Header Ads
Header Ads
Breaking News

93.5 ರೆಡ್ ಎಫ್‌ಎಂ ವತಿಯಿಂದ ರೆಡ್ ಛಾಪು ಕಾರ್ಯಕ್ರಮ

 ಮಂಗಳೂರಿನ ಹೆಸರಾಂತ ಎಫ್‌ಎಂ ಸ್ಟೇಷನ್ ಆಗಿರುವ 93.5 ರೆಡ್ ಎಫ್‌ಎಂ ಕಳೆದ ಹಲವು ವರ್ಷಗಳಿಂದ ರೆಡ್ ಛಾಪು ಅನ್ನುವ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ. ಈ ಪೈಕಿ ಬೆಸ್ಟ್ ಜ್ಯೂಸ್ ಜಂಕ್ಷನ್ ಇನ್ ಮ್ಯಾಂಗ್ಲೂರ್‌ನಲ್ಲಿ ನಗರದ ಜನತೆ ಮಂಗಳೂರಿನ ಜ್ಯೂಸ್ ಜಂಕ್ಷನ್, ಜ್ಯೂಸ್ ವಲ್ಡ್ ಮತ್ತು ಡಿಂಕಿ ಡೈನ್‌ಅನ್ನು ಆಯ್ಕೆ ಮಾಡಿದ್ದಾರೆ.

 ಮಂಗಳೂರಿನ ಜನತೆಯ ಮನೆ ಮತಾಗಿರುವ ಮಂಗಳೂರಿನ ಫೇವ್‌ರೆಟ್ ರೇಡಿಯೋ ಸ್ಟೇಷನ್ ಎಂಬ ಹೆಗ್ಗಳಿಕೆಯನ್ನ ಪಡೆದುಕೊಂಡಿರುವ ಎಫ್‌ಎಂ ರೇಡಿಯೋ ಸ್ಟೇಷನ್ 93.5 ರೆಡ್ ಎಫ್‌ಎಂ ಇದೀಗ ಮತ್ತೊಮ್ಮೆ ರೆಡ್ ಛಾಪು ಅನ್ನುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇಂದು ಮಂಗಳೂರಿನ ಬೆಸ್ಟ್ ಜ್ಯೂಸ್ ಜಂಕ್ಷನ್ ಆಯ್ಕೆ ಪ್ರಕ್ರಿಯೆ ರೆಡ್ ಛಾಪುವಿನಲ್ಲಿ ನಡೆಯಿತು.

 ಇದರಲ್ಲಿ ಮಂಗಳೂರಿನ ಹೆಸರಾಂತ ಮಲ್ಮಠದಲ್ಲಿರುವ ಜ್ಯೂಸ್ ಜಂಕ್ಷನ್, ಕಂಕನಾಡಿಯ ಜ್ಯೂಸ್ ವಲ್ಡ್, ಕದ್ರಿಯಲ್ಲಿರುವ ಡಿಂಕಿ ಡೈನ್ ಬೆಸ್ಟ್ ಥ್ರೀಯಲ್ಲಿ ಆಯ್ಕೆಯಾಗಿದೆ. ಇನ್ನು ರೆಡ್ ಎಫ್ ಎಂ ತಂಡ ಈ ಮೂರು ಜ್ಯೂಸ್ ಜಂಕ್ಷನ್‌ಗೆ ತೆರಳಿ ಮಾಲಕರ ಅನುಭವವನ್ನು ಪಡೆದಕೊಂಡರು. ಇನ್ನೂ ಪಾರ್ಲರ್ ಮಾಲಕರು ಕೂಡ ಜನತೆ ತಮ್ಮ ಜ್ಯೂಸ್ ಅನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ ವೋಟ್ ಮಾಡುವಂತೆ ವಿನಂತಿಸಿಕೊಂಡರು. ಇನ್ನೂ ಈ ಸಂದರ್ಭ ಆರ್‌ಜೆ ಪ್ರಸನ್ನ, ಆರ್‌ಜೆ ತ್ರಿಶೂಲ್ ಆರ್‌ಜೆ ನಯನ ಮತ್ತು ಮಾಂಡೊವಿ ಮೊಟಾರ್ರ್‍ಸ್‌ನ ಸೇಲ್ಸ್ ಎಕ್ಸಿಕ್ಯೂಟಿವ್ ಉಪಸ್ಥಿತರಿದ್ದರು.

ಈ ಮೂರು ಶಾಪ್‌ಗಳಲ್ಲಿ ಯಾರು ಬೆಸ್ಟ್ ಹಾಗೂ ಯಾರಿಗೆ ಈ ಬಾರಿಯ ರೆಡ್ ಎಫ್ ಎಮ್ ಚಾಪು ಬಿರುದು ಎನ್ನುವುದನ್ನು ಜನತೆ ಹೇಳಬೇಕಿದೆ. ಓಟ್ ಮಾಡಲು ಬಯಸುವವರು ರೆಡ್ ಎಫ್‌ಎಮ್ ಆಪ್ ಡೌನ್‌ಲೋಡ್ ಮಾಡಿ ರೆಡ್ ಎಫ್‌ಎಮ್ ಚಾಪುವಿನಲ್ಲಿ ತಮ್ಮ ನೆಚ್ಚಿನ ಹೊಟೇಲ್‌ಗೆ ಓಟ್ ಮಾಡಬಹುದಾಗಿದೆ.

Related posts

Leave a Reply

Your email address will not be published. Required fields are marked *