Header Ads
Header Ads
Header Ads
Breaking News

ಹೆಜಮಾಡಿ ಟೋಲ್‌ನಲ್ಲಿ ಸುಂಕ ವಸೂಲಾತಿ ವಿಚಾರ ಒಂದೂವರೆ ಗಂಟೆಗಳ ಬಳಿಕ ಮತ್ತೆ ಟೋಲ್ ಸಂಗ್ರಹ ಆರಂಭ

 

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 60 ಮಂದಿ ಸಿಬ್ಬಂದಿಗಳಿಗೆ, ವೇತನ ನೀಡದಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದ್ದರಿಂದ, ಸಾವಿರಕ್ಕೂ ಅಧಿಕ ವಾಹನಗಳು ಟೋಲ್ ಇಲ್ಲದೆ ಉಚಿತವಾಗಿ ಪ್ರಯಾಣ ಮುಂದುರಿಸಿದೆ.

ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು 8 ಗಂಟೆಗೆ ತಮ್ಮ ಅವಧಿ ಪೂರ್ಣಗೊಳಿಸಿ ಮರಳಿದರೆ, ಆ ಬಳಿಕ ಹಾಜರಾಗ ಬೇಕಾಗಿದ್ದ ಮಹಿಳಾ ಸಿಬ್ಬಂದಿಗಳು ಸ್ಥಳಕ್ಕೆ ಬಂದಿದ್ದರೂ ಪೂರಕವಾಗಿ ವೇತನ ನೀಡದಿರುವ ಕಾರಣ ಒಡ್ಡಿ ಕರ್ತವ್ಯಕ್ಕೆ ಹಾಜರಾಗಿಲ್ಲ. ನವಯುಗ್ ಕಂಪನಿಯಿಂದ ಟೋಲ್ ಸಂಗ್ರಹದ ಗುತ್ತಿಗೆ ಪಡೆದ “ಫೀಡ್‌ಬ್ಯಾಕ್” ಕಂಪನಿ ಸ್ಥಳೀಯರಿಗೆ ಈ ಹೆಜಮಾಡಿ ಟೋಲ್‌ನ ಸಬ್ ಗುತ್ತಿಗೆ ವಹಿಸಿತ್ತು. ಕಳೆದ ಮೂರು ತಿಂಗಳಿಂದ ಫೀಡ್‌ಬ್ಯಾಕ್ ಕಂಪನಿ ಸಬ್ ಗುತ್ತಿಗೆದಾರರಿಗೆ ನೀಡ ಬೇಕಾಗಿದ್ದ ಹಣ ಸಂದಾಯ ಮಾಡುವುದಾಗಲೀ, ಸಬ್ ಗುತ್ತಿಗೆದಾರರಿಗೆ ಇಷ್ಟು ದಿನದಲ್ಲಿ ಹಣ ನೀಡುವ ಭರವಸೆಯನ್ನಾಗಲೀ ನೀಡುತ್ತಿಲ್ಲ.

ಈ ಬಗ್ಗೆ ಮಾತನಾಡಿದ ಟೋಲ್ ಯೂನಿಯನ್ ಮುಖ್ಯಸ್ಥ ಶೇಖರ್ ಹೆಜಮಾಡಿ, ಹೆಜಮಾಡಿ ಟೋಲ್‌ನಲ್ಲಿ ಅತೀ ಹೆಚ್ಚು ಹಣ ಸಂಗ್ರಹವಾಗುತ್ತದೆ. ಆದರೆ ದುಡಿಯುತ್ತಿರುವ ಸಿಬ್ಬಂದಿಗಳ ಪ್ರಾಣಕ್ಕೆ ಯಾವುದೇ ಭದ್ರತೆಗಳಿಲ್ಲ. ಈ ಬಗ್ಗೆ ಅವರಿಗೆ ಟೋಲ್ ಸಂಗ್ರಹಕ್ಕೆ ಅವಕಾಶ ಕಲ್ಪಿಸಿದ ನವಯುಗ್ ಸಹಿತ ಹೆದ್ದಾರಿ ಇಲಾಖೆ ಈ ಅಕ್ರಮವನ್ನು ಪರಿಶೀಲಿಸಿ ಅವರಿಂದ ಟೋಲ್ ಸಂಗ್ರಹ ಮಾಡುವ ಅಧಿಕಾರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಮಹಿಳಾ ಸಿಬ್ಬಂದಿ ಸ್ಥಳೀಯ ನಿವಾಸಿ ಶಶಿಕಲ ಮಾತನಾಡಿ, ನಾವು ನಮ್ಮ ಕುಟುಂಬ ನಿರ್ವಾಹಣೆಗಾಗಿ ಈ ಕೆಲಸವನ್ನು ನೆಚ್ಚಿಕೊಂಡಿದ್ದೇವೆ, ಬಹಳ ವಿಳಂಬವಾಗಿ ವೇತನ ಪಾವತಿ ಮಾಡುತ್ತಿರುವುದರಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಗುತ್ತಿಗೆ ಕಂಪನಿ ಅಧಿಕಾರಿಗಳು ನಮ್ಮನ್ನು ಬೇಕಾಬಿಟ್ಟಿ ದುಡಿಸಿಕೊಳ್ಳುತ್ತಾರೆ ಆದರೆ ನಮ್ಮ ಸಮಸ್ಯೆಯನ್ನು ಆಲಿಸಲು ಅವರು ಮುಂದಾಗುತ್ತಿಲ್ಲ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಪ್ರಮುಖವಾಗಿ ಸ್ವಚ್ಚತೆಗೆ ಆಧ್ಯತೆ ನೀಡುತ್ತಿಲ್ಲ. ಟೋಲ್ ಸಂಗ್ರಹ ಮಾಡುವ ಕೊಠಡಿಯ ಪ್ಯಾನ್‌ಗಳು ಕರ್ತವ್ಯದಿಂದ ನಿವೃತ್ತಿಗೊಂಡಿದೆ. ಕಂಪ್ಯೂಟರ್ ಜೀವ ಬಿಡುವ ಸ್ಥಿತಿಯಲ್ಲಿದೆ, ಶೆಕೆಯೊಂದಿಗೆ ಧೂಳಿನ ಹೊಡೆತ, ಈ ಎಲ್ಲದರ ಮಧ್ಯೆ ನಮ್ಮನ್ನು ವಂಚಿಸಿ ಯಾವುದೇ ವಾಹನಗಳು ಟೋಲ್ ನೀಡದೆ ಹೋದರೆ ಅದನ್ನು ನಮ್ಮ ವೇತನದಲ್ಲಿ ಹಿಡಿದಿಡುತ್ತಾರೆ.

ಕಂಪನಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಅದರಿಂದ ಸಂಭವಿಸುವ ನಷ್ಟಗಳಿಗೆ ನಾವೇ ಹೊಣೆ. ಕರ್ತವ್ಯ ಪಾಲನೆಗೆ ಮುಂದಾಗುವ ನಮಗೆ ಸಾರ್ವಜನಿಕರಿಂದಲೂ ಬೈಗುಳ ತಪ್ಪಿದ್ದಲ್ಲ. ಈ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಕೆಲಸ ಮಾಡುವ ನಮಗೆ ಕಂಪನಿ ಸಮರ್ಪಕ ವೇತನವನ್ನು ನೀಡದೆ ಸತ್ತಾಯಿಸುತ್ತಿದೆ ಎಂಬುದಾಗಿ ತಮ್ಮ ಮನಸ್ಸಿನ ವೇಧನೆಯನ್ನು ತೋಡಿಕೊಂಡರು.

ಅದಲ್ಲದೆ ಇತ್ತೀಚಿನ ದಿನಗಳಲ್ಲಿ ನಮ್ಮ ಪೋನ್ ಕರೆಯನ್ನು ಕೂಡಾ ಸ್ವೀಕರಿಸುತ್ತಿಲ್ಲ. ಆ ನಿಟ್ಟಿನಲ್ಲಿ ಸಿಬ್ಬಂದಿಗಳಿಗೆ ನೀಡ ಬೇಕಾಗಿದ್ದ ವೇತನ ನೀಡಲು ನಮ್ಮಿಂದ ಸಾಧ್ಯವಾಗದ್ದರಿಂದ ಸಿಬ್ಬಂದಿಗಳು ಪ್ರತಿಭಟನೆಯ ದಾರಿ ತುಳಿಯುವಂತ್ತಾಯಿತು ಎಂಬುದಾಗಿ ಸ್ಥಳೀಯ ಗುತ್ತಿಗೆದಾರರು ತಿಳಿಸಿದ್ದಾರೆ.

Related posts

Leave a Reply