

ವರ್ಷದ ಸಂಭ್ರಮಾಚರಣೆಗಾಗಿ ದೂರದ ಕಡಬದಿಂದ ಮೂಲ್ಕಿಯ ಚಿತ್ರಾಪು ರೆಸಾರ್ಟ್ಗೆ ಬಂದಿದ್ದ ಕುಟುಂಬವೊಂದರ ಸದಸ್ಯ ಶಾಂಭವಿ ಹೊಳೆಯಲ್ಲಿ ಈಜಾಡಲು ತೆರಳಿದ್ದ ಸಂದರ್ಭ ಈಜು ಬಾರದೆ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕಡದದ ಜಯರಾಮ ಗೌಡ(52) ಮೃತಪಟ್ಟ ದುರ್ದೈವಿ.ಚಿತ್ರಾಪು ರೆಸಾರ್ಟ್ನಲ್ಲಿ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅವರು ಹೊಳೆಗೆ ಈಜಾಡಲು ತೆರಳುವ ಸಂದರ್ಭ ಜೀವ ರಕ್ಷಕ ಸಾಧನಗಳನ್ನು ನೀಡದಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಇಂತಹ ರೆಸಾರ್ಟ್ಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೇಂದು ಸ್ಥಳೀಯರು ಆಗ್ರಹಿಸಿದ್ದಾರೆ.