Home ಕರಾವಳಿ Archive by category ಮಂಗಳೂರು (Page 19)

ಮಂಗಳೂರು: ಡಿಕೆಶಿ ಕೇಸ್ ವಾಪಸ್ ಹಿಂಪಡೆದಿರುವುದು ಖಂಡನೀಯ: ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹೇಳಿಕೊಳ್ಳಲು ಆಶ್ಚರ್ಯ ಎನಿಸುವಂತಹ ಬಹಳ ನೋವಿನ ಸಂಗತಿ ನಡೆದಿದ್ದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭ್ರಷ್ಟಾಚಾರ ಆರೋಪದಡಿಯಲ್ಲಿ ಸಿಬಿಐ ತನಿಖೆ ಮಾಡುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟ ಸಿಬಿಐ ತನಿಖೆಗೆ ಕೊಟ್ಟ ಅನುಮತಿ ವಾಪಾಸು ತೆಗೆದುಕೊಂಡಿರುವುದು ಖಂಡನೀಯ ಎಂದು ಮಾಜಿ ಸಚಿವ,

ಮಂಗಳೂರಿನಲ್ಲಿ ಅಂತರ್ ರಾಷ್ಟ್ರೀಯ ಈಜುಕೊಳ ಲೋಕಾರ್ಪಣೆ

19ನೇ ರಾಷ್ಟ್ರೀಯ ಹಿರಿಯರ ಈಜುಸ್ಪರ್ಧೆಯ ಆರಂಭದೊಂದಿಗೆ ನಗರದ ಎಮ್ಮೆಕೆರೆ ಪ್ರದೇಶದಲ್ಲಿ ಒಲಂಪಿಕ್ಸ್ ಮಾನದಂಡದ ಪ್ರಕಾರ ನಿರ್ಮಿಸಿರುವ ಅತ್ಯಾಧುನಿಕ ಈಜುಕೊಳ ಉದ್ಘಾಟನೆಗೊಂಡಿದೆ. ಈಜುಕೊಳ ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್ ಮಾತನಾಡಿ, ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಆದಾಯ ಸೃಷ್ಟಿಸುವ ಯೋಜನೆಗಿಂತ ಹೆಚ್ಚಾಗಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಇನ್ನು ಮುಂದೆಯಾದರೂ ಮಹಾನಗರ ಪಾಲಿಕೆಯ ಯಾವುದಾದರೂ ಯೋಜನೆಯಡಿ ಆದಾಯ ವೃದ್ಧಿಸುವ

ಕರಾವಳಿಯಲ್ಲಿ ಸಾಧಾರಣ ಮಳೆ

ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗದ ಕೆಲವು ಕಡೆಗಳಲ್ಲಿ ಅಲಲ್ಲಿ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವಣವಿದ್ದು, ಮಾಧ್ಯಹ್ನಾದ ಸಮಯದಲ್ಲಿ ಮಳೆ ಸುರಿದಿದೆ. ಕರಾವಳಿಯಲ್ಲಿ ಹಿಂಗಾರು ಕ್ಷೀಣಿಸುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯ ಅಲಲ್ಲಿ ಮೋಡ ಮತ್ತು ಸಾಧಾರಣ ಮಳೆಯ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಯಾವುದೇ ಅಲರ್ಟ್ ಘೋಷಿಸಿಲ್ಲ.

ಮಂಗಳೂರು ; ಶವ ಕೊಳೆಸಿದ ಮಂಗಳೂರಿನ ಆಸ್ಪತ್ರೆಗೆ ಗ್ರಾಹಕರ ನ್ಯಾಯಾಲಯದಿಂದ ದಂಡ ಪ್ರಯೋಗ

ಹಣ ಪಡೆದು ಶವಾಗಾರದಲ್ಲಿ ಶವ ಇಟ್ಟು ಕೊಳೆಸಿದ ಕಾರಣಕ್ಕೆ ಮಂಗಳೂರು ನಗರದ ಆಸ್ಪತ್ರೆ ಒಂದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ನ್ಯಾಯಾಲಯವು ವಾರಸುದಾರರಿಗೆ ರೂ. 5 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ. ತಿಂಗಳೊಳಗೆ ಪರಿಹಾರ ನೀಡಲು ವಿಫಲರಾದಲ್ಲಿ 8% ಬಡ್ಡಿ ಸೇರಿಸಿ ನೀಡುವಂತೆಯೂ ಸೂಚಿಸಲಾಗಿದೆ. 2019ರ ಅಕ್ಟೋಬರ್ 25ರಂದು ವಿಲ್ಸನ್ ಆಲನ್ ಫೆರ್ನಾಂಡೀಸ್ ಸಾವಿಗೀಡಾದರು. ವಿದೇಶದ ಬಂಧು ಬರಲಿ ಎಂದು ಮಂಗಳೂರಿನ ಒಂದು ಆಸ್ಪತ್ರೆಗೆ ಹಣ ನೀಡಿ ಅಲ್ಲಿನ ಶವಾಗಾರದಲ್ಲಿ

ಮಂಗಳೂರು – ಡಿ.10ರಂದು ಅಂತರ್ ಧರ್ಮೀಯ ಸೌಹಾರ್ದ ಕ್ರೀಡಾ ಕೂಟ

ಕಥೋಲಿಕ್ ಸಭಾ ಮಂಗಳೂರು ಪ್ರದೇಶ, ಆಂಜೆಲೊರ್ ಘಟಕ ಮತ್ತು ಅಂತರ್ ಧರ್ಮೀಯ ಸಂವಾದ ಆಯೋಗ, ಆಂಜೆಲೊರ್ ಚರ್ಚ್ ವತಿಯಿಂದ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ಡಿ.10 ನಗರದ ಕಪಿತಾನಿಯೊ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಆಂಜೆಲೊರ್ ಚರ್ಚ್‍ನ ಅಂತರ್ ಧರ್ಮೀಯ ಆಯೋಗದ ಸಂಚಾಲಕರಾಧ ಫೆಲಿಕ್ಸ್ ಮೊರಾಸ್ ತಿಳಿಸಿದರು. ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.

ಮಣ್ಣಗುಡ್ಡೆಯ ವರ್ಟೆಕ್ಸ್ ಲಾಂಜ್‍ನಲ್ಲಿಎನ್ನಿಯೋಂಗ್ ಕೊರಿಯಾ

ಮಂಗಳೂರಿನ ಮಣ್ಣಗುಡ್ಡೆಯ ವರ್ಟೆಕ್ಸ್ ಲಾಂಜ್ ಮತ್ತು ಬೈ ಲೈಪ್ ಸಹಯೋಗದಲ್ಲಿ ಎನ್ನಿಯೋಂಗ್ ಕೊರಿಯಾ ಕಾರ್ಯಕ್ರಮವು ವರ್ಟೆಕ್ಸ್ ಲಾಂಜ್ ನಲ್ಲಿ ನಡೆಯಿತು. ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕ್ ಪಕ್ಕದಲ್ಲಿರುವ ವರ್ಟೆಕ್ಸ್ ಲಾಂಜ್ ನಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಸಿ ,ಸೈ ಎನ್ನಿಸಿಕೊಂಡಿದ್ದಾರೆ.ಇದೀಗ ಎನ್ನಿಯೋಂಗ್ ಕೊರಿಯಾ ಮನೋರಂಜನಾ ಕಾರ್ಯಕ್ರಮ ನಡೆಯುತ್ತಿದ್ದು, ನವೆಂಬರ್ 23ರಿಂದ ಆರಂಭಗೊಂಡು, 26ರತನಕ ನಡೆಯಲಿದೆ. ಇಲ್ಲಿ ವಿವಿಧ ಮನೋರಂಜನಾ

ಸುರತ್ಕಲ್: ವಿಜಯಕುಮಾರ್ ಕೊಡಿಯಾಲ್ ಬೈಲ್‌ರಿಗೆ ರಂಗಚಾವಡಿ ಪ್ರಶಸ್ತಿ

ಸುರತ್ಕಲ್: ರಂಗಚಾವಡಿ ಮಂಗಳೂರು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇವರ ಸಹಯೋಗದೊಂದಿಗೆ ರಂಗಚಾವಡಿ ವರ್ಷದ ಹಬ್ಬ, ರಂಗಚಾವಡಿ ಪ್ರಶಸ್ತಿ ೨೦೨೩ ಪ್ರದಾನ ಸಮಾರಂಭ ಡಿಸೆಂಬರ್ ೩ ರಂದು ಭಾನುವಾರ ಸಂಜೆ ೪.೩೦ ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. 2023 ರ ಸಾಲಿನ ರಂಗಚಾವಡಿ ಪ್ರಶಸ್ತಿಯನ್ನು ಖ್ಯಾತ ನಾಟಕ ರಚನೆಕಾರ- ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್

ಜಾಗತಿಕ ಮೀನು ಕ್ಷಾಮಕ್ಕೆ ಮಂಗಳೂರು ಮುನ್ನುಡಿ

ವಿಶ್ವ ಸಂಸ್ಥೆಯು 2055ಕ್ಕೆ ಜಗತ್ತು ಮೀನಿನ ಕ್ಷಾಮ ಎದುರಿಸಲಿದೆ ಎಂದು ಎಚ್ಚರಿಸಿತ್ತು. ಆ ಬಗೆಗೆ ಎಚ್ಚರಿಸಿ ಆಗಲೇ ಲೇಖನ ಬರೆಯಲಾಗಿದೆ. ಈಗ ಮೀನಿನ ಕ್ಷಾಮವು ತುಳುನಾಡನ್ನು ಸಮೀಪಿಸಿದೆ. ಮೀನು ಬರಕ್ಕೆ ಕಾರಣವೇನು? ಅತಿ ಮೀನುಗಾರಿಕೆ, ಮಾಲಿನ್ಯ, ಮೀನು ಆವಾಸದ ನೆಲೆ ನಾಶ, ಹವಾಮಾನ ಬದಲಾವಣೆ ಇವೆಲ್ಲ ಕಾರಣಗಳಿವೆ. ಈಗ ಭೂಬಿಸಿಯ ಗುಮ್ಮ ಒಳತೂರಿದೆ. ಈಗಾಗಲೇ ಲೋಕದ 80% ಮೀನುಗಾರಿಕೆಯು ಶೋಷಣೆಗೊಂಡಿದೆ, ಬರಿದಾಗಿದೆ, ಇನ್ನೇನು ಮುಚ್ಚುವ ಹಂತ

ಮಂಗಳೂರು ; ಅಪಾಯಕ್ಕೆ ಆಹ್ವಾನ ನೀಡುವಂತಿದ್ದ, ತ್ರಿಶೂಲ ರೀತಿಯಲ್ಲಿದ್ದ ಕಬ್ಬಿಣದ ಸರಳುಗಳ ಕತ್ತರಿಸುವ ಕಾರ್ಯ

ಖಾಸಗಿ ಸಂಸ್ಥೆಯೊಂದು ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಉರ್ವಾ ಸ್ಟೋರ್‍ಗಳ ನಡುವೆ ಡಿವೈಡರ್‍ಗೆ ಕಬ್ಬಿಣದ ಚೂಪಾದ ಸರಳುಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ತ್ರಿಶೂಲ ರೀತಿಯ ಚೂಪಾದ ಕಬ್ಬಿಣದ ಸರಳುಗಳಿದ್ದು ಇದು ಅಪಾಯವನ್ನ ಆಹ್ವಾನಿಸುವಂತಿತ್ತು. ಯಾವುದೇ ಅಪಘಾತಗಳು ನಡೆದಾಗ ಆ ಡಿವೈಡರ್ ಮೇಲೆ ಬಿದ್ದರೆ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗುವಂತಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಯತೀಶ್ ಬೈಕಂಪಾಡಿ ಅವರು ಸಂಬಂಧ ಪಟ್ಟ ಅಧಿಕಾರಿಗಳ

ಸುರತ್ಕಲ್: ಕಳೆದು ಹೋಗಿದ್ದ ಮೊಬೈಲ್ ವಾರಸುದಾರರಿಗೆ ಹಸ್ತಾಂತರ

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ಮೊಬೈಲ್ ಫೋನೊಂದು ಕಳೆದು ಹೋಗಿದ್ದು, ವಾರಸುದಾರರಿಗೆ ಮರಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುರತ್ಕಲ್‍ನ ಕುಳಾಯಿ ನಿವಾಸಿ ವಿ4 ನ್ಯೂಸ್‍ನ ಕ್ಯಾಮರಾಮೆನ್ ಶರತ್ ಸಾಲ್ಯಾನ್ ಅವರ ಪುತ್ರಿ ಶಿವಾನಿಯವರ ಮೊಬೈಲ್ ಪೋನ್ ಖಾಸಗಿ ಬಸ್‍ನಲ್ಲಿ ಕಳೆದು ಹೋಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಕಾರ್ಯಪ್ರವೃತ್ತರಾದ ಪೊಲೀಸರು ಸಿಇಐಆರ್ ಪೋರ್ಟಲ್ ಆ್ಯಪ್