Header Ads
Header Ads
Header Ads
Breaking News

ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹಿನ್ನೆಲೆ ಪಟಾಕಿ ಖರೀದಿಗೆ ಆನ್ಲೈನ್ ಮೊರೆ ಹೋದ ಜನತೆ ಮಹಾರಾಷ್ಟ್ರದಲ್ಲೂ ಪಟಾಕಿ ಮಾರಾಟಕ್ಕೆ ನಿಷೇಧ

 

 

ಸುಪ್ರೀಂ ಕೋರ್ಟ್ ದೆಹಲಿ ಹಾಗೂ ಎನ್ ಸಿ ಆರ್ ನಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದೆ. ಆದ್ರೆ ದೆಹಲಿ, ಎನ್ ಸಿ ಆರ್, ಗುರುಗ್ರಾಮ್ ಹಾಗೂ ನೋಯ್ಡಾದಲ್ಲಿ ಆನ್ಲೈನ್ ನಲ್ಲಿ ಪಟಾಕಿ ಮಾರಾಟ ಮುಂದುವರೆದಿದೆ.ಇಬೇಯಲ್ಲಿ ಪಟಾಕಿಗಳನ್ನು ಮಾರಾಟ ಮಾಡಲಾಗ್ತಿದೆ. ಈ ಕಂಪನಿಗಳು ಕಾನೂನಿನ ಒಪ್ಪಿಗೆ ಮೇರೆಗೆ ಪಟಾಕಿಗಳನ್ನು ಮಾರಾಟ ಮಾಡುತ್ತಿವೆ. ಈ ವೆಬ್ಸೈಟ್ ಮೂಲಕ ಯಾರು ಬೇಕಾದ್ರೂ ಪಟಾಕಿ ಖರೀದಿ ಮಾಡಬಹುದಾಗಿದೆ. ಈ ವೆಬ್ಸೈಟ್ ನಲ್ಲಿ ಎಲ್ಲ ರೀತಿಯ ಪಟಾಕಿಗಳು ಮಾರಾಟಕ್ಕಿದ್ದು, ೩ ಸಾವಿರಕ್ಕಿಂತ ಕಡಿಮೆ ಬೆಲೆಯ ಪಟಾಕಿಗಳನ್ನು ಇಲ್ಲಿ ಖರೀದಿ ಮಾಡುವಂತಿಲ್ಲ.ಸುಪ್ರೀಂ ಕೋರ್ಟ್ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದೆ. ಆದ್ರೆ ಪಟಾಕಿ ಹಚ್ಚುವ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಜೊತೆಗೆ ಆನ್ಲೈನ್ ಮಾರಾಟದ ಬಗ್ಗೆಯೂ ಉಲ್ಲೇಖ ಮಾಡಿಲ್ಲ. ಹಾಗಾಗಿ ಎನ್ ಸಿ ಆರ್ ಸೇರಿದಂತೆ ದೆಹಲಿಯಲ್ಲಿ ಗ್ರಾಹಕರು ಆನ್ಲೈನ್ ಮೂಲಕ ಪಟಾಕಿ ಖರೀದಿ ಮಾಡ್ತಿದ್ದಾರೆ.ಸುಪ್ರೀಂ ಕೋರ್ಟ್ ಆದೇಶದಂತೆ ಅಕ್ಟೋಬರ್ ೩೦ ರವರೆಗೆ ದೆಹಲಿ ಹಾಗೂ ಎನ್ ಸಿ ಆರ್ ನಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ. ಹಾಗಾಗಿ ಇಲ್ಲಿನ ಪಟಾಕಿ ಅಂಗಡಿಗಳು ನವೆಂಬರ್ ೧ರ ನಂತ್ರವೇ ಬಾಗಿಲು ತೆರೆಯಲಿವೆ. ಆದ್ರೆ ನಿಸ್ಸಂಶಯವಾಗಿ ಕಳ್ಳತನದಲ್ಲಿ ಪಟಾಕಿಗಳ ಮಾರಾಟ ನಡೆಯುತ್ತಿದೆ.ಇತ್ತ ಮಹಾರಾಷ್ಟ್ರದಲ್ಲೂ ಪಟಾಕಿ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಮಹಾರಾಷ್ಟ್ರದ ವಸತಿ ಪ್ರದೇಶಗಳಲ್ಲಿ ಪಟಾಕಿಗಳ ಮಾರಾಟಕ್ಕೆ ಬಾಂಬೆ ಹೈಕೋರ್ಟ್ ನಿಷೇಧ ವಿಧಿಸಿದೆ. ದೆಹಲಿ-ಎನ್ ಸಿ‌ಆರ್ ಪ್ರದೇಶದಲ್ಲಿ ನವೆಂಬರ್ ೧ ವರೆಗೂ ಪಟಾಕಿ ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

Related posts

Leave a Reply