Header Ads
Breaking News

2018-19ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಕಲ್ಲಮುಂಡ್ಕೂರು ಗ್ರಾಪಂ ಆಯ್ಕೆ

2018-19ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಕಲ್ಲಮುಂಡ್ಕೂರು ಗ್ರಾಪಂ ಆಯ್ಕೆಯಾಗಿದೆ. ಪುರಸ್ಕಾರಕ್ಕೆ ದ.ಕ ಜಿಲ್ಲೆ ಐದು ತಾಲೂಕಿನ 25 ಗ್ರಾಪಂಗಳು ಆಯ್ಕೆಯಾಗಿದ್ದು, ಕಲ್ಲಮುಂಡ್ಕೂರು ಗ್ರಾ.ಪಂ ಅತೀ ಹೆಚ್ಚು 143 ಅಂಕಗಳನ್ನು ಪಡೆಯುವ ಮೂಲಕ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪಿಡಿಒ ಉಗ್ಗಪ್ಪ ಮೂಲ್ಯ, ನಮ್ಮ ಗ್ರಾಪಂ ಮೊದಲ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಅಂಗನವಾಡಿ, ಶೌಚಾಲಯ, ಶುಚಿತ್ವ, ಉದ್ಯೋಗ ಖಾತರಿ ಕೆಲಸಗಳು ತ್ವರಿತಗತಿಯಲ್ಲಿ ನಡೆಯುತ್ತಿದೆ. ಶೇ.99 ತೆರಿಗೆ ವಸೂಲಾತಿಯಾಗಿದೆ. ಪೈಪ್ ಕಾಂಪೋಸ್ಟ್ ಅಳವಡಿಕೆಯಲ್ಲಿ ಕಲ್ಲಮುಂಡೂರು ಗ್ರಾಪಂ ತಾಲೂಕು ಮಟ್ಟದಲ್ಲಿ ಮೊದಲ ಸ್ಥಾನಿಯಾಗಿದೆ. ಪ್ರಶಸ್ತಿ ಅರ್ಹತೆ ಪಡೆಯುವಲ್ಲಿ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಸಿಬ್ಬಂದಿಗಳ ಸಹಕಾರ ಅಪಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

 

Related posts

Leave a Reply

Your email address will not be published. Required fields are marked *