Header Ads
Breaking News

ಹೊರರಾಜ್ಯದಿಂದ ಬಂದ ಹಿನ್ನೆಲೆ – ಮುಡಿಪು ಜವಾಹರ್ ನವೋದಯ ಶಾಲೆಯ ವಿದ್ಯಾರ್ಥಿಗಳಿಗೆ ಕ್ವಾರಂಟೈನ್

ಉಳ್ಳಾಲ : ಕೊರೋನದಿಂದ ರೈಲು ರದ್ದುಗೊಂಡ ಪರಿಣಾಮ ಉತ್ತರಪ್ರದೇಶದಲ್ಲಿ ಬಾಕಿಯಾಗಿದ್ದ ಮುಡಿಪು ಜವಾಹರ್ ನವೋದಯ ಶಾಲೆಯ ವಿದ್ಯಾರ್ಥಿಗಳು ವಿಶೇಷ ಬಸ್ಸಿನಲ್ಲಿ ಹಿಂದುರಿಗಿದ್ದು, ಹೊರರಾಜ್ಯದಿಂದ ಬಂದ ಹಿನ್ನೆಲೆಯಲ್ಲಿ ಅವರನ್ನು ಹಾಸ್ಟೆಲ್ ನಲ್ಲೇ ಕ್ವಾರಂಟೈನ್ ಗೊಳಪಡಿಸಲಾಗಿದೆ.

ನವೋದಯ ವಿದ್ಯಾಲಯಕ್ಕೆ ಸಂಬಂಧಿಸಿದ ಮೈಗ್ರೇಶನ್ ಪಾಲಿಸಿ ಪ್ರಕಾರ ವ್ಯಾಸಂಗಕ್ಕಾಗಿ ಮುಡಿಪು ಜವಹರಲಾಲ್ ನವೋದಯದ ಶಾಲೆಯ ಒಂಭತ್ತನೇ ತರಗತಿಯ 22 ವಿದ್ಯಾರ್ಥಿಗಳು ಕಳೆದ ವರ್ಷ ಉತ್ತರ ಪ್ರದೇಶ ಜೆ.ಪಿ.ನಗರದ ಜವಹರಲಾಲ್ ನವೋದಯ ವಿದ್ಯಾಲಯದಲ್ಲಿ ಹೋಗಿದ್ದರು.ಅವರ ವ್ಯಾಸಾಂಗ ಮುಗಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು 22, 23ಕ್ಕೆ ಊರಿಗೆ ವಾಪಸ್ಸಾಗಬೇಕಿತ್ತು. ಆದರೆ ಕೊರೊನ ಹಿನ್ನೆಲೆಯಲ್ಲಿ ದೇಶಾದ್ಯಂತ ರೈಲು ಸೇವೆ ರದ್ದಾದ ಕಾರಣ ವಿದ್ಯಾರ್ಥಿಗಳು ಉತ್ತರ ಪ್ರದೇಶ ಶಾಲೆಯಲ್ಲಿಯೇ ಬಾಕಿಯಾಗಿದ್ದರು. ಅಲ್ಲದೆ ಅವರು ಬುಕ್ಕಿಂಗ್ ಮಾಡಿದ್ದ ರೈಲು ಟಿಕೆಟ್ ರದ್ದುಗೊಳಿಸಲಾಗಿತ್ತು.ಈ ಸಂದರ್ಭ ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದ ವೈದ್ಯರ ತಂಡ ಮುಡಿಪುವಿಗೆ ಆಗಮಿಸಿ ವಿದ್ಯಾರ್ಥಿಗಳ ತಪಾಸಣೆ ನಡೆಸಿದ್ದಾರೆ. ಈ ವೇಳೆ ಪೋಷಕರೂ ಆಗಮಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯುವುದಾಗಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಆದರೆ ಹೊರರಾಜ್ಯದಿಂದ ಆಗಮಿಸಿದ್ದರಿಂದ ವಿದ್ಯಾರ್ಥಿಗಳ ಜೊತೆ ಅವರೊಂದಿಗಿದ್ದ ಆರು ಮಂದಿಯನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಎಲ್ಲರ ಕೈಗಳಿಗೆ ಮುದ್ರೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. 
ವರದಿ: ಆರೀಪ್ ಉಳ್ಳಾಲ

Related posts

Leave a Reply

Your email address will not be published. Required fields are marked *