Header Ads
Header Ads
Breaking News

ದೇಸೀ ತಳಿಯ ನಾಯಿ-ಬೆಕ್ಕಿನ ಮರಿಗಳ ದತ್ತುಕೊಡುವ ಶಿಬಿರ: ಆನಿಮಲ್ ಕೇರ್ ಟ್ರಸ್ಟ್

ನಾನಾ ಕಾರಣಗಳಿಂದ ಬೀದಿಪಾಲಾಗಿ ಸೂರನ್ನು ಕಳೆದುಕೊಂಡು ಕಂಗಾಲಾಗಿರುವ ದೇಸೀ ತಳಿಯ ನಾಯಿ-ಬೆಕ್ಕಿನ ಮರಿಗಳಿಗೆ ಹೊಸಜೀವನ ಕಲ್ಪಿಸುವ ನಿಟ್ಟಿನಲ್ಲಿ ಆನಿಮಲ್ ಕೇರ್ ಟ್ರಸ್ಟ್ ಮತ್ತು ಮಂಗಳೂರಿನ ಕಾರ್ ಡೆಕೋರ್ ಜಂಟಿಯಾಗಿ ದೇಸೀ ತಳಿಯ ನಾಯಿ-ಬೆಕ್ಕಿನ ಮರಿಗಳ ದತ್ತುಕೊಡುವ ಶಿಬಿರವನ್ನು ಮಂಗಳೂರಿನ ಕಾರ್‌ಡೆಕೋರ್ ಶೋರೂಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಶಕ್ತಿನಗರದಲ್ಲಿರುವ ಆನಿಮಲ್ ಕೇರ್ ಟ್ರಸ್ಟ್. ಬೀದಿಪಾಲಾಗುವ ಮುಗ್ಧ ಪ್ರಾಣಿಗಳಿಗೆ ಬೆಚ್ಚಗಿನ ಸೂರು ಒದಗಿಸುವ ಉದ್ದೇಶದಿಂದ ನಿರಂತರವಾಗಿ ದೇಸೀ ತಳಿಯ ಬೆಕ್ಕು ಮತ್ತು ನಾಯಿಮರಿಗಳ ದತ್ತುಸ್ವೀಕಾರ ಶಿಬಿರವನ್ನು ವಿವಿಧ ಸಂಘಸಂಸ್ಥೆಗಳ ಸಹಕಾರದಿಂದ ನಗರದಾದ್ಯಂತ ಆಯೋಜಿಸಿಕೊಂಡು ಬರುತ್ತಿದೆ. ಇದೀಗ ಮಂಗಳೂರಿನ ಕಾರ್‌ಡೆಕೋರ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ದೇಸೀ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತು ಸ್ವೀಕಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಹಲವಾರು ಮಂದಿ ದೇಶೀ ನಾಯಿ ಹಾಗೂ ಬೆಕ್ಕುಗಳನ್ನ ಖರೀದಿಸಿದರು. ಮಾತ್ರವಲ್ಲದೇ ದೇಶಿ ನಾಯಿ ಹಾಗೂ ಬೆಕ್ಕುಗಳ ಸಾಕಾಣಿಕೆ ಕುರಿತು ಆನಿಮಲ್ ಕೇರ್ ಟ್ರಸ್ಟ್‌ನ ಸದಸ್ಯರು ಮಾಹಿತಿಯನ್ನ ನೀಡುತ್ತಿದ್ದರು.
 ಮಂಗಳೂರಿನ ಕದ್ರಿ ಶಿವಭಾಗ್ ಬಳಿ ಇರುವ ಕಾರ್‌ಡೆಕೋರ್ ಮಳಿಗೆಯಲ್ಲಿ ದೇಸೀ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತುಕೊಡುವ ಶಿಬಿರದಲ್ಲಿ ಹಲವು ಮಂದಿ ಭಾಗವಹಿಸಿದ್ದರು. ಆನಿಮಲ್ ಕೇರ್ ಟ್ರಸ್ಟ್‌ನ ಆಶ್ರಯದಲ್ಲಿ ಅನೇಕ ನಾಯಿ ಮತ್ತು ಬೆಕ್ಕಿನ ಮರಿಗಳು ದತ್ತು ಪಡೆದುಕೊಂಡರು. ಕೆಲವರು ದೇಶಿ ನಾಯಿಗಳನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಾರೆ.ದೇಶಿ ನಾಯಿಯ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನ ತೋರ್ಪಡಿಸಿಕೊಳ್ಳುತ್ತಾರೆ ಅಂತಾರೆ ಕಾರ್‌ಡೆಕೋರ್‌ನ ಮಾಲಕ ಮುಖೇಶ್ ಹೆಗ್ಡೆ.
 ಪ್ರಾಣಿಗಳ ಸುರಕ್ಷತಾ ದೃಷ್ಟಿಯಿಂದ ಕೆಲವೊಂದು ನಿಯಮಗಳನ್ನು ಕೂಡ ರೂಪಿಸಲಾಗಿದೆ. ನೋಂದಣಿ ಶುಲ್ಕ 200 ರೂ. ಇದ್ದು, ಇದರಲ್ಲಿ ರೇಬೀಸ್ ತಡೆಯುವ ಲಸಿಕೆಯ ಶುಲ್ಕವೂ ಸೇರಿದೆ. ಶಿಬಿರದಲ್ಲಿ ಪ್ರಾಣಿಗಳನ್ನು ದತ್ತುಪಡೆಯಲು ನಿಮ್ಮ ವಿಳಾಸದ ನಕಲು ಪತ್ರವನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಅಲ್ಲದೆ ನಾಯಿ-ಬೆಕ್ಕಿಗೆ ಸಂತಾನವಾಗದಂತೆ ಚಿಕಿತ್ಸೆಯನ್ನೂ ಮಾಡಿಸಬೇಕು. ಜೊತೆಗೆ ನಾಯಿ-ಬೆಕ್ಕಿನ ಮರಿಯ ಬಗ್ಗೆ ವರದಿ ನೀಡುವುದು ಕೂಡ ಕಡ್ಡಾಯವಾಗಿದೆ ಇದರ ಜೊತೆಯಲ್ಲಿ ಜನರ ಸಾಮಾನ್ಯರಿಗೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಈ ಶಿಬಿರವನ್ನ ಆಯೋಜನೆ ಮಾಡಲಾಗುತ್ತಿದೆ
ಒಟ್ಟಿನಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ಆನಿಮಲ್ ಕೇರ್ ಟ್ರಸ್ಟ್ ಹಾಗೂ ಕಾರ್ ಡೆಕೋರ್ ಜಂಟಿಯಾಗಿ ದೇಸೀ ತಳಿಯ ನಾಯಿ-ಬೆಕ್ಕಿನ ಮರಿಗಳ ದತ್ತುಕೊಡುವ ಶಿಬಿರಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿತು.

Related posts

Leave a Reply

Your email address will not be published. Required fields are marked *