು ಬಲೆ ಹರಡಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಕಳೆದ ರಾತ್ರಿ ನಡೆದಿದೆ.

ಮೃತ ವ್ಯಕ್ತಿ ಕೊಕ್ರಾಣಿ ನಿವಾಸಿ ವಿವಾಹಿತ ವಿಜಯ್(44). ಇವರು ಮನೆಯ ಮುಂಭಾಗ ಅಣೆಕಟ್ಟು ಪ್ರದೇಶದಲ್ಲಿ ರಾತ್ರಿ ಹತ್ತರ ಸುಮಾರಿಗೆ ಮನೆಮಂದಿ ಬೇಡ ಎಂದರೂ ಊಟ ಮಾಡಲು ಬರುತ್ತೇನೆ ಎಂಬುದಾಗಿ ಮನೆಯಲ್ಲಿದ್ದ ಸಹೋದರಲ್ಲಿ ಹೇಳಿ ಬಲೆ ಹಿಡಿದು ಹೊರಟವರು ಹೊತ್ತು ಕಳೆದರೂ ಬಾರದಿರುವುದರಿಂದ ಸಹೋದರು ಹುಡುಕಿಕೊಂಡು ಬಂದಾಗ ವ್ಯಕ್ತಿ ನಾಪತ್ತೆಯಾಗಿದ್ದು, ಸ್ಥಳೀಯರನ್ನು ಕರೆದು ನೀರಿಗಿಳಿದು ಹುಡುಕಾಟ ನಡೆಸಿದಾಗ ಕೈಕಾಲಿಗೆ ಬಲೆ ಸುತ್ತಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈಜು ಬರುತ್ತಿದ್ದರೂ ಬಲೆ ಕೈ ಕಾಲಿಗೆ ಸುತ್ತಿಕೊಂಡಿದ್ದರಿಂದ ಬಾರೀ ಆಳದ ಭಾಗದಲ್ಲಿ ಮುಳುಗಿ ಮೃತ ಪಟ್ಟಿದ್ದರು. ಮದುವೆ ಆಗಿ ಸುಮಾರು ಹತ್ತು ವರ್ಷ ಕಳೆದಿದ್ದರೂ ಮಕ್ಕಳಿಲ್ಲ, ಗಲ್ಫ್ ರಾಷ್ಟ್ರದಲ್ಲಿ ವೃತ್ತಿಯಲ್ಲಿದ್ದ ಇವರು ಕಳೆದ ಎರಡು ವರ್ಷಗಳಿಂದಿಚೆ ಊರಲ್ಲೇ ಇದ್ದರು. ಇದೇ ಶಾಂಭವಿ ಹೊಳೆಗೆ ಸಂಪರ್ಕ ಹೊಂದಿರುವ ಈ ತೊರೆಯಲ್ಲಿ ಈಜಾಡಿಕೊಂಡಿದ್ದ ಇವರು ಇದೀಗ ಅದೇ ಪ್ರದೇಶದಲ್ಲಿ ಮುಳುಗಿ ಮೃತ ಪಟ್ಟಿದ್ದು ದುರ್ಧೈವವೇ ಸರಿ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *