Home Archive by category ಕರಾವಳಿ (Page 59)

ಲಬಕ್ ನಾರಿಶಕ್ತಿ ಚಬುಕು

ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆಪಾದನೆ ಹೊರಿಸಿ, ಲೋಕ ಸಭೆಯಲ್ಲಿ ಮಾತನಾಡಲೂ ಬಿಡದೆ, ಬೇಟಿ ಹಟಾವೊ ರೀತಿಯಲ್ಲಿ ಮಹುವಾ ಮೊಯಿತ್ರಾರನ್ನು ಲೋಕ ಸಭೆಯಿಂದ ವಜಾ ಮಾಡಲಾಯಿತು. ಇಂತಾ ಕೆಲವು ಘಟನೆಗಳು ಸಂಸತ್ತಿನಲ್ಲಿ ಹಿಂದೆ ಸಹ ನಡೆದಿವೆ. ಆದರೆ ಅದಾನಿ ಸಂಪತ್ತು ಪ್ರಶ್ನಿಸಿದ ರಾಹುಲ್ ಗಾಂಧಿ ಮತ್ತು ಮಹುವಾ ಮೊಯಿತ್ರ ಇಬ್ಬರು ಕೂಡ, ಸಂಸತ್ ವಜಾ ಕಂಡುದು ಸರಕಾರ

ಪುತ್ತೂರು: ಅಯೋಧ್ಯೆಯ ಸಮಗ್ರ ಕಥನ ಶ್ರೀರಾಮ ಕಥಾವೈಭವ

ಪುತ್ತೂರು: ರಾಮ ರಾಜ್ಯದ ನಿರ್ಮಾಣದ ಭಾಗವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆಯಾಗುತ್ತಿದೆ. ರಾಮ ಹಾಗೂ ರಾಮ ರಾಜ್ಯದ ಪ್ರತಿಷ್ಠೆಯನ್ನು ಹಳ್ಳಿ ಹಳ್ಳಿಯಲ್ಲಿ ಸಂಭ್ರಮ ಪಡಬೇಕು. ಶ್ರೀ ರಾಮನ ಪ್ರತಿಷ್ಠೆಯಿಂದ ಮನುಷ್ಯ ಮಾತ್ರವಲ್ಲದೆ ಪ್ರತಿ ಜೀವ ಸಂಕುಲಗಳಿಗೂ ಆನಂದ ಉಂಟಾಗಲಿದೆ. ಇದರಿಂದ ಜಗತ್ತಿಗೇ ಒಳಿತಾಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಅವರು ಪುತ್ತೂರಿನ ತೆಂಕಿಲದಲ್ಲಿ ಶ್ರೀರಾಮ ಕಥಾವೈಭವ

ಉಡುಪಿ ಪರ್ಯಾಯ ಮಹೋತ್ಸವ: ಹೊರೆಕಾಣಿಕೆ ಮೆರವಣಿಗೆ

ಭಾರತೀಯ ಪರಂಪರೆ, ಮಾಧ್ವ ತತ್ವವನ್ನು ಜಗತ್ತಿಗೆ ಸಾರಿದ ಹಾಗೂ ಗೀತಾಸಾರವನ್ನು ವಿಶ್ವಕ್ಕೆ ಪಸರಿಸಲು ಕಾರಣವಾಗಿರುವ ಉಡುಪಿ ಅಷ್ಠಮಠಗಳ ಪೈಕಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಯವರ ಪರ್ಯಾಯ ಪೀಠಾರೋಹಣ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಹೊರೆಕಾಣಿಕೆಯನ್ನು ಮೆರವಣಿಗೆಯ ಮೂಲಕ ಮಠಕ್ಕೆ ಅಗಮಿಸಿತ್ತು. ಈ ಸಂದರ್ಭ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಕಾಸರಗೋಡು: ಕರಂದಕ್ಕಾಡ್ ಶ್ರೀ ವೀರಹನುಮಾನ್ ಮಂದಿರದ ವಾರ್ಷಿಕ ಮಹಾಸಭೆ

ಕಾಸರಗೋಡು ಕರಂದಕ್ಕಾಡ್ ಶ್ರೀ ವೀರಹನುಮಾನ್ ಮಂದಿರದ ವಾರ್ಷಿಕ ಮಹಾಸಭೆ ಅಧ್ಯಕ್ಷರಾದ ಶ್ರೀ ಅವಿನಾಶ್ ಅವರ ಅಧ್ಯಕ್ಷತೆಯಲ್ಲಿ ಮಂದಿರ ಪರಿಸರದಲ್ಲಿ ನಡೆಯಿತು. ವಿವಿಧ ಚರ್ಚೆಗಳ ನಂತರ ಹೊಸ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅವಿನಾಶ್ ಆಯ್ಕೆ ಯಾದರು, ಉಪಾಧ್ಯಕ್ಷ ಶ್ರೀ ರವಿ ಕರಂದಕ್ಕಾಡ್, ಕಾರ್ಯದರ್ಶಿ ಜಿತೇಶ್ ಕರಂದಕ್ಕಾಡ್, ಜತೆ ಕಾರ್ಯದರ್ಶಿ ಹರೀಶ್ ಪ್ರತೀಕ್, ಕೋಶಾಧಿಕಾರಿ ಜೀವನ್, ಮತ್ತು ಕಾರ್ಯಕಾರಿಣಿಸಮಿತಿ ಸದಸ್ಯರಾಗಿ ಮಾಧವ, ರಾಧಾಕೃಷ್ಣ, ಗಣೇಶ್,

ಪುತ್ತೂರು: ಗೆಜ್ಜೆಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಡಗನ್ನೂರುಃ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ (ರಿ.) ಶ್ರೀ ಕ್ಷೇತ್ರ ಗೆಜ್ಜೆಗಿರಿ ವರ್ಷಾವಧಿ ಜಾತ್ರೋತ್ಸವವು ಫೆ.25 ರಿಂದ 28 ತನಕ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪ್ರಾರಂಭದಲ್ಲಿ ಶ್ರೀ ಕ್ಷೇತ್ರದ ಸರ್ವಶಕ್ತಿಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಗೆಜ್ಜೆಗಿರಿ ಕ್ಷೇತ್ರಾಢಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ,ರವರು ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ

ಕಲ್ಯಾಣ ಕ್ರಾಂತಿಯ ಅನೈತಿಕ ಪೋಲೀಸುಗಿರಿ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ನಾಲ್ಕರ್ ಕ್ರಾಸ್‌ನ ಲಾಡ್ಜ್‌ನಲ್ಲಿ ತಂಗಿದ್ದ ಶಿರಸಿ ತಾಲೂಕಿನ ಹಿಂದೂ ಗಂಡು, ಮುಸ್ಲಿಂ ಯುವತಿಯ ಮೇಲೆ ಏಳು ಮಂದಿ ಅನೈತಿಕ ಪೋಲೀಸುಗಿರಿ ನಡೆಸಿ ಹಲ್ಲೆ ನಡೆಸಿದ್ದು ನಾನಾ ತಿರುವು ಕಾಣುತ್ತಿದೆ. ಕಳೆದ ವಾರ ಮಂಗಳೂರಿನಲ್ಲಿ ಮತ್ತು ಉಡುಪಿಯಲ್ಲಿ ಹಿಂದೂ ಹೆಣ್ಣು ಮುಸ್ಲಿಂ ಗಂಡು ಕೂಡಿ ಮಾತನಾಡಿದರು ಎಂದು ಹಿಂದೂ ಹೆಸರಿನಲ್ಲಿ ಕೆಲವರ ಗುಂಪು ಹಲ್ಲೆ ಮಾಡಿತ್ತು. ಅದಕ್ಕಿಂತ ಘೋರವಾದುದು ಬೆಳಗಾವಿಯ ಘಟನೆ. ಸರಕಾರಿ

ರಾಮ ಪ್ರಾಣ ಪ್ರತಿಷ್ಠೆಗೆ ವಿರೋಧ ಏಕೆ?

ನಾಲ್ವರು ಶಂಕರಾಚಾರ್ಯರು. ಇಬ್ಬರದು ಒಮ್ಮುಖ ವಿರೋಧ. ಒಬ್ಬರದು ಸಮ್ಮತದ ಜೊತೆಗೆ ಮೌನ. ಮತ್ತೊಬ್ಬರದು ಮಹಾ ಮೌನ. ಅದನ್ನು ಸಮ್ಮತಿ ಲಕ್ಷಣ ಎನ್ನಬಹುದು. ರಾಮ ಮಂದಿರ ಈಗ ವಿವಾದದ ಬಿಂದು. ರಾಮ ಇವರ ಅಪ್ಪನ ಆಸ್ತಿಯೇ ಎಂದು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸುವ ತನಕ ವಿವಾದ ಬೆಳೆದಿದೆ. ಶಂಕರಾಚಾರ್ಯರು ಅಯೋಧ್ಯೆಗೆ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ. ಆದರೆ ಅವರಲ್ಲೂ ಭಿನ್ನಮತ ಪ್ರಕಟವಾಗಿದೆ. ಶಾಸಕ ಪ್ರದೀಪ್ ಈಶ್ವರ್ ಮಾತನಾಡುತ್ತ ನಾನು ರಾಮನನ್ನು

ಲೀಲ ಕಿರಣ ಮರಣ

400 ಕನ್ನಡ, ಇತರ ಭಾಷೆಯ 200 ಎಂದು 600ರರಷ್ಟುಚಲನಚಿತ್ರಗಳಲ್ಲಿ ನಟಿಸಿದ್ದ ನಟಿ ಲೀಲಾವತಿಯವರು ಡಿಸೆಂಬರ್ 8ರಂದು ಬೆಂಗಳೂರು ಹೊರ ವಲಯದ ನೆಲಮಂಗಲದ ಆಸ್ಪತ್ರೆಯಲ್ಲಿ ನಿಧನರಾದರು. ಇವರ ಮೂಲ ಹೆಸರು ಲೀಲ ಕಿರಣ. 1937 ರಲ್ಲಿ ಹುಟ್ಟಿದ ಇವರು ಬಾಸೆಲ್ ಮಿಶನರಿಗೆ ಸೇರಿದ ಅಚ್ಚ ತುಳು ಮಾತಿನವರು. 6ರ ಪ್ರಾಯದಲ್ಲಿ ಹೆತ್ತವರನ್ನು ಕಳೆದುಕೊಂಡ ಮಂಗಳೂರು ಬಾಲಕಿ. ನಟನೆಯ ಸೆಳೆತಕ್ಕೆ ಸಿಲುಕಿ ಮೈಸೂರು ಸೇರಿದರು. ಚಂಚಲ ಕುಮಾರಿ ಸಿನಿಮಾದ ಸಣ್ಣ ಪಾತ್ರದಿಂದ ತೊಡಗಿ ಹತ್ತಾರು

ಪಡುಬಿದ್ರಿ: ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶಕ್ಕೆ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಪಡುಬಿದ್ರಿ ಪೊಲೀಸರು ಪಲಿಮಾರಿನ ನಡಿಯೂರು ಕೊಪ್ಪಲ ರಸ್ತೆಯಲ್ಲಿ ವಶಕ್ಕೆ ಪಡೆದಿದ್ದಾರೆ.ಅಕ್ರಮ ಮರಳುಗಾರಿಕೆಯ ಬಗ್ಗೆ ಮಾಹಿತಿ ಪಡೆದ ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್. ಸಿಬ್ಬಂದಿಗಳೊಂದಿಗೆ ನಂದಿಕೂರು ಪಲಿಮಾರು ರಸ್ತೆಯಾಗಿ ಪೊಲೀಸ್ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅವರಾಲು ಮಟ್ಟು ಕಡೆಯಿಂದ ಕುಂಜ್ಞಾಲಿ ತೋಟ ಸಣ್ಣ ಸೇತುವೆ ಬಳಿ ಕೆ.ಎಲ್. 60-ಎ.9937ನೋಂದಾನಿ ಸಂಖ್ಯೆಯ ಟಿಪ್ಪರೊಂದು ಪೊಲೀಸ್ ವಾಹನ ನೋಡಿ ಪಕ್ಕದ

ಮೂಡುಬಿದಿರೆ: ಚಿನ್ನ ಕದ್ದ ಆರೋಪಿಯ ಬಂಧನ

ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ ಕಚೇರಿ ಸಮೀಪದ ಮನೆಯಲ್ಲಿದ್ದ ಚಿನ್ನ ಮತ್ತು ಮೊಬೈಲನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಬಂಟ್ವಾಳ ರಾಯಿ ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಬಾಗಲಕೋಟೆ ಮೂಲದ ನಿವಾಸಿಗಳು ವಾಸವಿದ್ದ ಮನೆಗೆ ಹಾಡು ಹಗಲೇ ನುಗ್ಗಿದ ಆರೋಪಿ ಮನೆಯಲ್ಲಿದ್ದ ಚಿನ್ನದ ಸರ ಮೊಬೈಲ್ ಸೇರಿದಂತೆ ರೂ 50 ಸಾವಿರ ಮೌಲ್ಯದ ಸ್ವತ್ತು ಕಳವು ಮಾಡಿದ್ದ. ಈ ಬಗ್ಗೆ ಮೂಡುಬಿದಿರೆ