Header Ads
Header Ads
Breaking News

ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ : ಸಮಿತಿಯ ಅಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ ಆಯ್ಕೆ

ಜೀರ್ಣೋದ್ಧಾರ ಕಂಡು ಶತಮಾನ ಕಳೆದ ಹೆಜಮಾಡಿ ಗ್ರಾಮ ದೇಗುಲ, ಶ್ರೀಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಮುಂಬೈ ಸಮಿತಿಯ ಅಧ್ಯಕ್ಷರಾಗಿ, ಮುಂಬೈ ಉದ್ಯಮಿ ಪುಷ್ಪರಾಜ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಂಬೈಯ ಬಿಲ್ಲವರ ಭವನದಲ್ಲಿ ಹೆಜಮಾಡಿ ಮೂಲದ ನೂರಾರು ಉದ್ಯಮಿಗಳು ಸೇರಿದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ಪ್ರಕೃಯೆ ನಡೆದಿದೆ. ಈ ಸಂದರ್ಭ ಮಾತನಾಡಿದ ಹೆಜಮಾಡಿ ಶ್ರೀಮಹಾಲಿಂಗೇಶ್ವರ ದೇಗುಲದ ಆಡಳಿತ ಮೋಕ್ತೆಸರ ದಯಾನಂದ ಹೆಜಮಾಡಿ, ಬಹುತೇಕ ಶಿಥಿಲಾವಸ್ಥೆಯಲ್ಲಿರುವ ದೇವಾಲಯ ಜೀರ್ಣೋದ್ಧಾರ ಕಂಡು ನೂರಒಂದು ವರ್ಷಗಳೇ ಕಳೆದಿದೆ, ಜೀರ್ಣೋದ್ಧಾರಕ್ಕಾಗಿ ಬಹಳಷ್ಟು ಪ್ರಯತ್ನಗಳು ನಡೆಯಿತಾದರೂ, ನಾನಾ ಕಾರಣಗಳಿಂದ ಹಿನ್ನಡೆ ಅನುಭವಿಸಿದೆ, ಇದೀಗ ದೇವರ ಪ್ರೇರಣೆಯೂ ಊರ-ಪರವೂರ ಸದ್ಭಕ್ತರ ಸಂಕಲ್ಪವೂ ಗ್ರಾಮ ದೇಗುಲ ನವೀಕರಣಗೊಳ್ಳುವ ಹಂತದಲ್ಲಿದೆ, ಗ್ರಾಮದ ಎಲ್ಲಾ ದೈವ-ದೇವಸ್ಥಾನಗಳು ಜೀರ್ಣೋದ್ಧಾರಗೊಂಡ ಬಳಿಕ ತನ್ನ ಸನ್ನಿಧಿ ಜೀರ್ಣೋದ್ಧಾರಗೊಳ್ಳಲಿ ಎಂಬುದು ಒಡೆಯನ ಇಚ್ಚೆಯೋ ಏನು ಇದೀಗ ಕಾಲ ಕೂಡಿ ಬಂದಿದೆ ಎಂದು ಹೇಳಿದರು.
ಮುಂಬೈ ಬಿಲ್ಲವ ಭವನದ ಅಧ್ಯಕ್ಷ ಬಿಲ್ಲವ ಮುಂದಾಳು ಚಂದ್ರಶೇಖರ್ ಪೂಜಾರಿ ಮಾತನಾಡಿ, ಮನುಷ್ಯ ತಾನೇನೂ ಸಂಕಲ್ಪ ಮಾಡಿದರೂ ಅದೇ ನೆಪಕಷ್ಟೇ, ದೇವರ ದಯೆ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡದು, ಆ ನಿಟ್ಟಿನಲ್ಲಿ ತನ್ನ ಸಾನಿಧ್ಯವನ್ನು ಬೆಳಗಿಸುವ ನಿಟ್ಟಿನಲ್ಲಿ ಭಕ್ತರಾದ ತಮಗೆಲ್ಲರಿಗೂ ದೇವರು ಪ್ರೇರಣೆ ನೀಡಿದ್ದಾರೆ, ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲಾರೂ ಪಾಲುದಾರರಾಗೋಣ, ನಾವು ಹುಟ್ಟಿ ಬೆಳದ ಗ್ರಾಮದ ಅಧಿಪತಿಯನ್ನು ಮರೆಯದಿರೋಣ ಎಂಬುದಾಗಿ ಕಿವಿ ಮಾತು ಹೇಳಿದ್ದಾರೆ.
ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಹೆಜಮಾಡಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುಣೆ ಹೋಟೆಲ್ ಉದ್ಯಮಿ ಹೆಜಮಾಡಿ ಮೂಲದ ಜಯಂತ್ ಶೆಟ್ಟಿ ವಹಿಸಿ ಮುಂಬೈ ಸಮಿತಿಗೆ ಶುಭ ಹಾರೈಸಿದರು. ಈ ಸಂದರ್ಭ ವೇದಿಕೆಯಲ್ಲಿ ವಾಸುದೇವ ಕೋಟ್ಯಾನ್, ರತ್ನಾಕರ್ ಶೆಟ್ಟಿ, ಚಂದ್ರಶೇಖರ ಪುತ್ರನ್, ವಿಶಾಲಾಕ್ಷೀ ಪುತ್ರನ್, ಅರುಣ್ ಶೆಟ್ಟಿ, ಸಚಿನ್ ನಾಯಕ್ ಮುಂತಾದವರಿದ್ದರು

ಮುಂಬೈ ಸಮಿತಿ ಪದಾಧಿಕಾರಿಗಳು: ಅಧ್ಯಕ್ಷರಾಗಿ ಪುಷ್ಪರಾಜ್ ಎಸ್. ಶೆಟ್ಟಿ, ಉಪಾಧ್ಯಕ್ಷರುಗಳಾಗಿ ರತ್ನಾಕರ್ ಶೆಟ್ಟಿ, ಅಶ್ವಜಿತ್ ಹೆಜ್ಮಾಡಿ, ದಿನೇಶ್ ಶೆಟ್ಟಿ ಕನ್ನಾಂಗಾರ್, ಯಧುವೀರ್ ಪುತ್ರನ್, ಸುಮಂಗಳ ಶೆಟ್ಟಿ, ಪ್ರ. ಕಾರ್ಯದರ್ಶಿ ಓಂದಾಸ್ ಕನ್ನಂಗಾರ್, ಜೊತೆ ಕಾರ್ಯದರ್ಶಿಗಳಾಗಿ ಕಿಶೋರ್ ಶೆಟ್ಟಿ, ಮೋಹನ್ ಸಾಲ್ಯಾನ್. ಕೋಶಾಧಿಕಾರಿಯಾಗಿ ಹರೀಶ್ ಹೆಜಮಾಡಿ, ಜೊತೆ ಕೋಶಾಧಿಕಾರಿಯಾಗಿ ರೋಹಿತ್ ದೇವಾಡಿಗ ಹಾಗೂ ಹತ್ತೊಂಭತ್ತು ಮಂದಿ ಸಮಿತಿಯ ಸದಸ್ಯರು ಮತ್ತು ಒಂಭತ್ತು ಮಂದಿ ಗೌರವ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.

Related posts

Leave a Reply

Your email address will not be published. Required fields are marked *