Home ಕರಾವಳಿ Archive by category ಬಂಟ್ವಾಳ (Page 4)

ಬಂಟ್ವಾಳ : ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಎ.ಗೋಪಾಲ ಅಂಚನ್ ನೇಮಕ

ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಬಂಟ್ವಾಳ ಹೋಬಳಿ ಅಧ್ಯಕ್ಷರಾಗಿ‌ ಪತ್ರಕರ್ತ ಗೋಪಾಲ ಅಂಚನ್ ಆಯ್ಕೆಯಾಗಿದ್ದಾರೆ.ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷರ ಅನುಮತಿಯಂತೆ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರ ಶಿಫಾರಸ್ಸಿನಂತೆ ದ.ಕ.ಜಿಲ್ಲಾ ಕನ್ನಡ

ಗುಡ್ಡೆ ಹೋಟೆಲಿನ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಹೆಮ್ಮುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿಗಾಗಿ ನೆರವು

ಬೈಂದೂರು ತಾಲೂಕುಗುಡ್ಡೆ ಹೋಟೆಲ್ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಕಾಮೇಶ್ ಹಾಗೂ ಭಕ್ತವೃಂದದವರು ಹೆಮ್ಮುಂಜೆಯಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ರೂಪಾಯಿ ಹತ್ತು ಸಾವಿರದ ನೂರನ್ನು ಶಾಲೆಯ ಕಂಪ್ಯೂಟರ್ ಕ್ಯಾಬಿನ್ ರಚನೆಗೆ ದೇಣಿಗೆಯಾಗಿ ನೀಡಿದರು. ಶಾಲೆಯ ಬಗ್ಗೆ ಇರುವ ಕಾಳಜಿ, ಅಭಿಮಾನ ಹಾಗೂ ಪ್ರೋತ್ಸಾಹವನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ,ಎಸ್.ಎಮ್. ಡಿ .ಸಿ.ಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಜನತೆ ತಮ್ಮ

ಬಂಟ್ವಾಳ: ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ದವಸಧಾನ್ಯ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ದವಸಧಾನ್ಯ ವಿತರಣ ಕಾರ್ಯಕ್ರಮ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡದ ಸಹಕಾರದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಪಿ. ಮಾತನಾಡಿ ಕೆ. ಎಸ್.ಹೆಗ್ಡೆ ಆಸ್ಪತ್ರೆಯವರೊಂದಿಗೆ ಕೈ ಜೋಡಿಸಿಕೊಂಡು ಕೃಷ್ಣಕುಮಾರ್ ಪೂಂಜ ಅವರು ಕಳೆದ 40

ಬಿ.ಸಿ. ರೋಡ್:  ಅಕ್ರಮ ಗೋಮಾಂಸ ವಶ: ಇಬ್ಬರು ಪೊಲೀಸರ ವಶಕ್ಕೆ

ಬಿ.ಸಿ.ರೋಡು: ಅಕ್ರಮ ಗೋಮಾಂಸವನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಕಲ್ಲಡ್ಕದಲ್ಲಿ ಇಂದು ಮುಂಜಾನೆ ನಡೆದಿದೆ. ಬಜರಂಗದಳ ಕಲ್ಲಡ್ಕ ಪ್ರಖಂಡದ ಮಾಹಿತಿ ಮೇರೆಗೆ ಇಂದು ಮುಂಜಾನೆ ಕಲ್ಲಡ್ಕ ಮದಕ ಬಳಿ ಬಿಸಿ ರೋಡ್ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅಂದಾಜು 2 ಕಿಂಟ್ಟಾಲ್ ಗೋ ಮಾಂಸ, ಒಂದು ಆಟೋ, ಆಲ್ಟೋ ಕಾರು ಹಾಗೂ ಬೈಕ್ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಟ್ವಾಳ: ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನಿಧ್ಯದಲ್ಲಿ ಫೆ.10 ಮತ್ತು 11 ರಂದು ವಾರ್ಷಿಕ ಕೋಲೋತ್ಸವ

ಬಂಟ್ವಾಳದ ಅಮ್ಟೂರು ಗ್ರಾಮದ ಕರಿಂಗಾಣದಲ್ಲಿರುವ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ಶ್ರೀ ಮಂತ್ರದೇವತೆ, ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವಾರ್ಷಿಕ ಕೋಲೋತ್ಸವವು ಫೆ.10 ಮತ್ತು 11 ರಂದು ನಡೆಯಲಿದೆ. ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನಿಧ್ಯ.. ಬೇಡಿ ಬಂದ ಭಕ್ತರ ಇಷ್ಟರ್ಥಗಳನ್ನು ಈಡೇರಿಸೋ ಪುಣ್ಯ ಕ್ಷೇತ್ರ.. ಕ್ಷೇತ್ರದಲ್ಲಿ ಇದೇ ಬರುವ ಫೆ.೧೦ರಂದು ದೊಂದಿ ಬೆಳಕಿನಲ್ಲಿ ಶ್ರೀ ಮಂತ್ರದೇವತೆ ದೈವದ ವೈಭವದ ವಾರ್ಷಿಕ ಕೋಲೋತ್ಸವಹಾಗೂ ೧೧ರಂದು

ಕೇಂದ್ರ ಬಜೆಟ್ ನಿರಾಶಾದಾಯಕ : ಬಿ.ರಮನಾಥ ರೈ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್-2024 ನಿರಾಶಾದಾಯಕವಾಗಿದೆ. ವಿತ್ತ ಸಚಿವರು ಕೇವಲ ಭರವಸೆ ಕೊಡುವ ಚುನಾವಣಾ ಭಾಷಣ ಮಾಡಿದರೋ ಅಥವಾ ಆಯವ್ಯಯ ಪತ್ರ ಮಂಡಿಸಿದರೋ ಎಂಬ ಸಂಶಯ ಬರುತ್ತಿದೆ. ಪ್ರಗತಿ, ಬೆಳವಣಿಗೆ, ಧ್ಯೇಯ, ಆಧ್ಯತೆ, ಗಮನ, ಸಹಾಯ, ಬೆಂಬಲ, ಸಹಕಾರ, ಕ್ರಮ, ಕಾರ್ಯಕ್ರಮ, ಮಂತ್ರ ಎಂಬ ಪದಗಳನ್ನು ಹೇಳಿದ್ದರೆ ಹೊರತು ನಿರ್ದಿಷ್ಟವಾಗಿ ಅನುದಾನ ಹಂಚಿಕೆ ಮಾಡಿಲ್ಲ. ಈ ಬಜೆಟ್ ಪ್ರಾದೇಶಿಕತೆಯನ್ನು ಮರೆತಿದೆ. ವಲಯಗಳನ್ನು ಕಡೆಗಣಿಸಿದೆ. ವರ್ಗಗಳನ್ನು ನಿರ್ಲಕ್ಷ್ಯ

ಬಿಪಿಎಲ್ ಕುಟುಂಬಗಳಿಗೆ ಡಿಸೆಂಬರ್‌ನಲ್ಲಿ 17.68 ಕೋಟಿ ರೂ. ನಗದು ಜಮಾ

ಸಾರ್ವಜನಿಕ ವಿತರಣಾ ಪದ್ಧತಿಯಡಿ ಸರಕಾರದಿಂದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತೀ ತಿಂಗಳು ವಿತರಿಸಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಸಿವು ಮುಕ್ತ ಕರ್ನಾಟಕದ ಪರಿಕಲ್ಪನೆಯೊಂದಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತೀ ತಿಂಗಳು ಅರ್ಹ ಫಲಾನುಭವಿಗಳಿಗೆ ಪಡಿತರ ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 460 ನ್ಯಾಯಬೆಲೆ ಅಂಗಡಿಗಳಿದ್ದು ಒಟ್ಟು 451593 ಪಡಿತರ ಚೀಟಿಗಳಿವೆ.ಅಂತ್ಯೋದಯ ಅನ್ನಯೋಜನೆಯಡಿ ಜಿಲ್ಲೆಯಲ್ಲಿ ಬಡತನ

ಕಲ್ಲಡ್ಕ : ವಿದ್ಯಾಗಣಪತಿ ದೇವರ ಪ್ರತಿಷ್ಠೆಯ ಅಂಗವಾಗಿ ಶಿಲಾನ್ಯಾಸ

ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ವಿದ್ಯಾಗಣಪತಿ ದೇವರ ಪ್ರತಿಷ್ಠೆಯ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಅವಧೂತ ವಿನಯ ಗುರೂಜಿ, ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಬಂಟ್ವಾಳ: : ಬೆಂಕಿ ಅವಘಡ, ಅಗ್ನಿಗೆ ಬಲಿಯಾದ ದಂಪತಿ

ಬಂಟ್ವಾಳ: ಬೆಂಕಿ ಅವಘಡಕ್ಕೆ ಸಿಕ್ಕಿ ದಂಪತಿ ಸುಟ್ಟು ಮೃತಪಟ್ಟ ಘಟನೆ ಬಂಟ್ವಾಳದ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ತುಂಡು ಪದವು ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಗಿಲ್ಬರ್ಟ್ ಕಾರ್ಲೋ ( 78) ಹಾಗೂ ಕ್ರಿಸ್ಟಿನಾ ಕಾರ್ಲೋ ( 70) ಮೃತಪಟ್ಟ ದುರ್ದೈವಿಗಳು. ಮನೆಯ ಪಕ್ಕ ಕಸ ಕಡ್ಡಿಗೆ ಹಾಕಿದ ಬೆಂಕಿ ವ್ಯಾಪಿಸಿ ಮನೆಯ ಸಮೀಪದ ಕಾಡನ್ನು ಆವರಿಸಿದ ವೇಳೆ ಅದನ್ನು ನಂದಿಸಲು ತೆರಳಿದ ವೃದ್ದ ದಂಪತಿಗಳು ಬೆಂಕಿಗೆ ಸಿಕ್ಕಿ ಸುಟ್ಟು ಹೋಗಿದ್ದಾರೆ. ಮೃತರಿಗೆ  3

ಬಂಟ್ವಾಳ : ದರೋಡೆ ಪ್ರಕರಣವನ್ನು ಭೇಧಿಸಿದ ದ.ಕ.ಜಿಲ್ಲಾ ಪೊಲೀಸರು

ದ.ಕ.ಜಿಲ್ಲೆಯ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ದಿನಾಂಕ; 11-01-2024 ರಂದು ಮುಂಜಾನೆ ನಡೆದ ಚಿನ್ನಾಭರಣಗಳನ್ನು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ:03/2024 ಕಲಂ: 395, 397, 411 ಭಾ.ದಂ.ಸಂ. ರಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗಿ, ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡವು, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26),