Header Ads
Header Ads
Header Ads
Breaking News

ಡೆಂಗ್ ಜ್ವರ ಬಾರದಂತೆ ನೀಡಲಾಗುತ್ತಿರುವ ’ಡೆಂಗ್ವ್ಯಾಕ್ಸಿಯ’ ಲಸಿಕೆ ಮಾರಾಟ ಮತ್ತು ವಿತರಣೆ ನಿಲ್ಲಿಸುವಂತೆ ಕಂಪೆನಿಗೆ ಆದೇಶ

ಡೆಂಗ್ ಜ್ವರ ಬಾರದಂತೆ ನೀಡಲಾಗುತ್ತಿರುವ ’ಡೆಂಗ್ವ್ಯಾಕ್ಸಿಯ’ ಲಸಿಕೆಯ ಮಾರಾಟ ಮತ್ತು ವಿತರಣೆಯನ್ನು ನಿಲ್ಲಿಸುವಂತೆ ಫ್ರಾನ್ಸ್‌ನ ಔಷಧಿ ತಯಾರಿಕಾ ಕಂಪೆನಿ ’ಸನೊಫಿ’ಗೆ ಫಿಲಿಪ್ಪೀನ್ಸ್ ಆದೇಶ ನೀಡಿದೆ.
ಲಸಿಕೆಯು ಕೆಲವು ಪ್ರಕರಣಗಳಲ್ಲಿ ರೋಗವನ್ನು ಉಲ್ಬಣಗೊಳಿಸಬಹುದು ಎಂಬುದಾಗಿ ಔಷಧಿ ತಯಾರಿಕಾ ಕಂಪೆನಿ ಕಳೆದ ವಾರ ಎಚ್ಚರಿಸಿದ ಬಳಿಕ ಫಿಲಿಪ್ಪೀನ್ಸ್ ಈ ಕ್ರಮ ತೆಗೆದುಕೊಂಡಿದೆ. ಇದಕ್ಕೂ ಕೆಲವು ದಿನಗಳ ಮುನ್ನ, ಲಕ್ಷಾಂತರ ಮಕ್ಕಳಿಗೆ ’ಡೆಂಗ್ವ್ಯಾಕ್ಸಿಯ’ ಲಸಿಕೆಯನ್ನು ನೀಡುವ ಸರಕಾರಿ ಕಾರ್ಯಕ್ರಮವನ್ನು ಫಿಲಿಪ್ಪೀನ್ಸ್ ರದ್ದುಪಡಿಸಿತ್ತು.

’ಡೆಂಗ್ವ್ಯಾಕ್ಸಿಯ’ ಲಸಿಕೆಯಿಂದ ಯಾವುದೇ ವ್ಯಕ್ತಿಯ ಸಾವು ಸಂಭವಿಸಿದರೆ ಅಥವಾ ಗಂಭೀರ ಕಾಯಿಲೆಗೆ ಒಳಗಾದರೆ ಆ ಘಟನೆಯನ್ನು ಎಲ್ಲ ಚಿಕಿತ್ಸಾಲಯಗಳು ವರದಿ ಮಾಡಬೇಕು ಎಂದು ಆದೇಶ ತಿಳಿಸಿದೆ. ಫಿಲಿಪ್ಪೀನ್ಸ್ನಲ್ಲಿ 9 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 7.34 ಲಕ್ಷ ಮಕ್ಕಳಿಗೆ ಈಗಾಗಲೇ ಲಸಿಕೆಯನ್ನು ಹಾಕಲಾಗಿದೆ.

Related posts

Leave a Reply