Home Archive by category ಕ್ರೈಮ್ (Page 3)

ಪುಂಜಾಲಕಟ್ಟೆ: ಹೃದಯಾಘಾತದಿಂದ ಯುವತಿ ಸಾವು

ಯುವತಿಯೋರ್ವಳು ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಪುಂಜಾಲಕಟ್ಟೆಯ ಮಧ್ವಗುತ್ತು ಎಂಬಲ್ಲಿ ಸಂಭವಿಸಿದೆ. ಕಾವಳಪಡೂರು ಗ್ರಾಮದ ಮಧ್ವಗುತ್ತು ರಾಜೀವ ಶೆಟ್ಟಿ-ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ (19) ಮೃತಪಟ್ಟವರಾಗಿದ್ದಾರೆ. ಮೂಲತ: ಕಾವಳಮೂಡೂರು ಪುಳಿಮಜಲಿನ ನಿವಾಸಿಯಾಗಿದ್ದ ಮಿತ್ರಾ ಅವರ ತಂದೆ ಹಾಗೂ ಸಹೋದರ ಬೆಂಗಳೂರಿನಲ್ಲಿದ್ದು, ಪ್ರಸ್ತುತ

ಮೂಡುಬಿದಿರೆ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ: ಬೆಳುವಾಯಿ ಬರಕಲ ಗುತ್ತು ಮನೆಯ ರಾಮಣ್ಣ ಎಂಬವರ ಪುತ್ರ ಸಂತೋಷ್ ಪೂಜಾರಿ (42) ತಮ್ಮ ಪಕ್ಕದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮನೆಗೆ ಆಧಾರ ಸ್ತಂಭವಾಗಿದ್ದ ಸಂತೋಷ್ ಅವರು ಮೂಡುಬಿದಿರೆಯಲ್ಲಿ ಎಲೆಕ್ಟ್ರೋ ವಲ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಪತ್ನಿ ಮತ್ತು ಸಣ್ಣ ವಯಸ್ಸಿನ ಇಬ್ಬರು ಅವಳಿ ಪುತ್ರಿಯರಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ

ಅಡ್ಯನಡ್ಕ : ಪ್ರಿಂಟಿಂಗ್ ಪ್ರೆಸ್ ಮಾಲಕ ಬಾವಿಗೆ ಬಿದ್ದುಆತ್ಮಹತ್ಯೆ

ಪುತ್ತೂರು:ಅಡ್ಯನಡ್ಕದಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿ ವ್ಯವಹಾರ ನಿರ್ವಹಿಸುತ್ತಿದ್ದ ಪುತ್ತೂರು ಪೋಳ್ಯ ನಿವಾಸಿಯೊಬ್ಬರು ಮನೆ ಸಮೀಪದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.16ರಂದು ಬೆಳಕಿಗೆ ಬಂದಿದೆ. ಅಡ್ಯನಡ್ಕದಲ್ಲಿ ಅನುಗ್ರಹ ಪ್ರಿಂಟಿಂಗ್ ಪ್ರೆಸ್ ಹೊಂದಿರುವ ಪೋಳ್ಯ ನಿವಾಸಿ ಪದ್ಮಯ್ಯ ಗೌಡ(50ವ)ರವರು ಮೃತಪಟ್ಟವರು.ಪೋಳ್ಯ ದಿ.ಲಿಂಗಪ್ಪ ಗೌಡ ಅವರ ಪುತ್ರ ಪದ್ಮಯ್ಯ ಗೌಡ ಅವರು ಆರಂಭದಲ್ಲಿ ಪುತ್ತೂರಿನಲ್ಲಿ ಹುಸೈನ್ ಅವರ ಮಾಲಕತ್ವದ ಕೆನರಾ

ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಪೊಲೀಸರ ವಶಕ್ಕೆ

ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ಸುಮಾರು ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಬಂಧಿತ ಮಂಗಳೂರು ಮೆನ್ನಬೆಟ್ಟು ಗ್ರಾಮದ ಮೊಹಮ್ಮದ್ ನೌಷದ್ ಯಾನೆ ಉಲ್ಲಂಜೆ ನೌಷದ್(28). ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣ ಸೇರಿದಂತೆ 4

ತಲಪಾಡಿ, ಅಪ್ರಾಪ್ತೆಗೆ ಕಿರುಕುಳ : ಪೋಕ್ಸೊ ಕಾಯಿದೆಯಡಿ ಆರೋಪಿ ಬಂಧನ

ಉಳ್ಳಾಲ: ಅಪ್ರಾಪ್ತೆ ಮೇಲೆ ಕಿರುಕುಳ ನೀಡಿರುವ ಘಟನೆ ತಲಪಾಡಿ ರಿಕ್ಷಾ ಸ್ಟ್ಯಾಂಡ್ ಬಳಿ ಇಂದು ಸಂಜೆ ವೇಳೆ ನಡೆದಿದ್ದು, ಆರೋಪಿ ಮುಡಿಪು ದರ್ಖಾಸು ಸೈಟ್ ನಿವಾಸಿ ಮುವಾದ್ (35) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.ಆರೋಪಿ ಮುವಾದ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಗಾಂಜಾ ಸಹಿತ ಇತರೆ ಎರಡು ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇಂದು ಸಂಜೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಶಾಲೆಯಿಂದ

ವಾರದ ಬಳಿಕ ಶರತ್ ಕುಮಾರ್ ಮೃತದೇಹ ಪತ್ತೆ

ಬೈಂದೂರು: ವಾರದ ಹಿಂದೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಆಕಸ್ಮಿಕವಾಗಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಶರತ್ ಕುಮಾರ್ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್ ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್ (23) ಮೃತಪಟ್ಟವರು.ಕಳೆದೆರಡು ದಿನಗಳಿಂದ ಪರಿಸರದಲ್ಲಿ ಮಳೆ ಇಳಿಮುಖವಾಗಿದ್ದು ನೀರಿನ ಹರಿವು ಕಡಿಮೆಯಾಗಿದೆ. ಇದರಿಂದಾಗಿ ಫಾಲ್ಸ್ ನಲ್ಲಿ ಶರತ್ ಬಿದ್ದ ಸಮೀಪದ ಕಲ್ಲು ಪೊಟರೆಯೊಳಗೆ ಕೊಳೆತ

ಸುಲಿಗೆ ಪ್ರಕರಣಕ್ಕೆ ಸಂಬಂದಿಸಿದಂತೆ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ದಿನಾಂಕ 17.12.2000 ರಂದು ರಾತ್ರಿ ಸಮಯ 8:45 ಗಂಟೆಗೆ ಮಹಿಳೆಯನ್ನು ಅಡ್ಡಗಟ್ಟಿ ಆರೋಪಿಗಳು ಚೂರಿ ತೋರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಸಿದು ಸುಲಿಗೆ ಮಾಡಿ ಪರಾರಿಯಗಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ , ಉರ್ವಾ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಅಕ್ರ 130/2000 ಕಲಂ: 392 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಹುಸೇನ್ @ ಮೊಹಮ್ಮದ್ ಹುಸೇನ್ ಬಶೀರ್ ಮತ್ತು ಮೊಯ್ದೀನ್ ಕುದ್ರೋಳಿ ಎಂಬವರುಗಳಿದ್ದು ಹುಸೇನ್ @ ಮೊಹಮ್ಮದ್ ಹುಸೇನ್

ಕೆಜೆ ಹಳ್ಳಿ ಡಿಜೆ ಹಳ್ಳಿ ವಿದ್ವಾಂಸಕ ಹಿತೂರಿಗಳ ಕೇಸು ವಾಪಾಸ್ ಪಡೆದರೆ, ಭಯೋತ್ಪಾದನೆಗೆ ಪ್ರೋತ್ಸಾಹ ಕೊಟ್ಟಂತೆ : ಡಾ. ಭರತ್ ಶೆಟ್ಟಿ

ಇಡೀ ರಾಜ್ಯವನ್ನೇ ಬಿಚ್ಚಿಬಿಳಿಸಿದ್ದ ಕೆ ಜೆ ಹಳ್ಳಿ ಡಿಜೆ ಹಳ್ಳಿಯಲ್ಲಿ ನಡೆದ ವಿದ್ವಾಂಸಕ ಕೃತ್ಯ ದಲ್ಲಿ ಭಾಗಿಯಾದ ಆರೋಪಿಗಳ ಮೊಕದ್ದಮ್ಮೆ ವಾಪಾಸ್ ಪಡೆಯಲು ಶಾಸಕ ತನ್ವೀರ್ ಸೇಠ್ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದಿದ್ದು ಒಂದು ವೇಳೆ ಕೇಸ್ ಹಿಂಪಡೆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕ ಚಟುವಟಿಕೆಗೆ ಮತ್ತು ವಿದ್ವಾಂಸಕ ಕೃತ್ಯಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಗಂಭೀರ

ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್

ಇತ್ತೀಚೆಗೆ ನಡೆದ ಎರಡು ನೈತಿಕ ಪೊಲೀಸ್‍ಗಿರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಹಿಂದೂಪರ ಸಂಘಟನೆ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ. ಕಳೆದ ಒಂದು ವರ್ಷದಲ್ಲಿ 60 ಇಂತಹ ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಲು ಕ್ರಮ ವಹಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಆರೋಪಿಗಳು ಯಾವ ಸಂಘಟನೆ ಅನ್ನೋದು ನಮಗೆ ಬೇಡ. ನಿರಂತರ ಸಮಾಜ ವಿರೋಧಿ ಚಟುವಟಿಕೆಗಳನ್ನು

ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್‌ಗಳ ಮಾರಾಟ

ನಗರದ ಕಾರ್ ಸ್ಟ್ರೀಟ್‌ನಲ್ಲಿರುವ ಮನೋಹರ್ ಶೇಠ್ ಮಾಲೀಕತ್ವದ ಅಂಗಡಿ ಮತ್ತು ಉತ್ತರ ಪ್ರದೇಶ ಮೂಲದ ಬೆಚನ್ ಸೋನಾರ್ ಅವರ ಮಾಲೀಕತ್ವದ ಫಳ್ನೀರ್‌ನಲ್ಲಿರುವ ಮತ್ತೊಂದು ಅಂಗಡಿಯಿಂದ ಚಾಕೊಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ರಗ್ಸ್ ಲೇಪಿತ ಚಾಕೊಲೇಟ್‌ಗಳ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್‌ಗಳನ್ನು ‘ಬ್ಯಾಂಗ್’ ಚಾಕೊಲೇಟ್‌ಗಳ