Header Ads
Header Ads
Header Ads
Header Ads
Header Ads
Header Ads
Breaking News

25 ದಿನಗಳನ್ನು ಪೂರೈಸಿದ ತುಳು ಸಿನಿಮಾ ಗಿರಿಗಿಟ್ : ಶುಭ ಹಾರೈಸಿದ ನಟ ರಿಷಭ್ ಶೆಟ್ಟಿ

ಕೋಸ್ಟಲ್‍ವುಡ್‍ನಲ್ಲಿ ತುಳು ಸಿನಿರಸಿಕರಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಚಿತ್ರ ಎಂದರೆ ಅದು ಗಿರಿಗಿಟ್. ಈಗಾಗಲೇ ತುಳು ಪ್ರೇಕ್ಷಕರ ಮನಗೆದ್ದ ಸಿನಿಮಾ ಗಿರಿಗಿಟ್ 25 ದಿನಗಳನ್ನು ಪೂರೈಸಿ ಶತ ದಿನಗಳತ್ತ ಮುನ್ನುಗುತ್ತಿದೆ ಮಾತ್ರವಲ್ಲ ಸ್ಯಾಂಡಲ್‍ವುಡ್ ನಟರೂ ಸಹ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಆಗಸ್ಟ್ 23 ರಂದು ತೆರೆಕಂಡಿದ್ದ ಈ ಚಿತ್ರ ಈಗ ಚಿತ್ರತಂಡ ಮೊಗದಲ್ಲಿ ನಗುತರಿಸಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಎಲ್ಲೆಡೆಯಿಂದ ಸಿಗುತ್ತಿರುವ ಪ್ರತಿಕ್ರಿಯೆ. ಹೌದು, “ಗಿರಿಗಿಟ್’ ಚಿತ್ರ ನೋಡಿದವರು ಮೆಚ್ಚಿಕೊಳ್ಳುವ ಮೂಲಕ ಚಿತ್ರ ಹಿಟ್‍ಲಿಸ್ಟ್ ಸೇರಿದ ಖುಷಿಯಲ್ಲಿದೆ ಚಿತ್ರತಂಡ. ಹೌದು ಗಿರಿಗಿಟ್ ತುಳು ಸಿನಿಮಾ ಈಗಾಗಲೇ ಈ ಚಿತ್ರಕ್ಕೆ ರಾಜ್ಯಾದಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದ್ದು, 25 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದೆ ಚಿತ್ರತಂಡ. ರೂಪೇಶ್ ಶೆಟ್ಟಿ ಅವರು ಮೊದಲು ಆ್ಯಕ್ಷನ್ ಕಟ್ ಹೇಳಿದ ಸಿನೆಮಾವಿದು. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರು ಈ ಸಿನೆಮಾದಲ್ಲಿರುವ ಕಾರಣದಿಂದ ಗಿರಿಗಿಟ್ ಚಿತ್ರ ಸಿನಿರಸಿಕರ ಮನಗೆದ್ದಿದೆ.

ಈ ನಡುವೆ ಸ್ಯಾಂಡಲ್‍ವುಡ್ ಸ್ಟಾರ್‍ನಟ ರಿಷಭ್ ಶೆಟ್ಟಿ ಮಂಗಳೂರಿಗೆ ಬಂದು ಚಿತ್ರವನ್ನು ವೀಕ್ಷಿಸಿ ಚಿತ್ರದ 25 ದಿನಗಳ ಸಂಭ್ರಮದಲ್ಲಿ ಪಾಲ್ಗೊಂಡರು. ರೂಪೇಶ್ ಶೆಟ್ಟಿ ಮತ್ತು ತಂಡಕ್ಕೆ ತಮ್ಮ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೊಂದು ಮನೆಮಂದಿ ಕೂತು ನೋಡಬಹುದಾದ ಅತ್ಯುತ್ತಮ ಕಾಮಿಡಿ ಸಿನಿಮಾ, ಕೋಸ್ಟಲ್‍ವುಡ್‍ನ ಬೆಳವಣಿಗೆ ಇದೊಂದು ಅತ್ಯುತ್ತಮ ಕೊಡುಗೆ ಎಂದಿದ್ದಾರೆ.

ಇದೇ ವೇಳೆ ಚಿತ್ರದ ನಟ ನಿರ್ಮಾಪಕ ರೂಪೇಶ್ ಶೆಟ್ಟಿಯವರು ಮಾತನಾಡಿ, ಸಿನಿಮಾವನ್ನು ಎಲ್ಲಿಯೆಲ್ಲಾ ಬಿಡುಗಡೆ ಮಾಡಿದ್ದೇವೆಯೋ ಅಲ್ಲೆಲ್ಲಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಗಿರಿಗಿಟ್ ಚಿತ್ರಕ್ಕೆ ಯಶಸ್ವಿಗೊಳಿಸಿದ ಪ್ರೇಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಒಟ್ಟಿನಲ್ಲಿ ಕೋಸ್ಟಲ್‍ವುಡ್‍ನಲ್ಲಿ ತೆರೆಕಂಡ ಗಿರಿಗಿಟ್ ತುಳು ಸಿನಿಮಾಕ್ಕೆ ಕೋಸ್ಟಲ್‍ವುಡ್ ಪ್ರೇಕ್ಷಕ ಫುಲ್ ಫಿದಾ ಆಗಿದ್ದಂತೂ ಸತ್ಯ. ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗಿತ್ತಿರುವ ಚಿತ್ರ 25 ದಿನಗಳನ್ನು ಪೂರೈಸಿ ಶತ ದಿನಗಳತ್ತ ಮುನ್ನುಗ್ಗಲಿ ಎನ್ನುವುದೇ ನಮ್ಮ ಆಶಯ

Related posts

Leave a Reply

Your email address will not be published. Required fields are marked *