Header Ads
Header Ads
Breaking News

ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಮೀನಿನಲ್ಲಿ ಮಿನಿ ವಿಧಾನಸೌಧ : ಹಳೇ ವಿದ್ಯಾರ್ಥಿಗಳಿಂದ ವಿರೋಧ

ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಮೀನಿನಲ್ಲಿ ನೂತನ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ಅಲ್ಲಿನ ಸ್ಥಳೀಯರು ಮತ್ತು ಹಳೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೆಬ್ರಿ ಕಾಲೇಜು ಯೂನಿಯನ್‌ನ ಅಧ್ಯಕ್ಷ ಸುಮಂತ್, ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಮಾಡಬೇಕಾದ ಜಾಗದಲ್ಲಿ ಮಿನಿ ವಿಧಾನ ಸೌಧ ಮಾಡುವ ಮೂಲಕ ಶೈಕ್ಷಣಿಕ ವಾಗಿ ವಿದ್ಯಾರ್ಥಿಗಳಿಗೆ ಮೋಸ ಮಾಡಲಾಗುತ್ತಿದೆ. ಶಾಲಾ ವಠಾರದಲ್ಲಿ ಹಾಸ್ಟೇಲ್, ಜಿಮ್, ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಪ್ರತ್ಯೇಕ ಗ್ರಂಥಾಲಯ ಅವಶ್ಯಕತೆ ಇದೆ. ಆದ್ರೆ ಸರಕಾರ ಇದಕ್ಕೆ ಅನುದಾನ ಕೊಡುವ ಬದಲು ಸುಮಾರು 11 ಎಕ್ರೆ ಜಾಗದಲ್ಲಿ ಮಿನಿ ವಿಧಾನ ಸೌಧ ನಿರ್ಮಿಸಲು ಜಾಗ ಗುರುತಿಸಿದೆ. ಕಾಲೇಜು ಆವರಣದಲ್ಲಿ ವಿಧಾನ ಸೌಧ ನಿರ್ಮಾಣಕ್ಕೆ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು ಒಂದು ವೇಳೆ ಮಿನಿ ವಿಧಾನ ಸೌಧ ನಿರ್ಮಾಣ ಆಗಿದ್ದೇ ಆದಲ್ಲಿ..ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲದೇ ರಾಜಕೀಯ ವ್ಯಕ್ತಿಗಳ ಆಶ್ರಯ ತಾಣವಾಗುತ್ತದೆ.ಇದು ಶೈಕ್ಷಣಿಕ ವಾತಾವರಣಕ್ಕೆ ಪೂರಕ ಅಲ್ಲ.ಆದ್ದರಿಂದ ಈ ಪ್ರಸ್ತಾವನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

 

Related posts

Leave a Reply

Your email address will not be published. Required fields are marked *