Home ಕರಾವಳಿ Archive by category ಮಂಗಳೂರು (Page 13)

ದೆಹಲಿ: ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಚಿಂತನ್ ಎಸ್. ಶೆಟ್ಟಿಗೆ 1 ಚಿನ್ನ, 4 ಬೆಳ್ಳಿ ಪದಕ

ದೆಹಲಿಯಲ್ಲಿ ನಡೆದ 67ನೇ ಸ್ಕೂಲ್ ಗೇಮ್ಸ್ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್-2023-24ರ ಈಜು ಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್‌ನ ಚಿಂತನ್ ಎಸ್. ಶೆಟ್ಟಿ ಅವರು, 1 ಚಿನ್ನ ಹಾಗೂ 4 ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಜನವರಿ 3ರಿಂದ 9ರ ವರೆಗೆ ದೆಹಲಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಈಜು

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಜಾತ್ರೋತ್ಸವದ ಕಾರ್ಯಾಧ್ಯಕ್ಷರಾಗಿ ಶ್ರೀಶೈಲೇಂದ್ರ ಸುವರ್ಣ

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯು ಮಂಗಳೂರಿನಲ್ಲಿ ನಡೆಯಿತು. ಫೆಬ್ರವರಿ ತಾರೀಕು 25 ರಿಂದ 28 ರ ವರೆಗೆ ನಡೆಯುವ ಜಾತ್ರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಬೇಕಾದರೆ ಆಮಂತ್ರಣ ಪತ್ರಿಕೆಯನ್ನು ಪ್ರತಿಯೊಂದು ಕ್ಷೇತ್ರಕ್ಕೂ ಕಳುಹಿಸಿಕೊಡಬೇಕು ಎಂಬುದಾಗಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ಸಮಯದಲ್ಲಿ ಪ್ರತಿಷ್ಠಿತ ಕಂಪೆನಿಯಾದ ಎಸ್.ಆರ್.ಆರ್ ಮಸಾಲೆಯ ಮಾಲಕರಾದ ಶ್ರೀಶೈಲೇಂದ್ರ ಸುವರ್ಣ ರವರನ್ನು ಸಮಿತಿಯ

ಮಂಗಳೂರು: ಟೋನಿ & ಗೈ ಹೇರ್ ಡ್ರೆಸ್ಸಿಂಗ್‌ನ ನೂತನ ಔಟ್‌ಲೇಟ್ ಶುಭಾರಂಭ

ಹೆವನ್ ರೋಸ್‌ನ ಮಾಲಕರಾದ ಮುಸ್ತಫಾ ಪ್ರೇಮಿ ಅವರ ಫ್ರಾಂಚೈಸ್‌ಯ ಟೋನಿ ಆಂಡ್ ಗೈ ಹೇರ್ ಡ್ರೆಸ್ಸಿಂಗ್‌ನ ನೂತನ ಔಟ್ ಲೇಟ್‌ನ ಮಂಗಳೂರಿನ ಸಿಟಿಸೆಂಟರ್‌ನ ಮೂರನೇ ಮಹಡಿಯಲ್ಲಿ ಶುಭಾರಂಭಗೊಂಡಿತು. ಈಗಾಗಲೇ ವಿವಿಧ ಕಡೆಗಳಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡಿ, ಗ್ರಾಹಕರ ಮೆಚ್ಚುಗೆ ಪಾತ್ರವಾಗಿರುವ ಹೆವನ್ ರೋಸ್‌ನ ಮಾಲಕರಾದ ಮುಸ್ತಫಾ ಪ್ರೇಮಿ ಅವರ ಫ್ರಾಂಚೈಸ್‌ಯ ಟೋನಿ ಆಂಡ್ ಗೈ ಹೇರ್ ಡ್ರೆಸ್ಸಿಂಗ್‌ನ ನೂತನ ಔಟ್ ಲೇಟ್ ಉದ್ಘಾಟನೆಗೊಂಡಿತು. ಮುಸ್ತಫಾ ಪ್ರೇಮಿಯ ಅವರ ತಂದೆ

ಕೊಣಾಜೆ: ಜ.13 ರಂದು ನರಿಂಗಾನ ಕಂಬಳೋತ್ಸವ-2024 ಉದ್ಘಾಟನೆ

ಕೊಣಾಜೆ: ಮಂಗಳೂರು ವಿಧಾನ ಸಭಾ ಕ್ಷೇತ್ರ, ಉಳ್ಳಾಲ ತಾಲೂಕಿನ ಇತಿಹಾಸದಲ್ಲಿ ಮೊದಲ ಸರಕಾರಿ ಕಂಬಳವಾಗಿ ಗುರುತಿಸಿಕೊಂಡಿರುವ ನರಿಂಗಾನ ಕಂಬಳವು ಈ ಬಾರಿ ಎರಡನೇ ವರ್ಷದ ನರಿಂಗಾನ ಕಂಬಳೋತ್ಸವ ನರಿಂಗಾನ ಗ್ರಾಮದ ಮೋರ್ಲ ಬೋಳದ ಲವ-ಕುಶ ಜೋಡುಕರೆಯಲ್ಲಿ ಜ. 13ರಂದು ಬೆಳಗ್ಗೆ 10.00 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು. ನರಿಂಗಾನ ಕಂಬಳವು ಎಲ್ಲಾ ಜಾತಿ, ಧರ್ಮ, ವರ್ಗಗಳ ಜನರು ಸೇರಿಕೊಂಡು ಮಾಡುವ ಒಂದು ಸಾರ್ವಜನಿಕ

ಮಂಗಳೂರು: ಜ.11ರಂದು “ಶಿವದೂತೆ ಗುಳಿಗೆ” 555ನೇ ಪ್ರದರ್ಶನದ ಸಂಭ್ರಮ!

ಮಂಗಳೂರು: “ಜನವರಿ 11ರಂದು ಸಂಜೆ 5 ಗಂಟೆಗೆ ಅಡ್ಯಾರ್ ಗಾರ್ಡನ್ ನಲ್ಲಿ ಜನಮೆಚ್ಚುಗೆ ಪಡೆದಿರುವ “ಶಿವದೂತೆ ಗುಳಿಗೆ” ನಾಟಕದ 555ನೇ ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕೊಪ್ಪ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ದೀಪ ಪ್ರಜ್ವಲನೆಗೈಯಲಿದ್ದಾರೆ” ಎಂದು ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾಹಿತಿ ನೀಡಿದರು. “ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪರಮಾನಂದ ಸಾಲಿಯಾನ್ ಅವರಿಗೆ ದಿ. ವನಿತಾ

ಜ.10ಕ್ಕೆ ಪುರಭವನದಲ್ಲಿ “ಗರುಡ ಪಂಚಮಿ” 50ರ ಸಂಭ್ರಮ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ “ರಂಗ ಕಲಾಬಂಧು” ಬಿರುದು ಪ್ರದಾನ

ಮಂಗಳೂರು: “ಜನವರಿ 10ರಂದು ನಗರದ ಪುರಭವನದಲ್ಲಿ ಶ್ರೀ ಲಲಿತೆ ಕಲಾವಿದರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತ್ರಿರಂಗ ಸಂಗಮ ಮುಂಬೈ ಸಂಚಾಲಕತ್ವದಲ್ಲಿ ಗರುಡ ಪಂಚಮಿ 50ರ ಪ್ರದರ್ಶನದ ಸಂಭ್ರಮ ಹಾಗೂ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ ರಂಗ ಕಲಾಬಂಧು ಬಿರುದು ಪ್ರದಾನ ನಡೆಯಲಿದೆ” ಎಂದು ತಂಡದ ಸಂಚಾಲಕ ಲಯನ್ ಡಿ. ಕಿಶೋರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಟೀಲು ಕ್ಷೇತ್ರದ

ಮಂಗಳೂರು: ಹಿರಿಯ ಸಾಹಿತಿ ಅಮೃತ ಸೋಮೇಶ್ವರ ವಿಧಿವಶ

ಕರಾವಳಿ ತೀರದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ವಿದ್ವಾಂಸ, ಕವಿ, ಕಥೆಗಾರ ಅಮೃತ ಸೋಮೇಶ್ವರ ಅವರು ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಯಕ್ಷಗಾನದಲ್ಲಿ ಪ್ರಸಂಗ ಕರ್ತೃವಿಗೆ ಸ್ವಾತಂತ್ರ್ಯ ಕಡಿಮೆಯೆ. ಆದರೂ ಕಲೆಯ ಮೂಲಕ ವೈಚಾರಿಕತೆಯನ್ನೂ ಪ್ರತಿಪಾದಿಸಿ ಯಕ್ಷಗಾನ

ಮಂಗಳೂರು: ಉದ್ಯಾನವನ ಉದ್ಘಾಟನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಉತ್ತರ 32ನೇ ವಾರ್ಡಿನ ಶರ್ಬತ್ ಕಟ್ಟೆಯ ಐಟಿಐ ಬಳಿ ಸರ್ಕಾರಿ ಜಾಗದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸ್ಥಳೀಯರ ಬಹುಬೇಡಿಕೆಯ ಉದ್ಯಾನವನವನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟನೆಗೊಳಿಸಿದರು. ಹಿರಿಯರು, ಮಕ್ಕಳು, ಸ್ಥಳೀಯರು, ಸೇರಿದಂತೆ ಎಲ್ಲರಿಗೂ ಈ ಉದ್ಯಾನವನ ಉಪಯೋಗಕರವಾಗಲಿದ್ದು ಇಲ್ಲಿನ ಉತ್ತಮ ಗುಣಮಟ್ಟದ ವ್ಯವಸ್ಥೆಗಳಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ

ಮಂಗಳೂರು : ಜ.6 ರಂದು “ಸ್ಪೆಕ್ಟ್ರಮ್-2024” ಒಂದು ದಿನದ ಕಾರ್ಡಿಯಾಲಜಿ ಸಮ್ಮೇಳನ

ಮಂಗಳೂರು : ಎ.ಜೆ. ಆಸ್ಪತ್ರೆ & ಸಂಶೋಧನ ಕೇಂದ್ರದ ಕಾರ್ಡಿಯಾಲಜಿ ವಿಭಾಗದ ವತಿಯಿಂದ ಒಂದು ದಿನದ ಕಾರ್ಡಿಯಾಲಜಿ ಸಮ್ಮೇಳನ “ಸ್ಪೆಕ್ಟ್ರಮ್ – 2024” ಅನ್ನು ಜನವರಿ 6, 2024 ರಂದು ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ “ದಿ ಓಶಿಯನ್ ಪರ್ಲ್” ಹೋಟೆಲ್ನಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕ ಸಮಿತಿಯ ಅಧ್ಯಕ್ಷ ಹಾಗೂ ಎ.ಜೆ. ಆಸ್ಪತ್ರೆ & ಸಂಶೋಧನ ಕೇಂದ್ರದ ಮುಖ್ಯ ಕಾರ್ಡಿಯಾಲಜಿಸ್ಟ್ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆ

ಮಂಗಳೂರು: ಅಶ್ವಿನ್ ಎಲ್ ಶೆಟ್ಟಿ ರಾಜಕೀಯ ಪ್ರವೇಶ

ಸಹಕಾರಿ, ಧುರೀಣ ಸವಣೂರು ಸೀತಾರಾಮ ರೈ ಅವರ ಅಳಿಯ ಅಶ್ವಿನ್ ಎಲ್ ಶೆಟ್ಟಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಇಂದು ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರಿ ಮತ್ತು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಸಂತೋಷ ಕುಮಾರ್ ಬೊಳಿಯಾರು,