Home Archive by category ಕರಾವಳಿ (Page 16)

ಅಡಿಕೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕುಳ್ಳಂಪ್ಪಾಡಿ ಹಿರಿಯಣ್ಣ ಎಂಬವರ ಕೊಟ್ಟಿಗೆಯಲ್ಲಿ ಸುಲಿದು ದಾಸ್ತಾನು ಇರಿಸಿದ ಅಡಿಕೆ ಗೋಣಿ ಚೀಲಗಳ ಪೈಕಿ 5 ಗೋಣಿ ಚೀಲ ಅಡಿಕೆಯನ್ನು ದಿನಾಂಕ 14.03.2024 ರಂದು ಸಂಜೆ 7:00 ಗಂಟೆಯಿಂದ ದಿನಾಂಕ 15.03.2024 ರಂದು ಬಳಿಗ್ಗೆ 6:00 ಗಂಟೆಯ ಮಧ್ಯೆ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿದ ಬಗ್ಗೆ ಬೆಳ್ಳಾರೆ

ಉಳ್ಳಾಲ: ನಾಟೆಕಲ್ ಬೈಕ್ ಅಪಘಾತ – ಬೈಕ್‌ನಲ್ಲಿದ್ದ ಇಬ್ಬರು ಮೃತ್ಯು

ಉಳ್ಳಾಲ: ಮಂಜನಾಡಿ ನಾಟೆಕಲ್ ಸಮೀಪ ನಿನ್ನೆ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಿಂಬದಿ ಸವಾರಳಾಗಿದ್ದ ಹಳೆಯಂಗಡಿ ತೋಕೂರು ಬಳಿಯ ನಿವಾಸಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಚಲಾಯಿಸುತ್ತಿದ್ದ ಯುವಕ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಬೋಂದೇಲ್ ನಿವಾಸಿ ದೀಕ್ಷಿತ್ ಎಂಬವರ ಪತ್ನಿ ಹಳೆಯಂಗಡಿ ತೋಕೂರು ಬಸ್ ನಿಲ್ದಾಣ ಬಳಿಯ ನಿವಾಸಿ ಶ್ರೀ ನಿಧಿ (29) ನಿನ್ನೆ ಸಾವನ್ನಪ್ಪಿದ್ದು

ಬಣ್ಣವು ತೋರುವ ಧರ್ಮಸೆರೆ

ಎಲೆ ಭಾನುವಾರ ದಾಟಿದ್ದೇವೆ, ಬಣ್ಣದ ಅಲೆಯ ಹೋಳಿ ಗಮನಿಸುತ್ತಿದ್ದೇವೆ. ಪಾಮ್ ಸಂಡೇ ಎಂಬುದು ಕ್ರಿಶ್ಚಿಯನರ ಆಚರಣೆಗಳಲ್ಲಿ ಒಂದು. ಪಾಮ್ ಎಂದರೆ ತಾಳೆ. ನಮ್ಮ ತೆಂಗು ಕಂಗಿನ ಸಮೇತ ಜಗತ್ತಿನಲ್ಲಿ 2,600 ಜಾತಿಯ ತಾಳೆ ಜಾತಿಯ ಮರಗಳು ಇವೆ. ಅತಿ ದೊಡ್ಡ ಕಾಯಿಯ ಡಬಲ್ ಕೋಕನಟ್ ಎಂಬುದು ಸಿಶೆಲಸ್ ದ್ವೀಪದಲ್ಲಿ ಮಾತ್ರ ಬೆಳೆಯುತ್ತದೆ. ಇದನ್ನು ಅದರ ಆಕಾರದಿಂದಾಗಿ ಲವ್ ಇಲ್ಲವೇ ಪ್ರೇಮದ ತೆಂಗು ಎನ್ನುತ್ತಾರೆ. ಪ್ರೇಮದ ತೆಂಗು ಎಂದ ಮೇಲೆ ಅದು ನೇರವಾಗಿ ಕಾಮನ ಹಬ್ಬದ ಹೋಳಿಗೆ

“ಬಾಲವಿಕಾಸದಲ್ಲಿ ಲಿಟ್ಲ್ ಪರ್ಲ್ಸ್ ಫೆಸ್ಟ್ – 2023-24”

ವಿಟ್ಲ :ಮಾರ್ಚ್ 23: ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನರ್ಸರಿ ತರಗತಿಯ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ‘ಲಿಟ್ಲ್ ಪರ್ಲ್ಸ್ ಫೆಸ್ಟ್- 2023-24 ಜರುಗಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ , ” ಮಾಣಿಯಂತಹ ಗ್ರಾಮೀಣ ಪ್ರದೇಶ ದಲ್ಲಿ ಕಡಿಮೆ ಖರ್ಚಿನಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ

ಬಣ್ಣಗಳ ಹಬ್ಬ ಹೋಳಿ

ಚಳಿಗಾಲ ಮುಗಿದು ವಸಂತ ಕಾಲ ಕಾಲಿಡುವ ಸಮಯದಲ್ಲಿ ಬರುವ ಬಣ್ಣಗಳ ಹಬ್ಬ ಹೋಳಿ. ಗಂಡು, ಹೆಣ್ಣು, ಮಕ್ಕಳು, ಮುದುಕರು, ಬಡವ ಬಲ್ಲಿದ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಬಾವವಿಲ್ಲದೆ ಪರಸ್ಪರ ಬಣ್ಣದ ಓಕುಳಿಯನ್ನು ಎರಚಿಕೊಂಡು ಮನರಂಜನೆಯ ಉತ್ತುಂಗಕ್ಕೇರಿ, ದ್ವೇಷ, ಕ್ರೋಧ, ಮದ ಮತ್ಸರಗಳಿಗೆ ಇತಿಶ್ರಿ ಹಾಡಿ ಪ್ರೀತಿ ಪ್ರೇಮ, ಮಮತೆ, ಗೌರವದಿಂದ ಎಲ್ಲವನ್ನು ಮರೆತು ಸ್ನೇಹ ಹಸ್ತ ಚಾಚುವ ಒಂದು ವಿಶಿಷ್ಠ ಹಬ್ಬವೇ ಹೋಳಿ. ಹೆಚ್ಚಾಗಿ ಉತ್ತರ ಭಾರತದಲ್ಲಿ ಸಂಭ್ರಮಿಸುವ ಈ

ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿ ಇದು: ರವಿಶಂಕರ ಮಿಜಾರು

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಮನ್ಸೂರ್ ಆಲಿ ಅವರು 25 ಲಕ್ಷ ರೂ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವುದು ರಾಜ್ಯದ ಕಾಂಗ್ರೆಸ್ ಸರಕಾರ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ಜ್ವಲಂತ ಸಾಕ್ಷಿ ಎಂದು ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು ಹೇಳಿದ್ದಾರೆ. ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಚಗುಳಿತನ,

ಮುದ್ದಣ ಸಾಹಿತ್ಯೋತ್ಸವ-2024:  ಪ್ರಶಸ್ತಿ ಪ್ರದಾನ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವತಿಯಿಂದ ಕಾಂತಾವರ ಕನ್ನಡ ಭವನದಲ್ಲಿ ಮುದ್ದಣ ಸಾಹಿತೋತ್ಸವ ವಿವಿಧ ಸಾಹಿತ್ಯ ಚಟುವಟಿಕೆಗಳೊಂದಿಗೆ ನಡೆಯಿತು.   ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2023ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಕವಿ ಡಾ.ಲಕ್ಷ್ಮಣ. ವಿ.ಎ.ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಾಗೂ ಅವರ ಪ್ರಶಸ್ತಿ ಪುರಸ್ಕೃತ ಕೃತಿ

ಪುತ್ತೂರು : ಅಂತರ್ ರಾಜ್ಯ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಕಳೆದ ಒಂದೂವರೆ ತಿಂಗಳ ಹಿಂದೆ ಚಿನ್ನಾಭರಣ ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಅಂತರ್ ರಾಜ್ಯ ಕಳ್ಳತನ ಪ್ರಕರಣವನ್ನು ಭೇದಿಸಿದ ಪುತ್ತೂರು ನಗರ ಪೊಲೀಸರು ತಮಿಳುನಾಡಿನ ಮಹಿಳೆಯನ್ನು ಬಂಧಿಸಿ ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಫೆ.12ರಂದು ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ರೇಷ್ಮಾ ಎನ್ ಎಂಬವರ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು

ವಿಟ್ಲ: ಎರಡು ಅಂಗಡಿಗಳಿಗೆ ಕನ್ನ

ವಿಟ್ಲ: ವಿಟ್ಲ ಪೇಟೆ ಎರಡು ಅಂಗಡಿಗಳಿಗೆ, ವಿಟ್ಲದ ಮೇಗಿನ ಪೇಟೆಯ ಒಂದು ಅಂಗಡಿಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಹಣ ಹಾಗೂ ದಿನಸಿ ಸಾಮಾಗ್ರಿ ಕದ್ದೋಯ್ಯಿದಿದ್ದಾರೆ. ಚುನಾವಣೆ ಹಿನ್ನಲೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆಗೊಳಿಸಲಾಗಿದ್ದು, ಅವರು ತಡ ರಾತ್ರಿ ಹೊತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಕಳ್ಳರು ಸಲೀಸಾಗಿ ಬಂದು ಕಳ್ಳತನ ನಡೆಸಿ, ಅಷ್ಟೇ ಸಲೀಸಾಗಿ ತಪ್ಪಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ವಿಟ್ಲ ಪೊಲೀಸ್

ಕಾಸರಗೋಡು: ಅಂಬಲತ್ತರದಲ್ಲಿ ಪತ್ತೆಯಾದ ಖೋಟಾ ನೋಟು

ಕಾಸರಗೋಡು ಜಿಲ್ಲೆಯ ಕಾಞಾಂಗಾಡ್ ಸಮೀಪ ಅಂಬಲತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯೊಂದರಲ್ಲಿ ರೂ 2 ಸಾವಿರ ಮುಖಬೆಲೆಯ 7.25 ಕೋಟಿ ರೂ ಪತ್ತೆಯಾಗಿದ್ದು ತನಿಖೆಯ ವೇಳೆ ಇವೆಲ್ಲವೂ ಖೋಟಾ ನೋಟುಗಳು ಎಂದು ತನಿಖೆಯಿಂದ ಸ್ಪಷ್ಟವಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ನಿವಾಸಿ ಸುಲೈಮಾನ್ ಸಹಿತ ಹಾಗೂ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.ಅಂಬಲತರ ಠಾಣಾ ವ್ಯಾಪ್ತಿಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ