Header Ads
Breaking News

ಹಾಸನಾಂಬದಲ್ಲಿ ಸಾವಯವ ಸಂತೆ ವೀಕ್ಷಿಸಿದ ಶಾಸಕ ಪ್ರೀತಮ್ ಜೆ.ಗೌಡ

ಹಾಸನ: ಸಾವಯವ ಕೃಷಿ ಪದ್ಧತಿಗೆ ಮರಳಿದರೆ ಮಾತ್ರ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ಶಾಸಕ ಪ್ರೀತಮ್ ಜೆ.ಗೌಡ ಅಭಿಪ್ರಾಯಪಟ್ಟರು.

ಅವರು ಹಾಸನ ನಗರದ ಹಾಸನಾಂಬ ಒಳಾಂಗಣ ಕ್ರೀಡಾಂಗಣದ ಎದುರು ಭಾನುವಾರ ಸಾವಯವ ಸಂತೆ ವೀಕ್ಷಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇಂದಿನ ಕೃಷಿ ಪದ್ಧತಿಯಲ್ಲಿ ಹೇರಳವಾಗಿ ರಾಸಾಯನಿಕಗಳ ಬಳಕೆಯಾಗುತ್ತಿದ್ದು,ಇದರಿಂದ ಮನುಷ್ಯನ ಆರೋಗ್ಯದ ಮೇಲೆ ತೀರಾ ದುಷ್ಪರಿಣಾಮ ಉಂಟಾಗುತ್ತಿದೆಯಲ್ಲದೇ, ರಾಸಾಯನಿಕಗಳು ಮನುಷ್ಯನ ದೇಹದ ಸೇರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಸಾವಯವ ಕೃಷಿಗೆ ಹಿಂದಿರುಗಬೇಕಿದ್ದು, ಈ ನಿಟ್ಟಿನಲ್ಲಿ ರೈತರ ಸಮುದಾಯ ಸೇರಿದಂತೆ ಎಲ್ಲರೂ ಜಾಗೃತರಾಗಬೇಕಿದೆ ಎಂದು ತಿಳಿಸಿದರು.

ನಗರದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಹಾಗೂ ಸಾವಯವ ಸಂತೆಯಂತಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗುವುದಲ್ಲದೇ,ರೈತ ವಲಯದ ಅಭ್ಯುದಯಕ್ಕೆ ಶ್ರಮಿಸಲಾಗುವುದು ಎಂದರು.

Related posts

Leave a Reply

Your email address will not be published. Required fields are marked *