Header Ads
Header Ads
Breaking News

15ನೇ ವರ್ಷದ “ಆಳ್ವಾಸ್ ನುಡಿಸಿರಿ”ಗೆ ಭರದ ಸಿದ್ಧತೆ

ಆಳ್ವಾಸ್ ನುಡಿಸಿರಿ-2018 ಸಮ್ಮೇಳನವು ನವೆಂಬರ್ 16,17 ಮತ್ತು 18ರಂದು ಮೂಡುಬಿದರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಕವಿ ರತ್ನಾಕರವರ್ಣಿ ವೇದಿಕೆ, ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಜರುಗಲಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಎನ್. ಮೋಹನ್ ಆಳ್ವ ತಿಳಿಸಿದರು.ಅವರು ಮೂಡುಬಿದರೆಯ ವಿದ್ಯಾಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಕಳೆದ 14 ವರ್ಷಗಳಿಂದ ನಾಡು ನುಡಿ ಸಂಸ್ಕೃತಿಕ ಸಮ್ಮೇಳನ ಆಳ್ವಾಸ್ ನುಡಿಸಿರಿ ಕನ್ನಡ ಬಾಂಧವರ ಸಹಾಯ- ಸಹಕಾರ ಪ್ರೀತಿ ವಿಶ್ವಾಸಗಳೊಂದಿಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಇದೀಗ 15ನೇ ವರ್ಷ ಸಮ್ಮೇಳನ ಸಿದ್ದತೆಗಳು ಭರದಿಂದ ಸಾಗುತ್ತಿದೆ ಎಂದು ಹೇಳಿದ ಅಳ್ವ ಅವರು, ಅಳ್ವಾಸ್ ನುಡಿಸಿರಿಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಮಲ್ಲಿಕಾ ಎಸ್. ಘಂಟಿ, ಮತ್ತು ಡಾ. ಷ. ಶೆಟ್ಟರ್ ಉದ್ಘಾಟಿಸಲಿದ್ದಾರೆ ಎಂದುಮಾಹಿತಿ ನೀಡಿದರು.

Related posts

Leave a Reply