Breaking News

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜಾವೆಲಿನ್‌ನಲ್ಲಿ ದಾವಿಂದರ್ ಸಿಂಗ್ ಅಂತಿಮ ಸುತ್ತಿಗೆ

ಲಂಡನ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ದಾವಿಂದರ್ ಸಿಂಗ್ ಕಾಂಗ್ ಅಂತಿಮ ಸುತ್ತಿಗೆ ತೇರ್ಗಡೆಗೊಂಡಿದ್ದಾರೆ. ಅಂತಿಮ ಸುತ್ತಿನ ಸ್ಪರ್ಧೆ ಆಗಸ್ಟ್ ೧೨ರಂದು ನಡೆಯಲಿದೆ.
ದಾವಿಂದರ್‌ಸಿಂಗ್ ಅರ್ಹತಾ ಸುತ್ತಿನ ಬಿ ಗ್ರೂಪ್‌ನ ಸ್ಪರ್ಧೆಯಲ್ಲಿ ೮೪.೨೨ ಮೀ ದೂರಕ್ಕೆ ಜಾವೆಲಿನ್ ಎಸೆದು ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಫೈನಲ್‌ಗೆ ಅರ್ಹತೆ ಪಡೆಯಲು ೮೩ ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಬೇಕಿತ್ತು. ಕಾಂಗ್ ಅವರು ಮೊದಲ ಪ್ರಯತ್ನದಲ್ಲಿ ೮೨.೨೨ಮೀ. ಎರಡನೇ ಪ್ರಯತ್ನದಲ್ಲಿ ೮೨.೧೪ ಮೀ ಮತ್ತು ಮೂರನೇ ಯತ್ನದಲ್ಲಿ ೮೪.೨೨ ಮೀ ದೂರಕ್ಕೆ ಜಾವೆಲಿನ ಎಸೆದು ಅಂತಿಮ ಹಂತಕ್ಕೆ ತೇರ್ಗಡೆಯಾದರು.

Related posts

Leave a Reply