Header Ads
Breaking News

ಹೋಮಿಯೋಪತಿ ವೈದ್ಯಕೀಯ ವಿಭಾಗದ ಪರೀಕ್ಷೆಗಳ ಫಲಿತಾಂಶ ಪ್ರಕಟ : ಫಾದರ್ ಮುಲ್ಲರ್ ಹೋಮಿಯೋಪತಿಗೆ ಹಲವು ರ್‍ಯಾಂಕ್‌ಗಳು

ಕಳೆದ 2019ರ ಎಪ್ರಿಲ್ ಮತ್ತು 2020ರ ನವೆಂಬರ್‌ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿರುವ ಸ್ನಾತಕೋತ್ತರ ಹೋಮಿಯೋಪತಿ ವೈದ್ಯಕೀಯ ವಿಭಾಗದ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿವಿಧ ವಿಭಾಗಗಳಲ್ಲಿ ಹಲವು ವಿದ್ಯಾರ್ಥಿಗಳು ರ್‍ಯಾಂಕ್ ಗಳನ್ನು ಗಳಿಸಿದ್ದಾರೆ.ಡಾ.ಅಂಜಲಿ ಎಂ.ಆರ್. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಉನ್ನತ ಶ್ರೇಣಿಯ ಅಂಕಗಳನ್ನು ಗಳಿಸಿ ಎಂ.ಡಿ (ಹೋಮ್) ಮೆಟೀರಿಯಾ ಮೆಡಿಕಾ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಕಟನೆ ತಿಳಿಸಿದೆ.

ಎಪ್ರಿಲ್ 2019 ಮತ್ತು ನವೆಂಬರ್ 2020ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ನಡೆಸಿರುವ ಸ್ನಾತಕೋತ್ತರ ಹೋಮಿಯೋಪತಿ ವೈದ್ಯಕೀಯ ವಿಭಾಗದ ಪರೀಕ್ಷೆಗಳಲ್ಲಿ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಶೇಷವಾದ ಸಾಧನೆಯನ್ನು ಮಾಡಿ ಈ ಕೆಳಗಿನ ರ್‍ಯಾಂಕ್ ಗಳನ್ನು ಪಡೆದಿರುತ್ತಾರೆ.

ಎಂ.ಡಿ (ಹೋಮ್) ಮೆಟೀರಿಯಾ ಮೆಡಿಕಾ:

1ನೇ ರ್‍ಯಾಂಕ್ : ಡಾ ಅಂಜಲಿ ಎಂ.ಆರ್.
7ನೇ ರ್‍ಯಾಂಕ್: ಡಾ.ಅಲೋಕ್ ರಾಮದಾಸ್
9ನೇ ರ್‍ಯಾಂಕ್: ಡಾ.ಕವಿತಾ ಮ್ಯಾಥ್ಯೂ

ಎಂ.ಡಿ (ಹೋಮ್) ಆರ್ಗನಾನ್ ಆಫ್ ಮೆಡಿಸಿನ್:
2ನೇ ರ್‍ಯಾಂಕ್: ಡಾ.ಸೌಮ್ಯಾ ಪೀಟರ್
3ನೇ ರ್‍ಯಾಂಕ್: ಡಾ.ಅಮಾಲಾ ಸಿರಿಯಾಕ್

ಎಂ.ಡಿ (ಹೋಮ್) ಪೀಡಿಯಾಟ್ರಿಕ್ಸ್:
3ನೇ ರ್‍ಯಾಂಕ್: ಡಾ.ಆಶಿಮಾ ಅಲೆಕ್ಸ್

ಎಂ.ಡಿ (ಹೋಮ್) ಫಾರ್ಮಸಿ:
1ನೇ ರ್‍ಯಾಂಕ್: ಡಾ.ಅನುಷಾ
2ನೇ ರ್‍ಯಾಂಕ್: ಡಾ.ಅಕ್ಷತಾ ಹಲ್ಲಾದಮಲ್
3ನೇ ರ್‍ಯಾಂಕ್: ಡಾ.ಜುತಿಕಾ ಗೊಗೊಯ್

ಎಂ.ಡಿ (ಹೋಮ್) ಪ್ರಾಕ್ಟೀಸ್ ಆಫ್ ಮೆಡಿಸಿನ್ :
1ನೇ ರ್‍ಯಾಂಕ್: ಡಾ.ಮೇಬಲ್ ಕ್ಲಾರಾ ಡಿಮೆಲ್ಲೊ

ಎಂ.ಡಿ (ಹೋಮ್) ಸೈಕಿಯಾಟ್ರಿ :
1ನೇ ರ್‍ಯಾಂಕ್: ಡಾ.ಜಸ್ಟಿನಾ ಎಂ. ಸ್ಟೀಫನ್
2ನೇ ರ್‍ಯಾಂಕ್: ಡಾ.ಎಸ್.ಶ್ರೀರಾವಲಿ

ಎಂ.ಡಿ (ಹೋಮ್) ರೆಪರ್ಟರಿ:
1ನೇ ರ್‍ಯಾಂಕ್: ಡಾ.ಅಪರ್ಣಾ ಸುಧೀಂದ್ರನ್
3ನೇ ರ್‍ಯಾಂಕ್: ಡಾ.ಶಿಲ್ಪಾ ಪ್ರಸಾದ್

ಚಿನ್ನದ ಪದಕ:-
ಡಾ ಅಂಜಲಿ ಎಂ ಆರ್ ಇವರು ವಿಶ್ವವಿದ್ಯಾಲಯಲ್ಲಿ ಉನ್ನತ ಶ್ರೇಣಿ ಅಂಕಗಳನ್ನು ಪಡೆದು ಎಂ.ಡಿ (ಹೋಮ್) ಮೆಟೀರಿಯಾ ಮೆಡಿಕಾ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಆಡಳಿತ ವರ್ಗದ ಮತ್ತು ಅಧ್ಯಾಪಕರ ವರ್ಗ ಈ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾರೆ.

Related posts

Leave a Reply

Your email address will not be published. Required fields are marked *