Header Ads
Breaking News

ಹೊಸ ಸರಕಾರ ಬಂದರೂ ಯಾವುದೇ ನೂತನ ಯೋಜನೆ ಜಾರಿಗೆ ಬಂದಿಲ್ಲ : ಮುಹಮ್ಮದ್ ಕುಂಞಿ ಒತ್ತಾಯ

ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿಯು ಮುಂದಿನ ಸಂಪುಟ ವಿಸ್ತರಣೆ ಬಳಿಕ ಧೂಳೀಪಟವಾಗಲಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ ಭವಿಷ್ಯ ನುಡಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ತುರ್ತು ಪರಿಹಾರ ಕೇಂದ್ರದ ಖಜಾನೆಯಲ್ಲಿ ನಯಾಪೈಸೆ ಇಲ್ಲ. ಹೊಸ ಸರಕಾರ ಬಂದರೂ ಯಾವುದೇ ನೂತನ ಯೋಜನೆಗಳನ್ನು ಘೋಷಿಸುತ್ತಿಲ್ಲ. ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ನೀಡುತ್ತಿದ್ದ ಅನುದಾನದಲ್ಲೂ ಭಾರೀ ಕುಸಿತ ಕಂಡಿದೆ. ಒಂದೊಂದು ರೂಪಾಯಿಗೆ ಕೈವೊಡ್ಡಿ ನಿಲ್ಲುವ ಪರಿಸ್ಥಿತಿ ಇದೆ. ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿಯು ಮುಂದಿನ ಸಂಪುಟ ವಿಸ್ತರಣೆ ಬಳಿಕ ಧೂಳೀಪಟವಾಗಲಿದೆ ಎಂದು ಅವರು ಹೇಳಿದರು. ರಾಜ್ಯದಾದ್ಯಂತ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡಲಾಗುವುದು. ಈ ಬಗ್ಗೆ ಸಮಿತಿ ರಚನೆ ಮಾಡಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಝೀಝ್ ಕುದ್ರೋಳಿ, ಸುಶಿಲ್ ನರೋನ್ಹ, ಅಕ್ಷಿತ್ ಸುವರ್ಣ, ಸುಮತಿ ಹೆಗಡೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *