Header Ads
Header Ads
Header Ads
Breaking News

ಫೈನಾನ್ಷಿಯಲ್ ರೆಸಲ್ಯೂಶನ್ & ಡೆಪಾಸಿಟ್ ಇನ್ಷೂರೆನ್ಸ್ ಬಿಲ್ ಮೋದಿ ಸರ್ಕಾರ ಜಾರಿಗೆ ತಂದರೆ ಜನಸಾಮಾನ್ಯರಿಗೆ ಹೊಡೆತ

 

ಮೋದಿ ಸರ್ಕಾರ ಹಾಕ್ತಿರೋ ಹೊಸ ಬಾಂಬ್ ಯಾವುದು ಗೊತ್ತಾ ಫೈನಾನ್ಷಿಯಲ್ ರೆಸಲ್ಯೂಶನ್ & ಡೆಪಾಸಿಟ್ ಇನ್ಷೂರೆನ್ಸ್ ಬಿಲ್. ಇದನ್ನೇನಾದ್ರೂ ಮೋದಿ ಸರ್ಕಾರ ಜಾರಿಗೆ ತಂದಿದ್ದೇ ಆದ್ರೆ ಜನಸಾಮಾನ್ಯರಿಗೆ ಹೊಡೆತ ಬೀಳೋದು ಗ್ಯಾರಂಟಿ. ನೀವು ಕಷ್ಟಪಟ್ಟು ಕೂಡಿಟ್ಟ ಹಣ ಕೈತಪ್ಪಿ ಹೋಗಬಹುದು.

2017 ರ ಜೂನ್ ನಲ್ಲಿ ಕೇಂದ್ರ ಸರ್ಕಾರ ಈಖ‌ಆI ಬಿಲ್ ಗೆ ಸಮ್ಮತಿ ನೀಡಿದೆ. ನಷ್ಟದಲ್ಲಿರುವ ಬ್ಯಾಂಕ್ ಗಳ ಪುನಶ್ಚೇತನಕ್ಕಾಗಿ ರೂಪಿಸಿರುವ ಹೊಸ ನಿಯಮ ಇದು. ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ಹೊಂದಿರೋ ಗ್ರಾಹಕರಲ್ಲೆಲ್ಲ ಭೀತಿ ಹುಟ್ಟಿಸಿದೆ. ಬ್ಯಾಂಕ್ ಸಂಪೂರ್ಣ ದಿವಾಳಿಯಾಗಿದ್ದರೆ, ಚೇತರಿಸಿಕೊಳ್ಳಲು ಠೇವಣಿದಾರರ ಹಣವನ್ನೇ ಬಳಸಿಕೊಳ್ಳಲು ಈಖ‌ಆI ಅವಕಾಶ ನೀಡಲಿದೆ.
ಅದರ ಅರ್ಥ ನಿಮ್ಮ ಹಣದಲ್ಲಿ ಬಹುಪಾಲನ್ನು ಬ್ಯಾಂಕ್ ಮರುಪಾವತಿ ಮಾಡದೇ ಇರಬಹುದು, ಅಥವಾ ಬಹಳ ಸಮಯದವರೆಗೆ ಹಣವನ್ನು ಹಿಡಿದಿಟ್ಟುಕೊಳ್ಳಬಹುದು. ವಾಸ್ತವದಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ ಅಂತಾ ಆರ್ ಬಿ ಐ ಭರವಸೆ ನೀಡಿದೆ. ನಷ್ಟದಲ್ಲಿರುವ ಸಣ್ಣ ಪುಟ್ಟ ಬ್ಯಾಂಕ್ ಗಳನ್ನು ಸಾಲದ ಸಮೇತ ದೊಡ್ಡ ಬ್ಯಾಂಕ್ ಗಳು ಸ್ವಾಧೀನಪಡಿಸಿಕೊಳ್ಳುತ್ತವೆ ಅಂತಾ ಹೇಳಿದೆ.

Related posts

Leave a Reply