Header Ads
Header Ads
Breaking News

ಹೆಜಮಾಡಿ ಸರ್ಕಾರಿ ಶಾಲೆಯಲ್ಲಿ ಶಾಸಕರಿಂದ ವಿದ್ಯಾರ್ಥಿ ಸಂಘ ಉದ್ಘಾಟನೆ. ಶಾಸಕ ಲಾಲಾಜಿ ಆರ್. ಮೆಂಡನ್‌ಗೆ ಅಭಿನಂದನಾ ಸಮಾರಂಭ.

ಹೆಜಮಾಡಿ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘವನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ದು, ಇದೇ ಸಂದರ್ಭ ಶಾಸಕರಾಗಿ ಆಯ್ಕೆಯಾದ ಮೆಂಡನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭ ಮಾತನಾಡಿದ ಶಾಸಕ ಲಾಲಾಜಿ ಆರ್. ಮೆಂಡನ್, ಯಾವುದೇ ಬೆಲೆ ಬಾಳುವ ಸೊತ್ತುಗಳು ಕಳ್ಳತವೋ ಇಲ್ಲ ಕಣ್ಣ್ ತಪ್ಪಿನಿಂದಲೋ ನಮ್ಮಿಂದ ಕಳೆದು ಹೋಗ ಬಹುದು, ಆದರೆ ವಿಧ್ಯೆ ಎಂಬುದು ಯಾರಿಂದಲೂ ಅಪಹರಿಸಲಾಗದ, ನಮ್ಮ ಜೀವನಕ್ಕೆ ಬೆಳಕಾಗ ಬಲ್ಲ ಬೆಲೆ ಕಟ್ಟಲಾಗದ ಅಪೂರ್ವ ಸೊತ್ತಾಗಿದೆ, ಇಂಥಹ ವಿಧ್ಯೆಯನ್ನು ದೇಶದ ಒಳಿತಾಗಿ ವಿಧ್ಯಾರ್ಥಿಗಳು ಬಳಸಿಕೊಳ್ಳುವಂತೆ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.ಸರ್ಕಾರಿ ಪದವಿಪೂರ್ವ ಕಾಲೇಜು, ಪೌಢಶಾಲಾ ವಿಭಾಗ ಮತ್ತು ಹಳೆ ವಿಧ್ಯಾರ್ಥಿ ಸಂಘ ಹಾಗೂ ಇಕೋ ಕ್ಲಬ್ ಇವರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವೂ ನಡೆಯಿತು. ಈ ಸಂದರ್ಭ ಜಿ.ಪಂ.ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ.ಪಂ. ಸದಸ್ಯೆ ರೇಣುಕ, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷೀ ಪುತ್ರನ್, ಹಳೆ ವಿಧ್ಯಾರ್ಥಿ ಸಂಘದ ಪ್ರಮುಖರಾದ ಶೇಖರ್ ಹೆಜಮಾಡಿ, ಸುಧೀರ್, ವಾಮನ್ ಕೋಟ್ಯಾನ್, ಅಬ್ದುಲ್ ರಹೆಮಾನ್ ಮುಂತಾದವರಿದ್ದರು.

Related posts

Leave a Reply