Home Archive by category ಕರಾವಳಿ (Page 61)

ನೆಲ್ಯಾಡಿ: ಕಾರು ಬಸ್ಸು ಅಪಘಾತ : ಪ್ರಯಾಣಿಕರಿಗೆ ಗಾಯ

ನೆಲ್ಯಾಡಿ: ಬೆಂಗಳೂರಿಂದ ಮಂಗಳೂರಿಗೆ ಬರುತ್ತಿದ್ದ ಕಾರೊಂದು ನಿಂತಿದ್ದ ಬಸ್‌ನ ಹಿಂಬದಿಗೆ ಗುದ್ದಿದ ಘಟನೆ ಶಿರಾಡಿ ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ ಸಂಭವಿಸಿದೆ. ಬೆಳಗಿನ ಜಾವವಾದ ಕಾರಣ ಬಸ್ಸು ನಿಂತಿದ್ದು, ಕಾರು ಚಾಲಕನ ಗಮನಕ್ಕೆ ಬಾರದೆ ಇದ್ದುದರಿಂದ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಬೆಂಗಳೂರಿನ ಬನಶಂಕರಿ ಲೇ ಔಟ್‌ನ ಮಹೇಶ್ (28) ,ಅಭಿಷೇಕ್ (30 ),

ಶಿರೂರು: ದೋಣಿ ದುರಂತ, ಇಬ್ಬರು ಮೀನುಗಾರರು ದುರ್ಮರಣ

ಶಿರೂರು: ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ. ಭಾನುವಾರ ರಾತ್ರಿ ಶಿರೂರು ಕಳುಹಿತ್ಲುನಿಂದ ಮೀನುಗಾರಿಕೆಗೆ ತೆರಳಿದ ನುಮೈರಾ ಅಂಜುಮ್ ದೋಣಿಯಲ್ಲಿ ೩ ಜನ ಮೀನುಗಾರರಿದ್ದರು. ಮೀನುಗಾರಿಕೆ ನಡೆಸಿ ವಾಪಾಸ್ಸು ಬರುವಾಗ ಶಿರೂರು ಕಳುಹಿತ್ಲು ಅಳಿವೆ ಸಮೀಪ ಅರಬ್ಬೀ ಸಮುದ್ರದಲ್ಲಿ ದೋಣಿ ಮಗುಚಿ ದೋಣಿಯಲ್ಲಿದ್ದ ಅಬ್ಸುಲ್ ಸತ್ತರ್ ಹಡವಿನಕೋಣೆ, ಶಿರೂರು ಮಿಸ್ಬಾ

ಮಂಗಳೂರು: ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಮೃತ ಮಹೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ, ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಮೃತ ಮಹೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮ, ಮನವಿ ಪತ್ರ, ಲಾಂಛನ, ಸಮವಸ್ತ್ರ ಬಿಡುಗಡೆ ಕಾರ್ಯಕ್ರಮವು ಬೆಂಗ್ರೆಯ ಫೆರಿ ಪಾಯಿಂಟ್‌ನಲ್ಲಿ ನಡೆಯಿತು. ಮೀನುಗಾರಿಕಾ ಇಲಾಖೆಯ ಸಚಿವರಾದ ಮಂಕಾಳ ಎಸ್. ವೈದ್ಯ ಅವರು ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಮೃತ ಮಹೋತ್ಸವದ ಲಾಂಛನ ಬಿಡುಗಡೆಗೊಳಿಸಿದರು. ಇದೇ

ವಿಟ್ಲ:ಬಸ್ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಮೃತ್ಯು

ವಿಟ್ಲ: ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಕಬಕ  ಸಮೀಪದ ಮಿತ್ತೂರು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ‌ ಮೃತರನ್ನು ಬಿ.ಸಿ.ರೋಡ್ ಕೈಕಂಬ ನಿವಾಸಿ  ಆಶಿಮ್ ಎಂದು ಗುರುತಿಸಲಾಗಿದೆ. ಬೈಕ್ ಬಸ್ಸಿನಡಿಗೆ ಎಸೆಯಟ್ಟಿದ್ದು, ಸಂಪೂರ್ಣ ಜಖಂಗೊಂಡಿದೆ.  ಕಬಕ ಕಡೆಯಿಂದ ಬಿ.ಸಿ ರೋಡ್ ಗೆ ತೆರಳುತ್ತಿದ್ದಾಗ ಎದುರಿನಿದ ಬಂದ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ ರಸ್ತೆ ಬಿಟ್ಟು ಬದಿಯ ಕಣಿವೆಗೆ ಜಾರಿ

ಮೂಡುಬಿದಿರೆ: ವಿರಾಸತ್ ನಲ್ಲಿ ಶ್ರೇಯಾ ಘೋಷಾಲ್ “ಭಾವ ಲಹರಿ”

ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ನ ಮೂರನೇ ದಿನವಾಗಿರುವ ಶನಿವಾರದಂದು  ಭಾರತೀಯ ಚಿತ್ರರಂಗದ ಹಿನ್ನಲೆ ಗಾಯಕಿ, ಮೆಲೋಡಿ ಹಾಡುಗಳ ಮೂಲಕ ಗುರುತಿಸಿಕೊಂಡಿರುವ ಶ್ರೇಯಾ ಘೋಷಾಲ್ ಅವರ ಮೆಲೋಡಿ ಹಾಡುಗಳ  “ಭಾವ ಲಹರಿ” ಸಂಗೀತ ಕಾರ್ಯಕ್ರಮವು ಪುತ್ತಿಗೆ ವಿವೇಕಾನಂದ ನಗರದ  ಬಯಲು ರಂಗಮಂದಿರದಲ್ಲಿ ಸೇರಿದ  ಸಂಗೀತ ರಸಿಕರ ಹೃದಯ ಗೆದ್ದಿತು. “ಐಸಾ ಕ್ಯೂನ್ ಹೋತಾ ಹೈ” ಚಿತ್ರದ ಯಾರಾ ಯಾರಾ ಹಾಡಿನ ಮೂಲಕ ಆರಂಭಿಸಿದ ಶ್ರೇಯಾ

ಮಂಗಳೂರು: ರಾಷ್ಟ್ರಮಟ್ಟದ ಪಲ್ಸರ್ ಮೇನಿಯಾ 2.0ದಲ್ಲಿ ಪ್ರಥಮ ಸ್ಥಾನ ಪಡೆದ ನೌಮಾನ್ ಪಜೀರ್

ಆತ ಗ್ರಾಮೀಣ ಭಾಗದ 20ರ ಹರೆಯದ ಯುವಕ.  ಕಾಲೇಜು ಮೆಟ್ಟಿಲು ಹತ್ತದೇ, ಕಿರಿ ವಯಸ್ಸಿನಿಂದಲೇ ಸ್ಟಂಟ್‌ನಲ್ಲಿ ಅತೀವ ಹುಮ್ಮಸ್ಸು. ಇಂದು ಅದೇ ಹುಮ್ಮಸ್ಸು ರಾಷ್ಟ್ರದ 25,೦೦೦ ಮಂದಿಯ ಎದುರುಗಡೆ, ೨೮  ಸ್ಪರ್ಧಾಳುಗಳನ್ನು ಸೋಲಿಸಿ ಇಡೀ ಗ್ರಾಮದ ಹೆಸರನ್ನು ಕೀರ್ತಿಪತಾಕೆಗೆ ಏರಿಸಿ ಸಾಧನೆ ಮೆರೆದಿದ್ದಾರೆ. ಪಜೀರು ಗ್ರಾಮದ ನಿವಾಸಿ ನೌಮಾನ್ ಪಜೀರು ಎಂಬವರು ಪ್ರತಿಷ್ಠಿತ ಬಜಾಜ್ ಆಟೋ ಲಿಮಿಟೆಡ್ ಇವರು ಮುಂಬಯಿ ಯಲ್ಲಿ ಆಯೋಜಿಸಿದ  ರಾಷ್ಟ್ರಮಟ್ಟದ ಪಲ್ಸರ್ ಮೇನಿಯಾ 2.0

ಕುಂದಾಪುರ: ಸೌಹಾರ್ದ ಕ್ರಿಸ್ಮಸ್ ಆಚರಣೆ

ಉಡುಪಿ: ಕ್ರಿಸ್ತ ಜಯಂತಿ ಹಬ್ಬವು ಶಾಂತಿಯನ್ನು ಸಾರುತ್ತದೆ. ಶಾಂತಿಯ ಸಾಧನವಾಗಲು, ಶಾಂತಿಯ ದೂತರಾಗಲು ನಮ್ಮನ್ನು ಪ್ರೇರೇಪಿಸುತ್ತದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನುಮನಗಳಲ್ಲಿ ಪ್ರಜ್ವಲಿಸಬೇಕಾದರೆ ನಾವು ಕ್ರಿಸ್ತರಂತೆ ಪ್ರೀತಿ ಸ್ವರೂಪರಾಗಿ ಸೇವಾಮನೋಭಾವದಿಂದ ನಿಸ್ವಾರ್ಥಿಗಳಾಗಬೇಕು ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಶನಿವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ 

ಕಿನ್ನಿಗೋಳಿ: ಮಾನವನ ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ: ಹಿಲ್ಡಾ ಡಿಸೋಜ

ಮನುಷ್ಯನ ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಕ್ರೀಡೆಯು ಸಹಕಾರಿ ಎಂದು ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ  ಹಿಲ್ಡಾ ಡಿಸೋಜ ಅವರು ಹೇಳಿದರು. ಅವರು ಐಕಳ ಶಕ್ತಿಕಲ್ಯಾಣಿ ಮೈದಾನದಲ್ಲಿ ಐಕಳ ಕಂಬಲ ಫ್ರೆಂಡ್ಸ್ ವತಿಯಿಂದ ಆಶಕ್ತರಿಗೆ ವೈದ್ಯಕೀಯ ನೆರವಿಗಾಗಿ ಐಕಳ ಪ್ರೀಮಿಯರ್ ಲೀಗ್  ಕ್ರಿಕೆಟ್ ಪಂದ್ಯಾಟವನ್ನು ದೀಪ ಬೆಳಗಿಸಿ  ಉದ್ಘಾಟಿಸಿ ಮಾತನಾಡಿದರು. ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದೀವಾಕರ ಚೌಟ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ವೇಳೆ 

ಉಡುಪಿ: ಸೇಲ್ ಎಕ್ಸ್‌ ಪರ್ಟ್ ಬ್ಯುಸಿನೆಸ್ ಸೊಲ್ಯೂಷನ್ಸ್‌ ನಿಂದ ರೂಪಿ ಬಾಸ್ ಎಮ್‌ ಎಸ್‌ಎಮ್‌ ಇ ಮಿಲನ್ ಕಾರ್ಯಕ್ರಮ

ಸೇಲ್ ಎಕ್ಸ್‌ಪರ್ಟ್ ಬ್ಯುಸಿನೆಸ್ ಸೊ ಲ್ಯೂಷನ್ಸ್ ವತಿಯಿಂದ ಎನ್‌ಎಸ್‌ಇ ಎಮರ್ಜ್, ಮತ್ತು ರೋಟರಿ ಉಡುಪಿ ಮಿಡ್ ಟೌನ್ ಸಹಯೋಗದೊಂದಿಗೆ ಎಮ್‌ಎಸ್‌ಎಮ್‌ಇ ಮಿಲನ್ ಡಿ.19ರಂದು ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಎಮ್‌ಎಸ್‌ಎಮ್‌ಇ ಬ್ಯುಸ್‌ನೆಸ್ ಓನರ್ಸ್‌ಗಳಿಗೆ ಖುಷಿಯ ವಿಚಾರ. ರೂಪಿ ಬಾಸ್ಎ ಮ್‌ಎಸ್‌ಎಮ್‌ಇ ಮಿಲನ್ ಎಂಬ ಕಾರ್ಯಾಗಾರವನ್ನು ಆಯೋಜಿಸಿದ್ದು, ಅಮೂಲ್ಯವಾದ ನಾಯಕತ್ವದ ಜ್ಞಾನ, ಮಾರಾಟ

ಕಡಬ:ರಬ್ಬರ್ ತೋಟದ ಕಾರ್ಮಿಕರನ್ನು ಬೆನ್ನಟ್ಟಿದ ಕಾಡಾನೆಗಳು: ಮೂವರಿಗೆ ಗಾಯ

ಕಡಬ: ಕೊಣಾಜೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆ.ಎಫ್.ಡಿ.ಸಿ) ದ ರಬ್ಬರ್ ತೋಟದಲ್ಲಿ ರಬ್ಬರ್ ಟಾಪಿಂಗ್ ಮಾಡುತ್ತಿದ್ದ ಕಾರ್ಮಿಕರನ್ನು ಕಾಡಾನೆಗಳು ಬೆನ್ನಟ್ಟಿ ಮೂವರು ಗಾಯಗೊಂಡ ಘಟನೆ ಡಿ.16ರ ಶನಿವಾರ ಮುಂಜಾನೆ ಸಂಭವಿಸಿದೆ. ನಿಗಮದ ಟಾಪಿಂಗ್ ಕಾರ್ಮಿಕ ರಾಜಗೋಪಾಲ್ (49), ಮೇಸ್ತ್ರಿಗಳಾದ ನಾಗಪ್ಪ (53) ಹಾಗೂ ಶಿವರಾಜ್ (43) ಗಾಯಗೊಂಡವರು.ಗಾಯಾಳುಗಳನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ