Header Ads
Header Ads
Header Ads
Breaking News

26 ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಅಡ್ವೆ ನಂದಿಕೂರಿನಲ್ಲಿ ನಡೆದ ಕಂಬಳೋತ್ಸವ ನಂದಿಕೂರು ದೇವಳದ ಆಡಳಿತ ಮೊಕ್ತೇಸರ ಮಧ್ವರಾಯರಿಂದ ಚಾಲನೆ

ಅಡ್ವೆ ನಂದಿಕೂರಿನ 26 ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳೋತ್ಸವವನ್ನು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್ ಶನಿವಾರ ಉದ್ಘಾಟಿಸಿದರು.

ಈ ಸಂದರ್ಭ ಪಾದೆಬೆಟ್ಟು ಸುಬ್ರಹ್ನಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ಶೆಟ್ಟಿ, ಅಡ್ವೆ ಬ್ರಹ್ಮ ಬೈದರ್ಕಳ ಸೇವಾ ಸಮಿತಿಯ ಸುಂದರ್ ಯು ಸುವರ್ಣ, ಎಲ್ಲೂರು ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ವೈ. ಪ್ರಪುಲ್ಲ ಶೆಟ್ಟಿ, ಅಡ್ವೆ ನಂದಿಕೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಅಧ್ಯಕ್ಷರಾದ ಅಡ್ವೆ ಮೂಡ್ರಗುತ್ತು ಚಿತ್ರಂಜನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಸುರೇಶ್ ಎಮಾಳ್ ಪಡುಬಿದ್ರಿ

Related posts

Leave a Reply