Header Ads
Header Ads
Header Ads
Breaking News

ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಒತ್ತು ಅಗತ್ಯ: ಭಾಮಿ ಶೆಣೈ

ಸರ್ಕಾರದ ಜೊತೆ ಸಾರ್ವಜನಿಕರು ಮತ್ತು ಶಿಕ್ಷಕ ವರ್ಗವೂ ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಹೆಚ್ಚು ಆಸಕ್ತಿ ತಾಳಬೇಕು ಎಂದು ಹಿರಿಯ ಶಿಕ್ಷಣ ತಜ್ಞ ಭಾಮಿ ಶೆಣೈ
ಹೇಳಿದರು. ಅವರು ಎಸ್.ಡಿ.ಎಂ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹೊಸ ಶಿಕ್ಷಣ ನೀತಿಗೆ ಶಿಕ್ಷಣ ಸಂಸ್ಥೆಗಳ ತಯಾರಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಸ ಶಿಕ್ಷಣ ನೀತಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಜವಾಬ್ದಾರಿ ಶಿಕ್ಷಕರಿಗಿರುತ್ತದೆ. ಪಾಠದ ಮೂಲಕ ಮೌಲ್ಯಗಳನ್ನು ಕಲಿಸಲು ಹೊಸ ನೀತಿ ಸಹಕಾರಿಯಾಗಿದೆ ಎಂದು ವಿವರಿಸಿದರು. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಅರ್ಥಶಾಸ್ತ್ರ ಅಥವಾ ಸಾಹಿತ್ಯವನ್ನು ಓದುವ ಸೌಕರ್ಯವನ್ನು ಹೊಸ ಶಿಕ್ಷಣ ನೀತಿ ನೀಡಲಿದೆ. ಹೊಸ ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ದಾರಿಯನ್ನು ತೋರಲಿದೆ. ಅಲ್ಲದೇ ಕಲಿಕೆಯ ಹೊಸ ಆಯಾಮವನ್ನು ತೆರೆದಿಡಲಿದೆ ಎಂದು ಅಭಿಪ್ರಾಯಪಟ್ಟರು. ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ ಯಶೋವರ್ಮ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಸತೀಶ್ಚಂದ್ರ ಸ್ವಾಗತಿಸಿದರು. ಎಸ್ ಡಿ ಎಂ ಕಾಲೇಜು ಉಜಿರೆ ಮತ್ತು ಮಂಗಳೂರಿನ ಎಸ್ ಡಿ ಎಂ ಮ್ಯಾನೇಜ್ ಮೆಂಟ್ ಕಾಲೇಜುಗಳ ಪ್ರಾಧ್ಯಾಪಕರು ಸಂವಾದದಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *