Header Ads
Breaking News

2020-21 ನೇ ಸಾಲಿನ ಸನ್ನದು ಶುಲ್ಕವನ್ನು ಕಟ್ಟಲು 4 ತಿಂಗಳು ನೀಡಬೇಕು : ಉಡುಪಿ ಜಿಲ್ಲಾ ವೈನ್ ಮಚರ್ಂಟ್ಸ್ ಅಸೋಸಿಯೇಶನ್ ಆಗ್ರಹ

2020-21 ನೇ ಸಾಲಿನ ಸನ್ನದು ಶುಲ್ಕವನ್ನು ಕಟ್ಟಲು 4 ತಿಂಗಳು ನೀಡಬೇಕು. ಕನಿಷ್ಟ ಒಂದು ತಿಂಗಳ ಸನ್ನದು ಶುಲ್ಕವನ್ನು ಮುಂದಿನ ವರ್ಷದ ಸನ್ನದು ಶುಲ್ಕದೊಂದಿಗೆ ಹೊಂದಾಣಿಕೆ ಮಾಡಬೇಕು ಎಂದು ಉಡುಪಿ ಜಿಲ್ಲಾ ವೈನ್ ಮಚರ್ಂಟ್ಸ್ ಅಸೋಸಿಯೇಶನ್ ಆಗ್ರಹಿಸಿದೆ. ಈ ಬಗ್ಗೆ ಮಾತನಾಡಿದ ಉಡುಪಿ ಜಿಲ್ಲಾ ವೈನ್ ಮಚ್‍ರ್ಂಟ್ಸ್ ಅಸೋಸಿಯೇಶನ್ ಅದ್ಯಕ್ಷ ಗೋವಿಂದರಾಜ್ ಹೆಗ್ಡೆ ಸನ್ನದುರಾರರ ಅನೇಕ ಬೆಡಿಕೆಗಳನ್ನು ಇಡೇರಿಸುವಂತೆ ಈಗಾಗಲೇ ಮುಖ್ಯಮಂತ್ರಿ, ಅಬಕಾರಿ ಸಚಿವರಿಗೆ ಆಗ್ರಹಿಸಿದ್ದೇವೆ. ಲಾಕ್ ಡೌನ್ ಆದ ಬಳಿಕ ಸಾಕಷ್ಟು ಸನ್ನದುದಾರರು ಆರ್ಥಿಕ ಸಂಕಕ್ಷ್ಟಕ್ಕೆ ಒಳಗಾಗಿದ್ದಾರೆ. ವಿದ್ಯುತ್ ಬಿಲ್ ಪಾವತಿ ರಿಯಾಯೊತಿ ಬಗ್ಗೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು. ಕೇಂದ್ರ ಸರ್ಕಾರ ಬ್ಯಾಂಕ್ ಸಾಲದ ಕಂತು ಮತ್ತು ಬಡ್ಡಿ ಮನ್ನಾ ಮಾಡಬೇಕು. ಆಸ್ತಿ ತೆರಿಗೆ, ಕಟ್ಟಡ ತೆರಿಗೆಗಳಲ್ಲಿ ರಿಯಾಯಿತಿ ನೀಡಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು. ರೆಸ್ಟೋರೆಂಟ್ ನೀಡುವ ಪರವಾನಿಗೆಯಲ್ಲಿ ರಿಯಾಯಿತಿ ನೀಡಬೇಕು ಹೀಗೆ ಹಲವಾರು ಬೇಡಿಕೆ ಇಡೇರಿಸುವಂತೆ ಅಗ್ರಹಿಸಿದರು.

Related posts

Leave a Reply

Your email address will not be published. Required fields are marked *