Home ಕರಾವಳಿ Archive by category ಬೆಳ್ತಂಗಡಿ (Page 4)

ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಟೀನ್ಸ್ ಹೀರೊ ಹದಿಹರೆಯದ ಮಕ್ಕಳ ಪಾಲನೆ ಬೆಳವಣಿಗೆ ಕಾರ್ಯಗಾರ

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಸಮಕಾಲಿನ ಪ್ರಪಂಚದಲ್ಲಿ ಹದಿ ಹರೆಯದ ತರುಣ ತರುಣಿಯರು ಎದುರಿಸುವ ಸಮಸ್ಯೆಗಳು ಮಕ್ಕಳ ಪಾಲನೆ ಮತ್ತು ಲಾಲಾನೇಯಲ್ಲಿ ಪೋಷಕರ ಪಾಡು ಈ ವಿಷಯದಲ್ಲಿ ಒಂದು ದಿನದ ಸೈಕಲಾಜಿಕಲ್ ಕಾರ್ಯಗಾರವನ್ನು ಆಯೋಜಿಸಲಾಯಿತು. ಸುಮಾರು ನೂರ ಐವತ್ತು ಟೀನ್ಸ್ ಮತ್ತು ಅವರ ತಾಯಂದಿರು ಈ ಶಿಬಿರದಲ್ಲಿ ಬಾಗವಹಿಸಿ ಮಾಹಿತಿ ಪಡೆದು ಕೊಂಡರು.

ನೆಲ್ಯಾಡಿ:ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

ನೆಲ್ಯಾಡಿ: ಬಯಲು ಆಲಯ ಎಂದೇ ಪ್ರಖ್ಯಾತಿ ಪಡೆದಿರುವ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾಹುಲ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಹಾಗೂ ಅರ್ಚಕರು ಉಪಸ್ಥಿತರಿದ್ದರು.

ಕೊಕ್ಕಡ:ಅನಾರು-ಪಟ್ರಮೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 2024ರ ಕ್ಯಾಲೆಂಡರ್ ಬಿಡುಗಡೆ

ಕೊಕ್ಕಡ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನಾರು -ಪಟ್ರಮೆ ಇದರ 2024 ವರ್ಷದ ಕ್ಯಾಲೆಂಡರ್ ನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರರಾದ ನಿತೇಶ್ ಬಲ್ಲಾಳ್ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಪವಿತ್ರಪಾಣಿ ಶ್ರೀಧರ ಶಬರಾಯ ಅಕ್ಕೋ, ಅರ್ಚಕರಾದ ಗುರುಪ್ರಸಾದ್ ನಿಡ್ವಣ್ಣಾಯ, ದೇವಪಾಲ ಅಜ್ರಿ ಉಳಿಯಬೀಡು, ಜಾತ್ರಾ ಸಮಿತಿ ಅಧ್ಯಕ್ಷ  ಹರೀಶ್ ಅಪ್ರೋಡಿ, ಯುವರಾಜ್ ಜೈನ್ ಉಳಿಯಬೀಡು, ಚಂದ್ರಶೇಖರ ಗೌಡ ಅನಾರು, ನಿರಂಜನ್ ಜೈನ್

ನೆಲ್ಯಾಡಿ: ಸಂತ ಜಾರ್ಜ್ ಪದಪೂರ್ವ ಕಾಲೇಜಿನಲ್ಲಿ ಯುವ ಸಪ್ತಾಹ ಕಾರ್ಯಕ್ರಮ

ನೆಲ್ಯಾಡಿ: ಇಲ್ಲಿನ ಸಂತ ಜಾರ್ಜ್ ಪ.ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ವಿವೇಕ ಜಯಂತಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಯುವ ಸಪ್ತಾಹ ಕಾರ್ಯಕ್ರಮ ಜ.12ರಂದು ಸಂಸ್ಥೆಯ ಸಂಚಾಲಕರಾದ ರೆ.ಫಾ.ನೋಮಿಸ್ ಕೊರಿಯಾಕೋಸ್ ರವರ ಮಾರ್ಗದರ್ಶನದಲ್ಲಿ ಆರಂಭಗೊಂಡಿತು. ಬೆಥನಿ ಕೈಗಾರಿಕಾ ತರಬೇತಿ ವಿದ್ಯಾಸಂಸ್ಥೆಯ ಉಪನ್ಯಾಸಕರಾದ ಜೋನ್ ಪಿ.ಎಸ್. ರವರು ದೀಪ ಬೆಳಗಿಸುವ ಮೂಲಕ ಯುವ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವ ಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು

ಬೆಳ್ತಂಗಡಿ: ಬಜಿರೆ ಹೊಸಪಟ್ಣ ಶಾಲೆಯಲ್ಲಿ ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನ

ಬೆಳ್ತಂಗಡಿ: ತಾಲೂಕಿನ ಬಜಿರೆ ಗ್ರಾಮದ ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 265ನೇ ಕಾರ್ಯಕ್ರಮವಾಗಿ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗಾಗಿ ಸಸ್ಯರಾಶಿಗಳ ಮಹತ್ವ ಎಂಬ ಘೋಷಣೆಯಡಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಮಕ್ಕಳೊಂದಿಗೆ ಸಂವಾದ ನಡೆಸಿ ಪಕ್ಷಿ ಸಂಕುಲಗಳ ಉಳಿವಿನ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಶಿಕ್ಷಕಿಯರು, ಮಕ್ಕಳು

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರಕ್ಕೆ 5 ಲಕ್ಷ ರೂ.ನೆರವು

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜೀರ್ಣೋದ್ದಾರಗೊಳ್ಳುತ್ತಿರುವ ಕೊಣಾಲು ಗ್ರಾಮದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ 5 ಲಕ್ಷ ರೂ. ನೆರವು ನೀಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು 5 ಲಕ್ಷ ರೂ.ನೆರವಿನ ಮೊತ್ತದ ಚೆಕ್ ಅನ್ನು ದೇವಸ್ಥಾನದ ಜೀರ್ಣೋದ್ದಾರ ಸಮಿತಿಗೆ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಸ್ತಾಂತರಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ತಿರ್ಲೆ

ನೆಲ್ಯಾಡಿ: ಡೀಸೆಲ್ ಟ್ಯಾಂಕರ್ ಪಲ್ಟಿ, ಮುಗಿಬಿದ್ದ ಜನ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ ಎಂಬಲ್ಲಿ ಡೀಸಿಲ್ ಟ್ಯಾಂಕರ್ ರಸ್ತೆಯಲ್ಲಿ ಪಲ್ಟಿ ಹೊಡೆದು ಡೀಸೆಲ್ ಸೋರಿಕೆಯಾದ ಘಟನೆ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರಿಗೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿ ಹೊಡೆದ ಪರಿಣಾಮ ಟ್ಯಾಂಕರ್ ನಿಂದ ಡೀಸೆಲ್ ಸೋರಿಕೆಗೊಂಡ ಪರಿಣಾಮ ಡೀಸೆಲ್ ಸಂಗ್ರಹಣೆಗಾಗಿ ಮುಗಿಬಿದ್ದ ಜನರು. ಮಾಹಿತಿ ಪಡೆದ ನೆಲ್ಯಾಡಿ ಹೊರಠಾಣೆಯ ಹೆಡ್‍ಕಾನ್‍ಸ್ಟೇಬಲ್ ಕುಶಾಲಪ್ಪ

ಮದ್ಯಮುಕ್ತರಾಗಲು ಗಟ್ಟಿ, ದೃಡ ಮತ್ತು ಚಂಚಲತೆಯಿಲ್ಲದ ಹತೋಟಿ ಮುಖ್ಯ-ಡಾ. ಡಿ. ವೀರೇಂದ್ರ ಹೆಗ್ಗಡೆ.

ಪುತ್ತೂರು: ಮದ್ಯಪಾನಕ್ಕೆ ಪಂಚೇದ್ರಿಯಗಳು ಆಕರ್ಷಣೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಕುಡಿತ ನಿಲ್ಲಿಸುವ ವಿಚಾರದಲ್ಲಿ ಗಟ್ಟಿ ಮತ್ತು ದೃಡವಾದ ಮನಸ್ಸು, ಚಂಚಲತೆ ಇಲ್ಲದ ಹತೋಟಿ ಬೇಕಾಗಿದೆ. ಮದ್ಯವರ್ಜನ ಶಿಬಿರದಲ್ಲಿ ಭಾಗವಿಸಿದ ಎಲ್ಲರೂ ಕುಡಿತ ಬಿಡುವ ಬಗ್ಗೆ ಸ್ವಯಂ ಮೂಗುದಾರ ಹಾಕಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಡಿಕ್ಕಿ: ತೀವ್ರ ಗಾಯಗೊಂಡ ಮಹಿಳೆ

ನೆಲ್ಯಾಡಿ: ಪೆರಿಯಶಾಂತಿಯ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯರೂ ತೀವ್ರವಾದ ಗಾಯಗೊಂಡ ಘಟನೆ ಸಂಭವಿಸಿದೆ. ಕಡಬ ಸಮೀಪದ ಕುಟ್ರುಪಾಡಿ ನಿವಾಸಿಯಾದ ರಾಜು, ಅ್ಯನಿ, ಸಿನ್ಸಿ, ಮೇರಿ ಎಂಬುವರು ಕೆನಡಕ್ಕೆ ತೆರಳುವ ಮಗನನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಅ್ಯನಿ ಎಂಬ ಮಹಿಳೆಯ ಕೈ ಹಾಗೂ ಕಾಲುಳಿಗೆ ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಮಂಗಳೂರಿನ

ನೆಲ್ಯಾಡಿ: ಕಾರು-ಬೈಕ್ ಡಿಕ್ಕಿ, ಬೈಕ್ ಸವಾರಿನಿಗೆ ಗಂಭೀರ ಗಾಯ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಸೈಂಟ್ ಜಾರ್ಜ್ ಚರ್ಚ್ ಬಳಿ ಕಾರು ಹಾಗೂ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ತಲೆಗೆ, ಕೈಗೆ, ಕಾಲಿಗೆ ತೀವ್ರ ಸ್ವರೂಪದ ಗಾಂiÀÉ್ಗೂಂಡ ಘಟನೆ ನಡೆದಿದೆ. ಕಡಬ ತಾಲೂಕು ಬಲ್ಯ ಗ್ರಾಮದ ಕಂಚಿನಡ್ಕ ಮನೆಯ ಬೈಕ್ ಸವಾರ ಆನಂದ ಶೆಟ್ಟಿ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ವೇಳೆ ಕಾರು ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಡಿಕ್ಕಿಯಾದ ಪರಿಣಾಮ ಬೈಕ್