

ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗಾಗಿ ಕರೆಯಲಾದ ಕಲಾಪದಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ಕೋಲಾಹಲ ಸೃಷ್ಠಿಯಾಯಿತು. ಪರಿಷತ್ನಲ್ಲಿ ಸದಸ್ಯರುಗಳು ಎಳೆದಾಡಿಕೊಂಡ ಪ್ರಸಂಗ ನಡೆಯಿತು. ವಿಧಾನ ಪರಿಷತ್ ಪೀಠ ಎನ್ನುವುದು ಜನಪ್ರತಿನಿಧಿಗಳ ಜಂಗೀಕುಸ್ತಿಯ ಕಣವಾದ ವಿಚಿತ್ರ ಘಟನೆ ನಡೆಯಿತು.
ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡ ಕುಳಿತುಕೊಂಡಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿ ಕುರ್ಚಿಗೆ ಮುತ್ತಿಗೆ ಹಾಕಿ ಧರ್ಮೇಗೌಡ ಅವರನ್ನು ಹೊರಹಾಕಲು ಯತ್ನಿಸಿದರು. ಧಿಕ್ಕಾರ ಕೂಗಿದ ಕಾಂಗ್ರೆಸ್ ನಾಯಕರು ಸಭಾಪತಿ ಪೀಠದ ಮೇಲಿದ್ದ ವಸ್ತುಗಳನ್ನು ಕಿತ್ತೆಸೆದರು. ಸಭಾಪತಿ ಪೀಠದ ಗಾಜಿನ ಕವಚವನ್ನು ತುಂಡು ಮಾಡಲಾಯಿತು. ತಡೆಯಲು ಬಂದ ಮಾರ್ಷಲ್ಗಳನ್ನೂ ದೂಡಿದ ಘಟನೆಯೂ ನಡೆಯಿತು. ಕಲಾಪದಲ್ಲಿ ಗಲಾಟೆ ಹೆಚ್ಚಾಗುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿದ್ದಾರೆ. ಪೀಠಕ್ಕೆ ಆಗಮಿಸಿ ಮುಂದೂಡಿಕೆ ಘೋಷಣೆ ಮಾಡಿ ಮಾರ್ಷಲ್ ಗಳ ಬೆಂಬಲದೊಂದಿಗೆ ಹೊರ ನಡೆದರು.