Home Archive by category ಕರಾವಳಿ (Page 41)

ಬಂಟ್ವಾಳ: ಫೆ. 10ರಿಂದ 13ರ ವರೆಗೆ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ

ಬಂಟ್ವಾಳ: ಫೆ. 10ರಿಂದ 13ರ ವರೆಗೆ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ.ಫೆಬ್ರವರಿ 10ರಂದು ಸಂಜೆ ಮಹಮ್ಮಾಯಿ ದೇವರ ರಾಶಿ ಪೂಜೆ, ನರ್ತನ ಸೇವೆ, ವಿಷ್ಣುಮೂರ್ತಿ ದೈವದ ನೇಮ, ಫೆಬ್ರವರಿ 11ರಂದು ಬೆಳಿಗ್ಗೆ ನಾಗದೇವರಿಗೆ ತಂಬಿಲ ಸೇವೆ, ಆಶ್ಲೇಷ ಬಲಿ,

ಕಲಬೆರಕೆ ಮನಸು ತಿನಿಸು

ಗೋವಾದ ಮಾಪ್ಸಾ ಪುರಸಭೆಯು ಕಲಬೆರಕೆ ಎಂದು ಗೋಬಿ ಮಂಚೂರಿ ನಿಷೇಧಿಸಿದೆ. ಮರ್ಯಾದೆಗೆಟ್ಟ ಚಕ್ರವರ್ತಿ ಸೂಲಿಬೆಲೆಗೆ ಸಮಾಜದ ನಡುವೆ ವಿಷ ಬೆರೆಸುವುದೆ ಕೆಲಸ ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕಡತದಿಂದ ತೆಗೆದ ನನ್ನ ಮಾತಿನ ಭಾಗವನ್ನು ಮತ್ತೆ ಸೇರಿಸಿ. ನಾನು ಅದರಲ್ಲಿ ಯಾರ ಹೆಸರನ್ನೂ ಬೆರೆಸಿರಲಿಲ್ಲ ಎಂದು ದಿಲ್ಲಿ ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಒತ್ತಾಯ ಮಾಡಿದ್ದಾರೆ. ನಿಮ್ಮ ನಡುವೆ ಬೆರೆಯದೆ

ಉಡುಪಿ: ಕ್ಯಾನ್ಸರ್ ಬಗ್ಗೆ ಜಾಗೃತಿ, ಜಲವರ್ಣ ಕಲಾಕೃತಿ

ವಿಶ್ವಕ್ಯಾನ್ಸರ್ ದಿನದ ಅಂಗವಾಗಿ ಬೃಹತ್ ಜಲವರ್ಣ ಕಲಾಕೃತಿಯು ರಚನೆಗೊಂಡಿದೆ. ಕಲಾವಿದರಾದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೆಬೆಟ್ಟು ಅವರು ಡಾ. ರಂಜಿತಾ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕೆಎಂಸಿ ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಇಂಟರಾಕ್ಟ್ ಆವರಣದಲ್ಲಿ ಬೃಹತ್ ಜಲವರ್ಣ ಕಲಾಕೃತಿಯನ್ನು ರಚಿಸಿದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ಕಲಾಕೃತಿಯನ್ನು ಅನಾವರಣಗೊಳಿಸಿದರು. ಸಮುದಾಯ ವೈದ್ಯಕೀಯ ವಿಭಾಗದ

ನೆಲ್ಯಾಡಿ: ಬೈಕ್‌ಗಳ ನಡುವೆ ಡಿಕ್ಕಿ-ಸವಾರನಿಗೆ ಗಂಭೀರ ಗಾಯ

ನೆಲ್ಯಾಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಹೊಸಮಜಲು-ಬಲ್ಯ ಕ್ರಾಸ್‌ ಬಳಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ನ ಸವಾರ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ದಿನೇಶ್ ಶೆಟ್ಟಿಯವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದೋಂತಿಲ ನಿವಾಸಿ ದಿನೇಶ್ ಶೆಟ್ಟಿ ನೆಲ್ಯಾಡಿಯಲ್ಲಿ ಟೈಲರ್ ಆಗಿರುವ ಇವರು ಫೆ.6ರಂದು ರಾತ್ರಿ 7.30ರ ವೇಳೆಗೆ ಕೆಲಸ ಮುಗಿಸಿ ತನ್ನ

ಕೊಕ್ಕಡ: ಯುವತಿ ನೇಣು ಬಿಗಿದು ಆತ್ಮಹತ್ಯೆ

ಕೊಕ್ಕಡ:ಕಳೆಂಜ ಇಲ್ಲಿಯ ಕಾಯರ್ತಡ್ಕ ಕುರುಂಬುಡೇಲು ನಿವಾಸಿ ಓಣಿಬಾಗಿಲು ಅವಿವಾಹಿತ ವನಿತಾ ಯಾನೆ ರೇವತಿ(30ವ)ರವರು ಡೆತ್ ನೋಟ್ ಬರೆದು ಮನೆಯ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫೆ.8ರಂದು ಮುಂಜಾನೆ ನಡೆದಿದೆ. ಮಂಗಳೂರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಯುವತಿ ಅನಾರೋಗ್ಯದ ಕಾರಣ ಒಂದು ತಿಂಗಳ ಹಿಂದೆ ಮನೆಗೆ ಬಂದಿದ್ದರು. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಉಲ್ಲೇಖಿಸಿರುವ ಬಗ್ಗೆ ಮಾಹಿತಿ ದೊರೆತಿದ್ದು ಧರ್ಮಸ್ಥಳ

ಬಂಟ್ವಾಳ: ಫೆ.11ರಂದು ಇರಾ ಬಂಟರ ಭವನದಲ್ಲಿ ‘ಸಂಧ್ಯಾ’ ಲಯನ್ಸ್ ಪ್ರಾಂತೀಯ ಸಮ್ಮಿಲನ

ಬಂಟ್ವಾಳ: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317 ಡಿ ಲಯನ್ಸ್ ಪ್ರಾಂತ್ಯ 5ರ ಪ್ರಾಂತೀಯ ಸಮ್ಮಿಲನ ‘ಸಂಧ್ಯಾ’ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿಯವರ ನೇತೃತ್ವದಲ್ಲಿ, ಸಮ್ಮಿಲನ ಸಮಿತಿ ಅಧ್ಯಕ್ಷ ದಾಮೋದರ ಬಿ. ಎಂ. ಇವರ ಸಾರಥ್ಯದಲ್ಲಿ ಲಯನ್ಸ್ ಕ್ಲಬ್ ಕೊಳ್ಳಾಡು ಸಾಲೆತ್ತೂರು ಇದರ ಆತಿಥ್ಯದಲ್ಲಿ ಫೆಬ್ರವರಿ 11ರಂದು ಇರಾ ಬಂಟರ ಭವನದ ಬಿ. ವಿ. ಕಾರಂತ ವೇದಿಕೆಯಲ್ಲಿ ನಡೆಯಲಿದೆ.ಪ್ರಾಂತ್ಯ 5ರ ಕ್ಲಬ್‌ಗಳಾದ ಕೊಳ್ಳಾಡು ಸಾಲೆತ್ತೂರು, ಬಂಟ್ವಾಳ,

ಮಂಗಳೂರು : ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ

ಮಂಗಳೂರಿನ ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿಬಿಎಸ್‌ಸಿ ರಸ್ತೆ ಸುರಕ್ಷತೆ ಜಾಗೃತಿ ತಿಂಗಳ ನಿಮಿತ್ತ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶಿಕ್ಷಕರಾದ ನಾಗರಾಜ್ ಮತ್ತು ಜಯಶ್ರೀ ಅವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದರು. ಕುದ್ರೋಳಿ ಬಳಿ ರಸ್ತೆಬದಿಯಲ್ಲಿ ನಿಂತು ಹೆಲ್ಮೆಟ್ನ ಮಹತ್ವ ಸಾರುವ ಘೋಷಣಾ ಫಲಕಗಳನ್ನು ಹಿಡಿದರು. ಅವರು

ಬಂಟ್ವಾಳ:ಆಲದಪದವಿನಲ್ಲಿ ವೈಭವಯುತವಾಗಿ ಸಂಪನ್ನಗೊಂಡ ಬೈದಶ್ರೀ ಸೌಹಾರ್ದ ಕ್ರೀಡಾಕೂಟ

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಸ್ವಾಮಿ ಗುರು ಸಮಾಜ ಸೇವಾ ಸಂಘ, ವಾಮದಪದವು-ಆಲದಪದವು ಆಶ್ರಯದಲ್ಲಿ ಬೈದಶ್ರೀ ಸೌಹಾರ್ದ ಕ್ರೀಡಾಕೂಟವು ಆಲದಪದವು ಮೈದಾನದಲ್ಲಿ ವೈಭವಯುತವಾಗಿ ಸಂಪನ್ನಗೊಂಡಿತು.ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದಿದ್ದು ಉತ್ಸಾಹದಿಂದ ಪಾಲ್ಗೊಂಡರು.ಸಂಘದ ಗೌರವಾಧ್ಯಕ್ಷ ಮೋನಪ್ಪ‌ ಪೂಜಾರಿ ಪಾಲೆದಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.‌ದ.ಕ ಜಿಲ್ಲಾ ಮೂರ್ತೆದಾರರ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಬಿರ್ವ

ಬಂಟ್ವಾಳ : ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಎ.ಗೋಪಾಲ ಅಂಚನ್ ನೇಮಕ

ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಬಂಟ್ವಾಳ ಹೋಬಳಿ ಅಧ್ಯಕ್ಷರಾಗಿ‌ ಪತ್ರಕರ್ತ ಗೋಪಾಲ ಅಂಚನ್ ಆಯ್ಕೆಯಾಗಿದ್ದಾರೆ.ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷರ ಅನುಮತಿಯಂತೆ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರ ಶಿಫಾರಸ್ಸಿನಂತೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಅವರು ಈ ನೇಮಕಾತಿ ಮಾಡಿದ್ದಾರೆ.ಕರ್ನಾಟಕ ತುಳು

ಮಂಗಳೂರಿನಲ್ಲಿ ಪೈಪ್ ಹಾನಿ, ಒಂದು ವಾರ ಉಳ್ಳಾಲಕ್ಕೆ ನೀರಿಲ್ಲ

ಉಳ್ಳಾಲ: ಮಂಗಳೂರಿ‌ನ ಪಡೀಲ್ ಸಮೀಪ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಒಡೆದ ಪರಿಣಾಮ ದುರಸ್ತಿ ಕಾರ್ಯಕ್ಕಾಗಿ ಉಳ್ಳಾಲ ನಗರಕ್ಕೆ ಒಂದು ವಾರದ ಕಾಲ ನೀರು ಸರಬರಾಜು ಇರುವುದಿಲ್ಲ ಎಂದು ಉಳ್ಳಾಲ ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.ಫೆ. 6 ರಂದು ಪಂಪ್ವೆಲ್ ಮಹಾವೀರ ವೃತ್ತ ಸಮೀಪದ ಪಡೀಲ್ ರೋಹನ್ ಸ್ಕ್ವೇರ್‌ ಕಟ್ಟಡದ ಮುಂಭಾಗದಲ್ಲಿ ತುಂಬೆ ಅಣೆಕಟ್ಟಿನಿಂದ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಹಾನಿಯಾಗಿದೆ. ಈ ನಿಟ್ಟಿನಲ್ಲಿ