Header Ads
Header Ads
Breaking News

5 ವರ್ಷದ ಅವಧಿಯಲ್ಲಿ ಜಿಲ್ಲೆಗೆ ನೆನಪಿಡುವಂತಹ ಯೋಜನೆ ತರಲಾಗುವುದು: ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ

ಉಳ್ಳಾಲ : ಲೋಕಸಭಾ ಚುನಾವಣೆ ಸಂದರ್ಭ ಮಂಗಳೂರು ಕ್ಷೇತ್ರದಲ್ಲಿ ಚುನಾವಣಾ ಕಿಚ್ಚು ಹಚ್ಚಲಾಗಿತ್ತು. ಕಳೆದ ಬಾರಿ ಜಿಲ್ಲೆಯಲ್ಲಿ ಶಾಸಕರು ಇರಲಿಲ್ಲ, ಈ ಬಾರಿ ಏಳು ಶಾಸಕರಿದ್ದು ನಾವೆಲ್ಲಾ ಸೇರಿ ಉಳ್ಳಾಲವನ್ನು ಹೆಚ್ಚು ಗಮನ ಹರಿಸುತ್ತೇವೆ, ಐದು ವರ್ಷದ ಅವಧಿಯಲ್ಲಿ ಜಿಲ್ಲೆಗೆ ನೆನಪಿಡುವಂತಹ ಯೋಜನೆ ತರಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು.

ಮಂಗಳೂರು ಕ್ಷೇತ್ರ ಬಿಜೆಪಿ ವತಿಯಿಂದ ಅಡ್ಕ ಶ್ರೀ ಭಗವತೀ ಸಭಾ ಮಂದಿರದಲ್ಲಿ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕಳೆದ 28 ವರ್ಷಗಳಿಂದ ಬಿಜೆಪಿ ಸಂಸದನ ಸ್ಥಾನ ಉಳಿಸಿಕೊಂಡು ಬಂದಿದ್ದು ಮಂಗಳೂರು ಕ್ಷೇತ್ರ ಮಾತ್ರ. ಮೋದಿ 2014ರಲ್ಲಿ ಮೋದಿ ಪ್ರಧಾನಿಯಾದಾಗ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಬಗ್ಗೆ ಹೇಳಿದ್ದರು. ಇಂದು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನ ಪಡೆಯಲೂ ಅನರ್ಹವಾಗಿದ್ದು ಮೋದಿಯವರ ಮಾತು ನಿಜವಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,ಇಂದು ಬಿಜೆಪಿ ಹಳ್ಳಿಗಳಲ್ಲೂ ಬಲಿಷ್ಠಗೊಂಡು ದೇಶದಲ್ಲಿ ಅಧಿಕಾರಕ್ಕೆ ಬರಲು ರಾಷ್ಟ್ರಕ್ಕಾಗಿ ತೋರಿಸಿದ ಬದ್ದತೆ ಕಾರಣ. ಮಂಗಳೂರು ಕ್ಷೇತ್ರದಲ್ಲಿ ಕಾರ್ಯಕರ್ತರ ಅತ್ಯಂತ ಹೆಚ್ಚು ದುಡಿಮೆ, ಅತ್ಯಂತ ಕಡಿಮೆ ಖರ್ಚಾಗಿ ಅತ್ಯಂತ ಹೆಚ್ಚು ಮತಗಳಿಂದ ಬಿಜೆಪಿ ಜಯ ಗಳಿಸಿದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಜಯರಾಂ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ನಮಿತಾ ಶ್ಯಾಂ, ಚಂದ್ರಶೇಖರ ಉಚ್ಚಿಲ್, ಮನೋಜ್ ಆಚಾರ್ಯ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಹರಿಯಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *